ವೈವಿಧ್ಯಗೊಳಿಸಿದ ಆಹಾರ ಕ್ರಮಗಳು ಮಕ್ಕಳ ಪ್ರೋಟೀನ್‌ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು  

ಶಾಲಾ ಮಕ್ಕಳಲ್ಲಿ ಇಂತಹ ಪೌಷ್ಟಿಕಾಂಶದ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವು 2001 ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಪರಿಚಯಿಸಿತು.

ವೈವಿಧ್ಯಗೊಳಿಸಿದ ಆಹಾರ ಕ್ರಮಗಳು ಮಕ್ಕಳ ಪ್ರೋಟೀನ್‌ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು  
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 27, 2022 | 7:27 PM

ಸಾಕಷ್ಟು ಪ್ರಮಾಣದ ಆಹಾರ ಲಭ್ಯತೆಯ ಹೊರತಾಗಿಯೂ, ಭಾರತದ ಮಕ್ಕಳು ಕಳಪೆ ಪೋಷಣೆಯಿಂದ ಬಳಲುತ್ತಿದ್ದಾರೆ. ಪ್ರೋಟೀನ್ಶಕ್ತಿ ಅಪೌಷ್ಟಿಕತೆಯ ಭೀಕರ ಕಾಯಿಲೆಯಿಂದಾಗಿ 2014 15ರಲ್ಲಿ ಶೇ37ರಷ್ಟು ಭಾರತೀಯ ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದರೆ, ಶೇ 21ರಷ್ಟು ಮಕ್ಕಳು ಕೃ‍ಶವಾದ ದೇಹ ಹೊಂದಿದ್ದರು. ಮತ್ತು ಶೇ 34ರಷ್ಟು ಮಕ್ಕಳು ಕಡಿಮೆ ತೂಕ ವನ್ನು ಹೊಂದಿದ್ದರು. ಸಾಂಕ್ರಾಮಿಕ ಸಮಯದಲ್ಲಿಇದು ಉಲ್ಬಣಗೊಂಡಿರುವ ಸಾಧ್ಯತೆಯಿದೆ ಎನ್ನುವುದು ದುಃಖದ ಸಂಗತಿಯಾಗಿದೆ. ಭಾರತೀಯ ಮನೆಗಳಲ್ಲಿ ಅಕ್ಕಿ ಮತ್ತು ಗೋಧಿಯಂತಹ ಪ್ರಧಾನ ಧಾನ್ಯಗಳ ಸೇವನೆಯ ಮೇಲಿನ ಪಟ್ಟುಬಿಡದ ಗಮನವು ಆಹಾರ ಕ್ರಮಗಳಲ್ಲಿನ ವೈವಿಧ್ಯತೆಯನ್ನು ಮತ್ತು ದೇಹದ ಕಾರ್ಯಗಳನ್ನು ಸಮತೋಲನಗೊಳಿಸಲು ಸಮಾನವಾಗಿ ನಿರ್ಣಾಯಕವಾಗಿರುವ ಇತರ ಪೋಷಕಾಂಶಗಳ ಸೇವನೆಯನ್ನು ತಡೆಯುತ್ತಿದೆ. ರಾಷ್ಟ್ರೀಯ ನ್ಯೂಟ್ರಿಷನ್ಮಾನಿಟರಿಂಗ್ಬೋರ್ಡ್‌ನ (ಎನ್‌ಎನ್‌ಎಮ್‌ಬಿ) ಸಮೀಕ್ಷೆಗಳು ಭಾರತೀಯ ಆಹಾರಕ್ರಮಗಳು ತಮ್ಮ ಪ್ರೋಟೀನ್‌ನ ಸುಮಾರು ಶೇ 60ರಷ್ಟನ್ನು ಕಡಿಮೆ ಜೀರ್ಣ ಸಾಧ್ಯತೆ ಮತ್ತು ಗುಣಮಟ್ಟವನ್ನು ಹೊಂದಿರುವ ಧಾನ್ಯಗಳಿಂದ ಪಡೆಯುತ್ತವೆ ಎಂದು ತೋರಿಸುತ್ತವೆ.

“ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಸಾಕಷ್ಟು ಹೆಚ್ಚಾಗಿ ಮತ್ತು ವ್ಯಾಪಕವಾಗಿ ಇರುವುದರಿಂದ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ವಿಶೇಷ ಗುರಿಯನ್ನು ಹೊಂದಿದ ಶೈಕ್ಷಣಿಕ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು. ನಾವು ತಿನ್ನುವ ಆಹಾರದ ಗುಣಮಟ್ಟಕ್ಕೆ ಮೌಲ್ಯವನ್ನು ಸೇರಿಸುವುದು ಹಾಗೂ ಸಿರಿಧಾನ್ಯಗಳು ಮತ್ತು ಬೇಳೆ-ಕಾಳುಗಳಂತಹ ವೈವಿಧ್ಯಮಯ ಮೂಲಗಳನ್ನು ಬಳಸುವುದು ಬಹಳ ಮುಖ್ಯ ಎಂದು ಐಸಿಎಆರ್​ ನ್ಯಾಷನಲ್ಬ್ಯೂರೋ ಆಫ್ಪ್ಲಾಂ ಟ್ಜೆನೆಟಿ ಕ್ರಿಸೋರ್ಸಸ್‌ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ಕೆ.ಸಿ.ಬನ್ಸಲ್ ಹೇಳುತ್ತಾರೆ.

ಇದನ್ನೂ ಓದಿ: IPL 2022 Qualifier 2: RR vs RCB: ಇಂದು ಕಣಕ್ಕಿಳಿಯುವ ಕಲಿಗಳು ಇವರೇ..!

ಶಾಲಾ ಮಕ್ಕಳಲ್ಲಿ ಇಂತಹ ಪೌಷ್ಟಿಕಾಂಶದ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವು 2001 ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಪರಿಚಯಿಸಿತು. ಈ ಅತ್ಯಂತ ಪರಿಣಾಮಕಾರಿ ಯೋಜನೆಯು ಸರಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳ ಮಕ್ಕಳಿಗೆ ಪ್ರತಿದಿನ ಮಧ್ಯಾಹ್ನದ ಊಟಕ್ಕೆ ಆಗತಾನೇ ಬೇಯಿಸಿದ ಮತ್ತು ಪೌಷ್ಟಿಕಾಂಶ ಭರಿತ ಆಹಾರವನ್ನುನೀಡುವುದನ್ನು ಖಚಿತಪಡಿಸುತ್ತದೆ. ಶಾಲಾ ಮಕ್ಕಳಿಗೆ ಬಡಿಸುವ ಊಟದಲ್ಲಿ ಪ್ರೋಟೀನ್‌ನ ಗುಣಮಟ್ಟವನ್ನು ಹೆಚ್ಚಿಸಲು ಮಧ್ಯಾಹ್ನದ ಊಟದಲ್ಲಿ ಪಿಎಮ್‌ಪೋಶಣ್‌ ಯೋಜನೆಯಡಿ ಯಲ್ಲಿ ಸಿರಿಧಾನ್ಯಗಳನ್ನು ಸೇರಿಸಬೇಕೆಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರಕಾರವು ವಿನಂತಿಮಾಡಿದೆ.

ಸಸ್ಯಾಧಾರಿತ ಪ್ರೋಟೀನ್ಪರ್ಯಾಯಗಳು ಮತ್ತು ಸೋಯಾ ಪ್ರೋಟೀನ್​ ಮಕ್ಕಳಿಗೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿವೆ. ಮತ್ತು ಈ ಉತ್ಪನ್ನಗಳನ್ನು ಸರಕಾರವು ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಯೋಜನೆಯಂತಹ ಸರಕಾರಿ ಕಾರ್ಯಕ್ರಮಗಳಲ್ಲಿ ಅಳವಡಿಸಬೇಕೆಂದು ದೇಶದ ಆಹಾರ ವಿಜ್ಞಾನಿಗಳು ಹಲವು ವರ್ಷಗಳಿಂದ ಶಿಫಾರಸು ಮಾಡುತ್ತಿದ್ದಾರೆ.

ಸಸ್ಯಾಧಾರಿತ ಮಾಂಸದಂತಹ ಉತ್ಪನ್ನಗಳು ಸೋಯಾನಗೆಟ್ಸ್‌ಗಳಂತಹ ಹಿಂದಿನ ಪೀಳಿಗೆಯ ಉತ್ಪನ್ನಗಳನ್ನು ಹಿಂದಿಕ್ಕಿವೆ. ಅವು ಮಾಂಸ ಮತ್ತು ಕೋಳಿಯಿಂದ ತಯಾರಿಸಲಾದ ಆಹಾರಗಳ ರುಚಿಯನ್ನುನೀಡುತ್ತಿವೆ. ಸರಿಯಾದ ರುಚಿಯೊಂದಿಗೆ ಸರಿಯಾದ ಬೆಲೆಯಲ್ಲಿ ಪ್ರೋಟೀನ್‌ಗಳನ್ನು ಪಡೆಯಲು ಇದೊಂದು ಅವಕಾಶವಾಗಬೇಕು. ಮತ್ತು ಸರ್ಕಾರವು ಇಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಬಹುದಾಗಿದೆ. ಉದಾಹರಣೆಗೆ, ಈ ಹೊಸ ಆಹಾರಗಳನ್ನು ಮಧ್ಯಾಹ್ನದ ಊಟದಂತಹ ಪೌಷ್ಟಿಕಾಂಶ ಭದ್ರತಾ ಯೋಜನೆಗಳಲ್ಲಿ ಅಳವಡಿಸಬಹುದು ಎಂದು ಗುಡ್ಫುಡ್ಇ ನ್ಸ್‌ಟಿಟ್ಯೂಟ್​ ಆಫ್​ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವರುಣ್ದೇಶ ಪಾಂಡೆ ಹೇಳುತ್ತಾರೆ.

ಕೇವಲ ಶಾಲೆಗಳಲ್ಲಿ ಮಾತ್ರವಲ್ಲ, ಮನೆಗಳಲ್ಲಿಯೂ ಸಹ, ಮಕ್ಕಳ ವಿಶಿಷ್ಟ ಆಹಾರ ಕ್ರಮಗಳಲ್ಲಿ ಅವರ ಸಮಗ್ರ ಬೆಳವಣಿಗೆಗೆ ಅಗತ್ಯವಿರುವ ಸರಿಯಾದ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳ ಕೊರತೆಯಿದೆ. ದೇಶಪಾಂಡೆಯವರ ಪ್ರಕಾರ, ಇಂದು ಆಹಾರ ವಿಜ್ಞಾನವು ಅನ್ನ, ಚಪಾತಿ, ಮುಂತಾದ ಪ್ರಧಾನ ಆಹಾರಗಳಲ್ಲಿ ಪ್ರೋಟೀನ್‌ಗಳ ಮಟ್ಟವನ್ನು ಹೆಚ್ಚಿಸುವ ಮೂಲಕ ಅವುಗಳಿಗೆ ಬಲತುಂಬುವ ವಿಧಾನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮಾಂಸ, ಮೊಟ್ಟೆಗಳು, ಮತ್ತು ಹಾಲಿನ ಪದಾರ್ಥಗಳಂತಹ ಸಾಮಾನ್ಯ ಮೂಲಗಳ ಹೊರತಾಗಿ ಅಣಕು ಮಾಂಸಗಳೂ ಸಹ ಸಸ್ಯಾಹಾರಿ ಮನೆಗಳಲ್ಲೂ ಸುಲಭವಾಗಿ ಸೇವಿಸಬಹುದಾದ ಉತ್ತಮ ಪರ್ಯಾಯಗಳಾಗಿವೆ.

ಜನಪ್ರಿಯ ನಟಿ ಮತ್ತು ದೈಹಿಕ ಕ್ಷಮತೆಯ ಉತ್ಸಾಹಿ ಮಂದಿರಾ ಬೇಡಿ ಕೂಡ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು ಅಣಕು ಮಾಂಸ ಮತ್ತು ಸೋಯಾಬೀನ್‌ನ ಪ್ರಾಮುಖ್ಯತೆಯನ್ನು ಅನುಮೋದಿಸಿದ್ದಾರೆ. “ನನಗೆ ಪ್ರತಿ ದಿನಕ ನಿಷ್ಠ20-30 ಗ್ರಾಂಪ್ರೋಟೀನ್ಬೇಕಾಗುತ್ತದೆ. ಹಿಂದೆ, ಕೇವಲ ಮೊಟ್ಟೆ ಮತ್ತು ಚೀಸ್ಮಾತ್ರ ನನ್ನ ಆಯ್ಕೆಗಳಾಗಿದ್ದವು. ಇಂದು ನನ್ನ ಆದ್ಯತೆಯು ಅಣಕು ಮಾಂಸ ಮತ್ತು ಸೋಯಾಗೆ ಬದಲಾಗಿದ್ದು, ಅವುಗಳು ಒದಗಿಸುವ ಉತ್ತಮ ಗುಣಮಟ್ಟದ ಪ್ರೋಟೀನ್‌ಗಳೇ ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅವರು.

ಪ್ರಾಣಿ ಉತ್ಪನ್ನಗಳಿಗೆ ಉತ್ತಮ ಪರ್ಯಾಯವಾಗಿರುವ ಪ್ರೋಟೀನ್-ಬಲವರ್ಧಿತ ಆಹಾರಗಳ ಬಗ್ಗೆ ಸಸ್ಯಾಹಾರಿ ಕುಟುಂಬಗಳಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ.  ಇದು ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವುದಲ್ಲದೇ ವಯಸ್ಸಾದಂತೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಶಪಾಂಡೆಯವರು ಹೇಳುತ್ತಾರೆ, “ಆಹಾರ ವಿಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ, ಉತ್ತಮ ರುಚಿಯನ್ನು ಹೊಂದಿರುವ, ಮತ್ತು ಕೈ ಗೆಟುಕುವ ಬೆಲೆಯಲ್ಲಿ ಸಿಗುವ ಆಹಾರದ ಉತ್ಪಾದನೆಯನ್ನು ಸಾಧ್ಯವಾಗಿಸಲು ಸಮುದಾಯ, ಉದ್ಯಮ, ಮತ್ತು ಸರ್ಕಾರಗಳು ಒಗ್ಗೂಡುವುದು ಅವುಗಳ ಜವಾಬ್ದಾರಿಯಾಗಿದೆ” ಎಂದು. ಕುಟುಂಬಗಳೂ ಸಹ ಹೊಸಪ್ರೋಟೀನ್‌ ಮೂಲಗಳ ಬಗ್ಗೆ ಸ್ವತ: ಶಿಕ್ಷಣವನ್ನು ಹೊಂದಿ ಮನೆಯಲ್ಲಿನ ಆಹಾರ ಪದ್ಧತಿಗಳು ಸಮತೋಲನದಿಂದ ಕೂಡಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಸುಪ್ರ ಸಿದ್ಧ ಪೋಷಕಾಂಶ ಪ್ರಚಾರಕರು ಮತ್ತು ಒನ್‌ಹೆಲ್ತ್‌ ಪ್ಲಾಟ್‌ಫಾರ್ಮ್ಸ್‌ ಸಂಸ್ಥೆಯ ಸಂಸ್ಥಾಪಕರಾದ ಡಾ. ಶಿಖಾ ಶರ್ಮರವರು ಧಾನ್ಯಗಳು ಮತ್ತು ವಿವಿಧ ಬಗೆಯ ತರಕಾರಿಗಳನ್ನು ಹೊಂದಿರುವ ವೈವಿಧ್ಯಗೊಳಿಸಿದ ಆಹಾರಕ್ರಮಗಳನ್ನು ಅನುಸರಿಸುವಂತೆ  ಸಲಹೆ ನೀಡುತ್ತಾರೆ. ಕುಟುಂಬಗಳು ವಿವಿಧ ಬಗೆಯ ತರಕಾರಿಗಳನ್ನು ತಮ್ಮ ಪ್ರತಿ ದಿನದ ಆಹಾರದಲ್ಲಿ ಸೇವಿಸುವ ಪ್ರಯತ್ನ ಮಾಡಬೇನ್ನುವ ಹಾಗೂ ವಿವಿಧ ಬಗೆಯ ಖಾದ್ಯ ತೈಲಗಳಾದ ಸೂರ್ಯಕಾಂತಿ ಎಣ್ಣೆ, ತುಪ್ಪ, ಮತ್ತು ಸಾಸಿವೆ ಎಣ್ಣೆಗಳನ್ನು ತಮ್ಮ ಅಡುಗೆಯಲ್ಲಿ ಬಳಸಬೇಕೆನ್ನುವ ಸಲಹೆಗಳನ್ನು ಅವರು ನೀಡುತ್ತಾರೆ. ಸೌತೇಕಾಯಿ ಮತ್ತು ಕ್ಯಾರೆಟ್‌ಗಳನ್ನು ಉಪಯೋಗಿಸಿ ತಯಾರಿಸಲಾದ ಸಾಲಡ್‌ಗಳನ್ನು ಸೇವಿಸುವುದು ಬಹಳ ಮುಖ್ಯವೆಂದು ಅವರು ಹೇಳುತ್ತಾರೆ.

ಚಿಕ್ಕ ವಯಸ್ಸಿನಿಂದಲೇ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವ ಆಹಾರ ಶಿಕ್ಷಣವನ್ನು ಶಾಲಾ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂದು ಡಾ. ಶರ್ಮ ಹೇಳುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada