ಡಿಜೆ ವಿಚಾರಕ್ಕೆ ಗಲಾಟೆ; ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಆಗ್ರಾದಲ್ಲಿ ಡಿಜೆ ವಿಚಾರದಲ್ಲಿ ವಾಗ್ವಾದ ನಡೆದ ನಂತರ ಜನರ ಗುಂಪೊಂದು ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಿ ವರನನ್ನು ಕುದುರೆಯಿಂದ ಕೆಳಗೆ ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆ ಮೆರವಣಿಗೆಯಲ್ಲಿದ್ದ ಜನರು ಮತ್ತು ಸ್ಥಳದಲ್ಲಿ ವಾಸಿಸುತ್ತಿದ್ದ ಜನರ ನಡುವೆ ಡಿಜೆ ಹಾಕಿದ್ದ ಬಗ್ಗೆ ವಾಗ್ವಾದ ನಡೆದಿದೆ. ವಾಗ್ವಾದ ಹೆಚ್ಚಾದ ನಂತರ, ಅವರು ಕೋಲುಗಳು ಮತ್ತು ಹರಿತವಾದ ಆಯುಧಗಳೊಂದಿಗೆ ಬಂದು ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಿದ್ದಾರೆ.
ಆಗ್ರಾ, ಏಪ್ರಿಲ್ 17: ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಮದುವೆಯ ಮೆರವಣಿಗೆಯಲ್ಲಿ ಡಿಜೆ ಮ್ಯೂಸಿಕ್ ಹಾಕಿದ ಬಗ್ಗೆ ಎರಡು ಗುಂಪುಗಳ ನಡುವಿನ ವಿವಾದದ ನಂತರ ಜನರ ಗುಂಪೊಂದು ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಿದೆ. ಡಿಜೆ ಹಾಕಬೇಡಿ ಎಂದರೂ ಕೇಳದ್ದಕ್ಕೆ ಜನರ ಗುಂಪು ಕೋಲುಗಳನ್ನು ಹಿಡಿದುಕೊಂಡು ಬಂದು ವರನ ಕಾಲರ್ ಹಿಡಿದು ಕುದುರೆಯಿಂದ ಕೆಳಗೆ ಎಳೆದಿದ್ದಾರೆ. ವರ ತಪ್ಪಾಯಿತೆಂದು ಕೈ ಮುಗಿಯುವುದನ್ನು, ಜನರು ಭಯದಿಂದ ಕಿರುಚಾಡುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ