Daily Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
18 ಏಪ್ರಿಲ್ ದಿನಭವಿಷ್ಯದಲ್ಲಿ 12 ರಾಶಿಗಳಿಗೆ ಸಂಬಂಧಿಸಿದ ಭವಿಷ್ಯವನ್ನು ತಿಳಿಸಲಾಗಿದೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳಿಗೆ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಏನು ಉಂಟಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರು, ಏಪ್ರಿಲ್ 18: ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ಪಂಚಮಿ, ಮೂಲ ನಕ್ಷತ್ರ, ಪರಿಘ ಯೋಗ, ಮತ್ತು ತೈತಲಕರಣ. ರಾಹುಕಾಲ 10:44 ರಿಂದ 12:17 ರವರೆಗೆ ಮತ್ತು ಶುಭ ಕಾಲ 12:19 ರಿಂದ 1:52 ರವರೆಗೆ ಇರಲಿದೆ. ಸೂರ್ಯ ಮೇಷ ರಾಶಿಯಲ್ಲೂ, ಚಂದ್ರ ಧನುಸ್ಸು ರಾಶಿಯಲ್ಲೂ ಸಂಚರಿಸುತ್ತಿದ್ದಾನೆ. ದ್ವಾದಶ ರಾಶಿಗಳ ಫಲಾಫಲಗಳ ಕುರಿತಾಗಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.