AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Traffic Advisory: ಶನಿವಾರ, ಭಾನುವಾರ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಬೆಂಗಳೂರು ಸಂಚಾರ ಸಲಹೆ: ಬೆಂಗಳೂರು ನಗರದ ಪ್ರಮುಖ ಪ್ರದೇಶವೊಂದರ ರಸ್ತೆಗಳಲ್ಲಿ ಶನಿವಾರ ಹಾಗೂ ಭಾನುವಾರ ಸಂಚಾರ ನಿರ್ಬಂಧ ಹೇರಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಬಿಡುಗಡೆ ಮಾಡಿದ್ದಾರೆ. ಸಂಚಾರ ನಿರ್ಬಂಧಿತ ರಸ್ತೆಗಳು, ಪರ್ಯಾಯ ಮಾರ್ಗಗಳ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ನೀಡಿರುವ ಮಾಹಿತಿ ಇಲ್ಲಿದೆ.

Bengaluru Traffic Advisory: ಶನಿವಾರ, ಭಾನುವಾರ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ
ಬೆಂಗಳೂರು ಸಂಚಾರ ಸಲಹೆ
Ganapathi Sharma
|

Updated on: Apr 18, 2025 | 7:00 AM

Share

ಬೆಂಗಳೂರು, ಎಪ್ರಿಲ್ 18: ಬೆಂಗಳೂರು ಸಂಚಾರ ಪೊಲೀಸ್ (Bengaluru Traffic Police) ಪೂರ್ವ ವಿಭಾಗದ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಏಪ್ರಿಲ್ 19 ಮತ್ತು 20ರಂದು ಸಂಚಾರ ನಿರ್ಬಂಧ ವಿಧಿಸಲಾಗಿದೆ. ವಿವೇಕಾನಂದ ರಸ್ತೆ (Vivekananda Road) ಸೋಮೇಶ್ವರ ದೇವಸ್ಥಾನದ (Someshara Temple) ಉತ್ಸವದ ಪ್ರಯುಕ್ತ ಬೆಂಗಳೂರು ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ವಿಚಾರವಾಗಿ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ಸೋಮೆಶ್ವರ ದೇವಸ್ಥಾನದ ವತಿಯಿಂದ ಸೋಮೆಶ್ವರ ದೇವರ ರಥೋತ್ಸವ ಮತ್ತು ದೇವರ ಪಲ್ಲಕ್ಕಿಗಳ ಉತ್ಸವದ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.

ಯಾವೆಲ್ಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ?

  • ಹಳೆ ಮದ್ರಾಸ್ ರಸ್ತೆ ಆಂಜನೇಯ ಜಂಕ್ಷನ್‌ನಿಂದ ರಾಮಯ್ಯ ಜಂಕ್ಷನ್‌ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. (ಎರಡೂ ದಿಕ್ಕಿನಲ್ಲೂ).
  • ತಾಮರೈ ಕಣ್ಣನ್ ಜಂಕ್ಷನ್ ಬಳಿ ಬಲತಿರುವು ಪಡೆಯುವುದನ್ನು ನಿರ್ಬಂಧಿಸಲಾಗಿರುತ್ತದೆ.
  • ಬೇಗಂ ಮಹಲ್ ಜಂಕ್ಷನ್‌ ನಿಂದ ರಾಮಯ್ಯ ಜಂಕ್ಷನ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
  • ಜೀವನ್ ಭೀಮಾ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಸಾಗರ ಜಂಕ್ಷನ್‌ನಿಂದ ಆದರ್ಶ ಜಂಕ್ಷನ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ಪರ್ಯಾಯ ರಸ್ತೆಗಳು ಯಾವುವು?

  • ಇಂದಿರಾನಗರದ 80 ಅಡಿ ರಸ್ತೆ ಮತ್ತು 100 ಅಡಿ ರಸ್ತೆಯಿಂದ ಟ್ರಿನಿಟಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಆಂಜನೇಯ ಜಂಕ್ಷನ್ ಬಳಿ ನೇರವಾಗಿ ಸಾಗಿ ಶೆನ್ಸಿಂಗ್‌ಟನ್ ರಸ್ತೆಯ ಮೂಲಕ ಗುರುದ್ಧಾರ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಗಂಗಾಧರಚೆಟ್ಟಿ ರಸ್ತೆ ಮೂಲಕ ಮುಂದೆ ಸಂಚರಿಸುವುದು.
  • ಟ್ರಿನಿಟಿ ಜಂಕ್ಷನ್‌ನಿಂದ ಆಂಜನೇಯ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಕಾಮದೇ ಬಳಿ ಎಡ ತಿರುವು ಪಡೆದು ಗುರುದ್ವಾರ ಜಂಕ್ಷನ್ ತಲುಪಿ ಹಳೆ ಮದ್ರಾಸ್ ರಸ್ತೆಯ ಮೂಲಕ ಮುಂದೆ ಸಂಚರಿಸುವುದು.
  • ತಾಮರೈ ಕಣ್ಣನ್ ಜಂಕ್ಷನ್ ಬಳಿ ಬಲ ತಿರುವು ನಿರ್ಬಂಧಿಸಿರುವ ಕಾರಣ ವಾಹನ ಸವಾರರು ತಾಮರೈ ಕಣ್ಣನ್ ಜಂಕ್ಷನ್‌ನಿಂದ ನೇರವಾಗಿ ಚಲಿಸಿ ಹಳೆ ಮದ್ರಾಸ್ ರಸ್ತೆಯ ಡಬಲ್ ರಸ್ತೆ ಬಳಿ ಬಲ ತಿರುವು ಪಡೆದು ಮುಂದೆ ಸಂಚರಿಸುವುದು.
  • ಬೇಗಂ ಮಹಲ್ ಜಂಕ್ಷನ್‌ನಿಂದ ರಾಮಯ್ಯ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಬೇಗಂ ಮಹಲ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಗುರುದ್ವಾರ ಜಂಕ್ಷನ್ ತಲುಪಿ ಹಳೆ ಮದ್ರಾಸ್ ರಸ್ತೆಯ ಮೂಲಕ ಮುಂದೆ ಸಂಚರಿಸುವುದು.
  • ಶಾಂತಿಸಾಗರ ಜಂಕ್ಷನ್‌ನಿಂದ ಆದರ್ಶ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಶಾಂತಿಸಾಗರ ಜಂಕ್ಷನ್ ಬಳಿ ಬಲ ತಿರುವು ಪಡೆದು ಹಳೆ ಮದ್ರಾಸ್ ರಸ್ತೆ ಮೂಲಕ ಮುಂದೆ ಸಂಚರಿಸುವುದು.

ಇದನ್ನೂ ಓದಿ: ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್​: ಲಾರಿ ಮಾಲೀಕರ ಮುಷ್ಕರ ವಾಪಸ್​

ಇದನ್ನೂ ಓದಿ
Image
ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಕೋಲಾಹಲ: ಇಲ್ಲಿದೆ ಇನ್​ಸೈಡ್ ಡಿಟೇಲ್ಸ್
Image
ಜಾತಿ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ: ಜಾತಿ ಗಣತಿಯಲ್ಲಿ ಒಳಪಂಗಡ ಗೊಂದಲ
Image
ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್​: ಲಾರಿ ಮಾಲೀಕರ ಮುಷ್ಕರ ವಾಪಸ್​
Image
ಮುಸ್ಲಿಮರಲ್ಲಿಯೂ 93 ಉಪಜಾತಿಗಳಿವೆ: ಜಯಪ್ರಕಾಶ್ ಹೆಗ್ಡೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ