IPL 2022 Qualifier 2: RR vs RCB: ಇಂದು ಕಣಕ್ಕಿಳಿಯುವ ಕಲಿಗಳು ಇವರೇ..!

RR vs RCB Playing 11: ಉಭಯ ತಂಡಗಳು ಬಲಿಷ್ಠವಾಗಿದೆ. ಏಕೆಂದರೆ ಪ್ಲೇಆಫ್​ ಆಡಬೇಕಿದ್ದರೆ ಆ ತಂಡಗಳು ಬಲಿಷ್ಠ ಆಗಿರಲೇಬೇಕು. ಇದಾಗ್ಯೂ ಐಪಿಎಲ್ ಇತಿಹಾಸ ಅಂಕಿ ಅಂಶಗಳನ್ನು ಗಮನಿಸಿದರೆ ಆರ್​ಸಿಬಿ ರಾಜಸ್ಥಾನ್ ವಿರುದ್ದ ಮೇಲುಗೈ ಹೊಂದಿದೆ.

IPL 2022 Qualifier 2: RR vs RCB: ಇಂದು ಕಣಕ್ಕಿಳಿಯುವ ಕಲಿಗಳು ಇವರೇ..!
RR vs RCB Playing 11
TV9kannada Web Team

| Edited By: Zahir PY

May 27, 2022 | 7:06 PM

IPL 2022: ಐಪಿಎಲ್ ಸೀಸನ್​ 15ರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ (RR vs RCB) ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​ ಬೌಲಿಂಗ್ ಆಯ್ದುಕೊಂಡಿದ್ದಾರೆ. ವಿಶೇಷ ಎಂದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಸಿದ್ದರೂ, ಆರ್​ಸಿಬಿ ತಂಡವು ಗ್ರೂಪ್​-ಎ ನಲ್ಲಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯವಾಡಿತ್ತು. ಅಂದರೆ ಗ್ರೂಪ್ ಎ ಮತ್ತು ಗ್ರೂಪ್ ಬಿ ನಡುವೆ ಒಂದು ತಂಡದ ವಿರುದ್ದ 2 ಪಂದ್ಯವಾಡಬೇಕಿತ್ತು. ಹೀಗೆ ಆರ್​ಸಿಬಿ ತಂಡಕ್ಕೆ ಎದುರಾಳಿಯಾಗಿ ಸಿಕ್ಕಿದ ರಾಜಸ್ಥಾನ್ ರಾಯಲ್ಸ್ ತಂಡವೇ ಇದೀಗ ಮೂರನೇ ಬಾರಿಗೆ ಎದುರಾಗಿದೆ.

ಇಲ್ಲಿ ಉಭಯ ತಂಡಗಳು ಬಲಿಷ್ಠವಾಗಿದೆ. ಇದಾಗ್ಯೂ ಐಪಿಎಲ್ ಇತಿಹಾಸ ಅಂಕಿ ಅಂಶಗಳನ್ನು ಗಮನಿಸಿದರೆ ಆರ್​ಸಿಬಿ ರಾಜಸ್ಥಾನ್ ವಿರುದ್ದ ಮೇಲುಗೈ ಹೊಂದಿದೆ. ಅಂದರೆ ಉಭಯ ತಂಡಗಳು ಆಡಿರುವ 27 ಪಂದ್ಯಗಳಲ್ಲಿ ಆರ್​ಸಿಬಿ 13 ಬಾರಿ ಗೆದ್ದಿದೆ. ಇನ್ನು ರಾಜಸ್ಥಾನ್ ರಾಯಲ್ಸ್ 11 ಬಾರಿ ಜಯ ಸಾಧಿಸಿದೆ. ಇದು ಹಳೆಯ ಅಂಕಿ ಅಂಶಗಳಾದರೆ, ಇತ್ತೀಚಿನ ಅಂಕಿ ಅಂಶದಲ್ಲೂ ಆರ್​ಸಿಬಿ ತಂಡವೇ ಮುಂದಿದೆ.

ಅಂದರೆ ಕಳೆದ ಸೀಸನ್ ಹಾಗೂ ಈ ಸೀಸನ್​ನಲ್ಲಿನ ಅಂಕಿ ಅಂಶ ತೆಗೆದುಕೊಂಡರೆ, 4 ಪಂದ್ಯಗಳಲ್ಲಿ ಆರ್​ಸಿಬಿ ತಂಡ 3 ಬಾರಿ ಗೆದ್ದಿದೆ. 2021 ರ ಸೀಸನ್​ನಲ್ಲಿ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯಗಳನ್ನು ಗೆದ್ದುಕೊಂಡರೆ, ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿತ್ತು. ಆದರೆ ಈ ಗೆಲುವು ಭರ್ಜರಿ ಗೆಲುವಾಗಿರಲಿಲ್ಲ ಎಂಬುದು ವಿಶೇಷ. ಅಂದರೆ ಇಲ್ಲಿ ಅಂಕಿ ಅಂಶಗಳ ಪ್ರಕಾರ ಆರ್​ಸಿಬಿ ಬಲಿಷ್ಠವಾಗಿದ್ದರೂ ರಾಜಸ್ಥಾನ್ ರಾಯಲ್ಸ್ ಉತ್ತಮ ಪೈಪೋಟಿ ನೀಡಿರುವುದು ಸ್ಪಷ್ಟ.

ಏಕೆಂದರೆ ಈ ಬಾರಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್​ ಕಲೆಹಾಕಿತು. ಇಲ್ಲಿ ಆರ್​ಸಿಬಿ ಬೌಲರ್​ಗಳು ಪಡೆದಿರುವುದು ಕೇವಲ 3 ವಿಕೆಟ್​ಗಳನ್ನು ಮಾತ್ರ ಎಂಬುದು ಉಲ್ಲೇಖಾರ್ಹ. ಇನ್ನು 170 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಆರ್​ಸಿಬಿ ಗೆಲುವು ದಾಖಲಿಸಿದ್ದು ಕೊನೆಯ ಓವರ್​ನಲ್ಲಿ. ಅದು ಕೂಡ ಶಹಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ಅವರ ಎಚ್ಚರಿಕೆಯ ಆಟದಿಂದ ಎಂಬುದು ವಿಶೇಷ. ಅಂದರೆ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಆರ್​ಸಿಬಿ ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳು ವಿಫಲರಾಗಿದ್ದರು. ಇದಾಗ್ಯ 6 ವಿಕೆಟ್ ಕಳೆದುಕೊಂಡು ಆರ್​ಸಿಬಿ 4 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.

ಇನ್ನು 2ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ರಾಜಸ್ಥಾನ್ ರಾಯಲ್ಸ್​ ಸಾಧಿಸಿತ್ತು. ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ನಡೆಸಿದ್ದ ಆರ್​ಸಿಬಿ ಬೌಲರ್​ಗಳು ರಾಜಸ್ಥಾನ್ ತಂಡವನ್ನು ಕೇವಲ 144 ರನ್​ಗಳಿಗೆ ನಿಯಂತ್ರಿಸಿದ್ದರು. 145 ರನ್​ಗಳ ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿಯನ್ನು ಅತ್ಯುತ್ತಮ ಬೌಲಿಂಗ್ ಮೂಲಕ ನಿಯಂತ್ರಿಸುವಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿತ್ತು. ಅಂದರೆ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 115 ರನ್​ಗಳಿಗೆ ಆಲೌಟ್​ ಆಗುವ ಮೂಲಕ 29 ರನ್​ಗಳಿಂದ ಸೋಲನುಭವಿಸಿತ್ತು.  ಹೀಗಾಗಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಅದರಂತೆ ಇಂದು ಕಣಕ್ಕಿಳಿಯುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೆಡ್ ಮೆಕಾಯ್, ಯುಜ್ವೇಂದ್ರ ಚಾಹಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಮೊಹಮ್ಮದ್ ಸಿರಾಜ್

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada