ಬಸನಗೌಡ ಯತ್ನಾಳ್ ಉಚ್ಚಾಟನೆಯಿಂದ ಕಾರ್ಯಕರ್ತರಲ್ಲಿನ ಒಗ್ಗಟ್ಟು ಪ್ರಭಾವಕ್ಕೊಳಗಾಗಿಲ್ಲ: ಬಿವೈ ವಿಜಯೇಂದ್ರ
ಬಿಜೆಪಿ ನಾಯಕರ ನಡುವೆ ಸಣ್ಣಪುಟ್ಟ ಗೊಂದಲಗಳಿದ್ದರೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ ಮತ್ತು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದು ಹೇಳಿದ ವಿಜಯೇಂದ್ರ ಅವರಿಗೆ, ಬಸನಗೌಡ ಪಾಟೀಲ್ ಯತ್ನಾಳ್ ವಾಪಸ್ಸು ಬರುತ್ತೇನೆ ಅಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಾ ಅಂತ ಪತ್ರಕರ್ತರೊಬ್ಬರು ಕೇಳಿದಾಗ ಎರಡೂ ಕೈ ಜೋಡಿಸಿ ಧನ್ಯವಾದ ಅಂತ ಹೇಳಿ ಮುನ್ನಡೆದರು.
ವಿಜಯಪುರ, ಏಪ್ರಿಲ್ 17: ಭರ್ಜರಿ ಸ್ವಾಗತದೊಂದಿಗೆ ವಿಜಯಪುರ ನಗರ ಪ್ರವೇಶಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಧ್ಯಮದವರು ಕೇಳಬಹುದಾದ ಪ್ರಶ್ನೆಯನ್ನು ಮೊದಲೇ ಗ್ರಹಿಸಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಉಚ್ಚಾಟಿಸಿದ್ದರಿಂದ ಪಕ್ಷಕ್ಕೆ ಲಾಭವಾಗಿದೆ ಅಂತ ತಾನ್ಯಾವತ್ತೂ ಹೇಳಿಲ್ಲ, ಈ ಬೆಳವಣಿಗೆಯು ಕಾರ್ಯಕರ್ತರ ನಡುವಿನ ಒಗ್ಗಟ್ಟಿನ ಮೇಲೆ ಯಾವುದೇ ಪ್ರಭಾವ ಬೀರಿಲ್ಲ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕೆನ್ನುವುದು ಎಲ್ಲರ ಸಂಕಲ್ಪವಾಗಿದೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆ ನಿಟ್ಟಿನೆಡೆ ಕಾರ್ಯೋನ್ಮುಖರಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಕಳೆದ 20 ತಿಂಗಳಲ್ಲಿ ಸಿದ್ದರಾಮಯ್ಯ ಡೀಸೆಲ್ ಬೆಲೆ ₹ 5.50 ಮತ್ತು ಪೆಟ್ರೋಲ್ ಬೆಲೆ ₹ 3 ಹೆಚ್ಚಿಸಿದ್ದಾರೆ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
