ಜನಾಕ್ರೋಶ ಯಾತ್ರೆ: ವಿಜಯೇಂದ್ರ-ಯತ್ನಾಳ್ ನಡುವಿನ ಪ್ರತಿಷ್ಠೆಯ ಕಾಳಗಕ್ಕೆ ಇಂದು ವಿಜಯಪುರ ಸಾಕ್ಷಿಯಾಗಲಿದೆ
ಬಿಜೆಪಿ ಸಮಾವೇಶವನ್ನು ಇಂದು ಸಾಯಂಕಾಲ 4 ಗಂಟೆಗೆ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ. ನಿನ್ನೆ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ಅಲ್ಲಲ್ಲಿ ನೀರು ನಿಂತಿದೆ. ಸಾಯಂಕಾಲದ ಹೊತ್ತಿಗೆ ನೀರೆಲ್ಲ ಬತ್ತಿ ಹೋಗಲಿದೆ, ಆದರೆ ಇವತ್ತು ಸಾಯಂಕಾಲ ಮಳೆಯಾಗದಿದ್ದರೆ ಸಾಕು. ಸಮಾವೇಶ ಪ್ರಚಂಡ ಯಶ ಕಾಣಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶ್ರಮಿಸುತ್ತಿದ್ದಾರೆ.
ವಿಜಯಪುರ, ಏಪ್ರಿಲ್ 17: ನಗರದಲ್ಲಿ ಇಂದು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಬೆಲೆಯೇರಿಕೆ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸುವುದೇನೋ ನಿಜ ಅದರೆ ಇಲ್ಲಿ ಅದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನಡುವೆ ವೈಯಕ್ತಿಕ ಪ್ರತಿಷ್ಠೆಯ ಸಮರವೂ ಆಗಿದೆ. ಪ್ರತಿಭಟನೆ ಮತ್ತು ಸಮಾವೇಶವನ್ನು ಸಫಲಗೊಳಿಸಲು ಸ್ಥಳೀಯ ಬಿಜೆಪಿ ಮುಖಂಡರು ಶ್ರಮಿಸುತ್ತಿದ್ದಾರೆ. ನಗರದಾದ್ಯಂತ ವಿಜಯೇಂದ್ರ ಮತ್ತು ಇತರ ನಾಯಕರ ಹೋರ್ಡಿಂಗ್ಗಳು ರಾರಾಜಿಸುತ್ತಿವೆ. ಬಸನಗೌಡ ಯತ್ನಾಳ್ ನಗರದಲ್ಲೇ ಇದ್ದಾರೋ ಅಥವಾ ಬೇರೆ ಊರಲ್ಲಿದ್ದಾರೋ ಗೊತ್ತಾಗಿಲ್ಲ.
ಇದನ್ನೂ ಓದಿ: BJP Janakrosh Yatra: ಚುನಾವಣೆ ಹತ್ತಿರದಲ್ಲಿಲ್ಲ, ಹೋರಾಟದ ಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ ವಾಗ್ದಾಳಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

