ನಗರಸಭೆ, ಗ್ರಾ.ಪಂ ಸದಸ್ಯರಿಗೆ ದೀಪಾವಳಿ ಬಂಪರ್ ಗಿಫ್ಟ್: ನಗದು, ಚಿನ್ನ, ಬೆಳ್ಳಿ ನೀಡಿದ ಸಚಿವ ಆನಂದ್ ಸಿಂಗ್
ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಲಾ 1 ಲಕ್ಷದ 44 ಸಾವಿರ ರೂಪಾಯಿ ನಗದು, 144 ಗ್ರಾಂ ಚಿನ್ನ, ಒಂದು ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಮತ್ತು ಡ್ರೈ ಫ್ರೋಟ್ಸ್ ನೀಡಿದ್ದಾರೆ.
ವಿಜಯನಗರ: ಹೊಸಪೇಟೆ ಕ್ಷೇತ್ರದ ಜನಪ್ರತಿನಿಧಿಗಳಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್(Anand Singh) ಭರ್ಜರಿ ದೀಪಾವಳಿ(Deepavali 2022) ಉಡುಗೊರೆ ನೀಡಿದ್ದಾರೆ. ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹಾಗೂ 182 ಗ್ರಾ.ಪಂ ಸದಸ್ಯರಿಗೆ ಬೆಳ್ಳಿ, ನಗದು, ರೇಷ್ಮೆ ಸೀರೆ ಮತ್ತು ಪಂಚೆ ನೀಡಿ ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆಗೆ ಆಹ್ವಾನಿಸಿದ್ದಾರೆ.
ಚುನಾವಣೆ ಸಮೀಪ ಹಿನ್ನೆಲೆ ಸ್ವಕ್ಷೇತ್ರದ ಜನಪ್ರತಿನಿಧಿಗಳ ಮನವೊಲಿಸಲು ಸಚಿವ ಆನಂದ್ ಸಿಂಗ್ ಭರ್ಜರಿ ಪ್ಲ್ಯಾನ್ ಮಾಡಿದ್ದು ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಲಾ 1 ಲಕ್ಷದ 44 ಸಾವಿರ ರೂಪಾಯಿ ನಗದು, 144 ಗ್ರಾಂ ಚಿನ್ನ, ಒಂದು ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಮತ್ತು ಡ್ರೈ ಫ್ರೋಟ್ಸ್ ನೀಡಿದ್ದಾರೆ. ಇದನ್ನೂ ಓದಿ: ರಾಮನಗರದ ಅಮ್ಮನ ಮಡಿಲು ಆಶ್ರಮದಲ್ಲಿ ಯುವತಿ ಮೇಲೆ ಅತ್ಯಾಚಾರ, ಕಿರುಕುಳ; ಮೂವರ ವಿರುದ್ಧ ಎಫ್ಐಆರ್
ಜೊತೆಗೆ ಹೊಸಪೇಟೆಯ 182 ಗ್ರಾ.ಪಂ ಸದಸ್ಯರಿಗೆ ಆರ್ಧ ಕೆಜಿ ಬೆಳ್ಳಿ, 27 ಸಾವಿರ ನಗದು, ರೇಷ್ಮೆ ಸೀರೆ, ಪಂಚೆ, ರೇಷ್ಮೆ ಶರ್ಟ್, ಮುತ್ತಿನ ಹಾರ ಮತ್ತು ಡ್ರೈ ಫ್ರೋಟ್ಸ್ ನೀಡಿದ್ದಾರೆ. ಇದರ ಜೊತೆಗೆ ದೀಪಾವಳಿ ಹಬ್ಬದ ಶ್ರೀ ಲಕ್ಷ್ಮೀ ಪೂಜಾ ಆಮಂತ್ರಣ ಪತ್ರಿಕೆ ನೀಡಿ ಪೂಜೆಗೆ ಆಹ್ವಾನಿಸಿದ್ದಾರೆ. ಸಚಿವರ ಈ ಗಿಫ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಸಪೇಟೆ ನಗರಸಭೆಯಲ್ಲಿ 35 ಸದಸ್ಯರು, 5 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯಿತಿಗಳಿದ್ದು 282 ಸದಸ್ಯರಿದ್ದಾರೆ. ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯಿತಿಯ 182 ಸದಸ್ಯರಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿ ಮಂದಿಗೆ ದರ ದುಪ್ಪಟ್ಟು ಧಮಾಕ: ಗಗನಕ್ಕೆ ಏರಿದ ಹೂವು, ಹಣ್ಣು, ಪಟಾಕಿ ಬೆಲೆ
Published On - 11:57 am, Sun, 23 October 22