‘ವಿಗ್ರಹ’ಕ್ಕಾಗಿ ಗ್ರಾಮಸ್ಥರು-ಅರ್ಚಕರ ನಡುವೆ ಬಿಗ್ ಫೈಟ್!

|

Updated on: Dec 27, 2019 | 7:04 AM

ಬಳ್ಳಾರಿ: ಬೆಣಕಲ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ದುರ್ಗಮ್ಮ ಹಾಗೂ ಮರಿಗೆಮ್ಮ ದೇವಿಯ ರಕ್ತಚಂದನದ ವಿಗ್ರಹಗಳಿವೆ. ಆದ್ರೆ, ದೇವಾಲಯ ಚಿಕ್ಕದಾಗಿದ್ದರಿಂದ 2009ರಲ್ಲಿ ಹೊಸದಾಗಿ ದೇಗುಲ ನಿರ್ಮಿಸಲು ಗ್ರಾಮಸ್ಥರು ಮುಂದಾದ್ರು. ಅದರಂತೆ ಹಳೆ ದೇವಸ್ಥಾನ ಬಳಿಯೇ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಆದ್ರೆ, ಗರ್ಭಗುಡಿಯಲ್ಲಿ ಹಳೆ ವಿಗ್ರಹಗಳನ್ನ ಇಡಬೇಕೋ ಅಥವಾ ಹೊಸ ವಿಗ್ರಹಗಳನ್ನ ಪ್ರತಿಷ್ಠಾಪಿಸಬೇಕೋ ಅನ್ನೋ ವಿಚಾರಕ್ಕೆ ಜಟಾಪಟಿ ನಡೀತಿದೆ. ಹಳೆ ಮೂರ್ತಿಗಳನ್ನ ಇಡಲು ಟ್ರಸ್ಟ್ ಸದಸ್ಯರು ಒಪ್ಪುತ್ತಿಲ್ಲ. ಬದಲಾಗಿ ಹೊಸ ಕಲ್ಲಿನ ಮೂರ್ತಿಗಳನ್ನ ಪ್ರತಿಷ್ಠಾಪಿಸಲು ಪ್ಲಾನ್ […]

‘ವಿಗ್ರಹ’ಕ್ಕಾಗಿ ಗ್ರಾಮಸ್ಥರು-ಅರ್ಚಕರ ನಡುವೆ ಬಿಗ್ ಫೈಟ್!
Follow us on

ಬಳ್ಳಾರಿ: ಬೆಣಕಲ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿ ದುರ್ಗಮ್ಮ ಹಾಗೂ ಮರಿಗೆಮ್ಮ ದೇವಿಯ ರಕ್ತಚಂದನದ ವಿಗ್ರಹಗಳಿವೆ. ಆದ್ರೆ, ದೇವಾಲಯ ಚಿಕ್ಕದಾಗಿದ್ದರಿಂದ 2009ರಲ್ಲಿ ಹೊಸದಾಗಿ ದೇಗುಲ ನಿರ್ಮಿಸಲು ಗ್ರಾಮಸ್ಥರು ಮುಂದಾದ್ರು. ಅದರಂತೆ ಹಳೆ ದೇವಸ್ಥಾನ ಬಳಿಯೇ ನೂತನ ಕಟ್ಟಡ ನಿರ್ಮಾಣಗೊಂಡಿದೆ.

ಆದ್ರೆ, ಗರ್ಭಗುಡಿಯಲ್ಲಿ ಹಳೆ ವಿಗ್ರಹಗಳನ್ನ ಇಡಬೇಕೋ ಅಥವಾ ಹೊಸ ವಿಗ್ರಹಗಳನ್ನ ಪ್ರತಿಷ್ಠಾಪಿಸಬೇಕೋ ಅನ್ನೋ ವಿಚಾರಕ್ಕೆ ಜಟಾಪಟಿ ನಡೀತಿದೆ. ಹಳೆ ಮೂರ್ತಿಗಳನ್ನ ಇಡಲು ಟ್ರಸ್ಟ್ ಸದಸ್ಯರು ಒಪ್ಪುತ್ತಿಲ್ಲ. ಬದಲಾಗಿ ಹೊಸ ಕಲ್ಲಿನ ಮೂರ್ತಿಗಳನ್ನ ಪ್ರತಿಷ್ಠಾಪಿಸಲು ಪ್ಲಾನ್ ಮಾಡಿದ್ದಾರೆ. ಇದಕ್ಕೆ ದೇವಸ್ಥಾನದ ಅರ್ಚಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರ ವಿರೋಧದ ಚರ್ಚೆ ನಡುವೆಯೇ ಜನವರಿ 28ರಂದು ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೀತಿದೆ.

ಆಂಧ್ರ ಗಡಿಭಾಗದಲ್ಲಿರೋ ಬೆಣಕಲ್ಲು ಗ್ರಾಮದಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ದೇವಾಲಯದ ಗರ್ಭಗುಡಿ, ಹೊರ ಆವರಣದ ಕೆಲಸಗಳು ಮುಗಿದಿದೆ. ಆದ್ರೆ, ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡೋ ವಿಚಾರಕ್ಕೆ ಅರ್ಚಕರು ಹಾಗೂ ಟ್ರಸ್ಟ್ ನಡುವೆ ಒಮ್ಮತ ಮೂಡುತ್ತಿಲ್ಲ. ಹಿಂದಿನಿಂದಲೂ ಹಳೆ ವಿಗ್ರಹಗಳಿಗೆ ಪೂಜೆ ಮಾಡಲಾಗ್ತಿದೆ. ಈಗ ವಿಗ್ರಹಗಳನ್ನ ಬದಲಾಯಿಸೋದು ಬೇಡ ಅನ್ನೋದು ಅರ್ಚಕರ ವಾದ. ಅಲ್ಲದೆ, ಗ್ರಾಮದ ಸಭೆ ನಡೆಸದೇ ನಿರ್ಧಾರ ಕೈಗೊಂಡ ಟ್ರಸ್ಟ್​ ವಿರುದ್ಧ ಬೇಸರ ವ್ಯಕ್ತಪಡಿಸ್ತಿದ್ದಾರೆ.

ವಿಗ್ರಹದ ವಿಚಾರಕ್ಕೆ ಅರ್ಚಕರು ಹಾಗೂ ಟ್ರಸ್ಟ್ ಸದಸ್ಯರ ನಡುವೆ ನಡೀತಿರೋ ಗುದ್ದಾಟಕ್ಕೆ ಕಳೆದೊಂದು ದಶಕದಿಂದ ಜಾತ್ರೆಯೇ ನಡೆದಿಲ್ಲ. ವಿಗ್ರಹ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್ ಆದ್ರೂ, ಮೂಲ ವಿಗ್ರಹಕ್ಕೆ ಪೂಜೆ ಮಾಡಬೇಕೋ? ಹೊಸ ಮೂರ್ತಿಗಳನ್ನ ಪ್ರತಿಷ್ಠಾಪಿಸಬೇಕೋ ಅನ್ನೋ ಚರ್ಚೆ ನಡೆಯುತ್ತಲೇ ಇದೆ.