Karnataka Rains: ಬಳ್ಳಾರಿಯಲ್ಲಿ ನೋಡ ನೋಡುತ್ತಿದ್ದಂತೆ ನದಿಗೆ ಬಿದ್ದ ಲಾರಿ

| Updated By: sandhya thejappa

Updated on: Nov 20, 2021 | 3:26 PM

ಲಾರಿ ಸಿರುಗುಪ್ಪದಿಂದ ಅದೋನಿಗೆ ಹೋಗುತ್ತಿತ್ತು. ಈ ವೇಳೆ ಲಾರಿ ನದಿಗೆ ಬಿದ್ದಿದ್ದು, ಕೋಟ್ಯಾಂತರ ಮೌಲ್ಯದ ಸಕ್ಕರೆ ನೀರು ಪಾಲಾಗಿದೆ.

Karnataka Rains: ಬಳ್ಳಾರಿಯಲ್ಲಿ ನೋಡ ನೋಡುತ್ತಿದ್ದಂತೆ ನದಿಗೆ ಬಿದ್ದ ಲಾರಿ
ನದಿಗೆ ಬಿದ್ದ ಲಾರಿ
Follow us on

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿರುವ ಸೇತುವೆ ಬಳಿ ಲಾರಿಯೊಂದು ನೋಡ ನೋಡುತ್ತಿದ್ದಂತೆ ನೀರಿಗೆ ಬಿದ್ದಿದೆ. ಲಾರಿಯಲ್ಲಿ ಇದ್ದ ನೂರಾರು ಸಕ್ಕರೆ ಚೀಲ ನದಿ ಪಾಲಾಗಿವೆ. ರಾಜ್ಯದ ವಿವಿಧೆಡೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ರಾರಾವಿ ಸೇತುವ ಸಂಪೂರ್ಣ ಬಂದ್ ಆಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದೆ. ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ರಾರಾವಿ ಸೇತುವೆ ಬಳಿ ಬೆಳಗಿನ ಜಾವ ನೀರಿನ ರಭಸಕ್ಕೆ ಲಾರಿ ನದಿಗೆ ಬಿದ್ದಿದೆ.

ಲಾರಿ ಸಿರುಗುಪ್ಪದಿಂದ ಅದೋನಿಗೆ ಹೋಗುತ್ತಿತ್ತು. ಈ ವೇಳೆ ಲಾರಿ ನದಿಗೆ ಬಿದ್ದಿದ್ದು, ಕೋಟ್ಯಾಂತರ ಮೌಲ್ಯದ ಸಕ್ಕರೆ ನೀರು ಪಾಲಾಗಿದೆ. ಸದ್ಯ ನದಿಯಲ್ಲಿ ಲಾರಿಯ ಚಕ್ರಗಳು ಮಾತ್ರ ಕಾಣುತ್ತಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾರಿ ಚಾಲಕ ಮತ್ತು ಕ್ಲೀನರ್​ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ವ್ಯಕ್ತಿಯ ರಕ್ಷಣೆ
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಬಳ್ಳಾರಿ ತಾಲೂಕಿನ ರೂಪನಗುಡಿ ಹಳ್ಳದಲ್ಲಿ ವ್ಯಕ್ತಿ ಕೊಚ್ಚಿ ಹೋಗುತ್ತಿದ್ದರು. ಕಾರು ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ರೈತನ ಕಣ್ಣೀರ ಕಥೆ
ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಸುಮಾರು 10 ಸಾವಿರ ಹೆಕ್ಟೇರ್ ಭತ್ತ ನೆಲಕಚ್ಚಿದೆ. ಎಕರೆಗೆ 25 ಸಾವಿರ ರೂಪಾಯಿ ಹಣ ಖರ್ಚು ಮಾಡಿದ ರೈತರಿಗೆ ಐದು ಸಾವಿರ ವಾಪಸ್ ಬರುವುದು ಕಷ್ಟವಾಗಿದೆ. ಎಕರೆಗೆ ಮೂವತ್ತು ಚೀಲ ಬರುವ ಭತ್ತ ಇದೀಗ ಕಾಳು ಉದುರಿದ ಹಿನ್ನೆಲೆ ಕೇವಲ ಐದು ಚೀಲ ಬರುತ್ತದೆ. ಕಳೆದ ವರ್ಷ ಮೆಣಸಿನಕಾಯಿ, ಹತ್ತಿ ನಷ್ಟ ಹೊಂದಿದ ರೈತರಿಗೆ ಈ ಬಾರಿ ಅಕಾಲಿಕ ಮಳೆಯಿಂದ ಭತ್ತ ಕೂಡ ನಷ್ಟವಾಗಿದೆ.

ಇದನ್ನೂ ಓದಿ

ಚಿಕ್ಕಬಳ್ಳಾಪುರ: 360 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿ; 48 ಮನೆ ಸಂಪೂರ್ಣ ಕುಸಿತ

Viral Video: ಆನೆ ಮರಿಯ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತನ ವಿಡಿಯೋ ವೈರಲ್

Published On - 3:24 pm, Sat, 20 November 21