Bellary: 2 ಎಕರೆ ಜಮೀನು ಮಾರಿ ಸಿದ್ದರಾಮಯ್ಯಗೆ 1 ಕೋಟಿ ರೂ. ಕೊಡುವುದಾಗಿ ಘೋಷಿಸಿದ ಅಭಿಮಾನಿ

| Updated By: ವಿವೇಕ ಬಿರಾದಾರ

Updated on: Feb 08, 2023 | 12:00 PM

ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದರೇ ಜಮೀನು ಮಾರಿ 1 ಕೋಟಿ ರೂ. ಕೊಡುತ್ತೇನೆ ಎಂದು ಅಭಿಮಾನಿ ಮಲಿಯಪ್ಪ ಘೋಷಣೆ ಮಾಡಿದ್ದಾರೆ.

ವಿಜಯನಗರ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಅಭಿಮಾನಿಗಳಿಂದ ಆಫರ್​ ಮೇಲೆ ಆಫರ್​​ಗಳು ಬರುತ್ತಿರವೆ. ಸಿದ್ದರಾಮಯ್ಯ ಹೊಸಪೇಟೆ (Hospet) ಕ್ಷೇತ್ರದಿಂದ ಸ್ಪರ್ಧಿಸಿದರೇ ಜಮೀನು ಮಾರಿ 1 ಕೋಟಿ ರೂ. ಕೊಡುತ್ತೇನೆ ಎಂದು ಅಭಿಮಾನಿ ಮಲಿಯಪ್ಪ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ನಿವಾಸಿ ಕೆ.ಎಸ್.ಮಲಿಯಪ್ಪ ತನ್ನ 6 ಎಕರೆ ಹೊಲದಲ್ಲಿ 2 ಎಕರೆ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ದೇಣಿಗೆ ಕೊಡುತ್ತೇನೆ ಎಂದಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಫರ್​​ ಬಂದಿರುವುದು ಇದೇ ಮೊದಲ್ಲಲ್ಲ. ಈ ಹಿಂದೆ ಕೂಡ ಅಭಿಮಾನಿಗಳು ಆಫರ್​ ನೀಡಿದ್ದರು. ಈ ಹಿಂದೆ ಚಿಕ್ಕಮಗಳೂರು ನಗರದ ಬಾಲಕೃಷ್ಣ ಎಂಬ ಅಭಿಮಾನಿ, ಸಿದ್ದರಾಮಯ್ಯ ಅವರಿಗೆ ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿದರೇ ತನ್ನ ಎರಡೂವರೆ ಎಕರೆ ತೋಟವನ್ನು ಮಾರಿ 1 ಕೋಟಿ ಕೊಡುವುದಾಗಿ ಹೇಳಿದ್ದರು. ಇವರಿಗಿಂತ ಮೊದಲು ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರೆ 1 ಕೋಟಿ ರೂ, ಬಾದಾಮಿಯಲ್ಲಿ ಹೆಲಿಕಾಫ್ಟರ್ ಕೊಡುತ್ತೇನೆ ಎಂದು ಅಭಿಮಾನಿಗಳು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ