ಬಿಜೆಪಿಗೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಶ್ರೀರಾಮುಲು ಆಹ್ವಾನ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಬರುವಂತೆ ಸಾರಿಗೆ ಸಚಿವ ಶ್ರೀರಾಮುಲು ಆಹ್ವಾನ ನೀಡಿದ್ದಾರೆ.

ಬಿಜೆಪಿಗೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಶ್ರೀರಾಮುಲು ಆಹ್ವಾನ
Sriramulu
Edited By:

Updated on: Aug 18, 2022 | 12:28 PM

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಬರುವಂತೆ ಸಾರಿಗೆ ಸಚಿವ ಶ್ರೀರಾಮುಲು ಆಹ್ವಾನ ನೀಡಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಹಿಂದುಳಿದ ಸಮಾಜದ ನಾಯಕ ಅವರು ಬಿಜೆಪಿಗೆ ಬರಲಿ. ಕಾಂಗ್ರೆಸ್ ಪಕ್ಷದಿಂದ ಎಲ್ಲ ಹಿರಿಯ ನಾಯಕರು ಬಿಜೆಪಿಗೆ ಬಂದಿದ್ದಾರೆ, ಹೀಗಾಗಿ ಸಿದ್ದರಾಮಯ್ಯ ಬಿಜೆಪಿಗೆ ಬರಲಿ ಎಂದು ಹೇಳಿದ್ದಾರೆ.

ಬಿಜೆಪಿ ಹಿಂದುಳಿದ ವರ್ಗಗಳನ್ನ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಕಾಂಗ್ರೆಸ್ ನಿಂದ ಹಿರಿಯ ನಾಯಕರು ಬಿಜೆಪಿಗೆ ಬಂದಿದ್ದಾರೆ, ಸಿದ್ದರಾಮಯ್ಯರಿಗೆ ಅವರ ಪಕ್ಷದಿಂದ ಇರಿಸುಮುರಿಸು ಉಂಟಾಗುತ್ತಿದೆ. ಸಿದ್ದರಾಮಯ್ಯರಿಗೆ ಡಿಕೆಶಿ ಇರಿಸುಮುರಿಸು ಮಾಡುತ್ತಿದ್ದಾರೆ. ಅವರಲ್ಲೆ ಸಾಕಷ್ಟು ಜಿದ್ದಾಜಿದ್ದಿ ಇದೆ.
ಹೀಗಾಗಿ ಅವರನ್ನ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಹಿಂದುಳಿದ ನಾಯಕರು ಎಲ್ಲರೂ ಒಂದಾಗಬೇಕು ಎಂದರು.

ಸಿದ್ದರಾಮಯ್ಯ ವಿರುದ್ದ ಸ್ಪರ್ದೆ ಮಾಡಿದ್ದೇನೆ ಕುರುಬ ಸಮುದಾಯದಿಂದ ಬಿಜೆಪಿಯಿಂದ ಹಲವರು ಸಚಿವರಾಗಿದ್ದಾರೆ. ನಾನು ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ.. ಪಕ್ಷದ ಸಿದ್ದಾಂತಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇನೆ.

ಹಿಂದುಳಿದ ನಾಯಕರು ಪಕ್ಷಕ್ಕೆ ಬರಲಿ ಅನ್ನೋ ಅರ್ಥದಲ್ಲಿ ಹೇಳಿಕೆ ನೀಡಿರುವೆ, ನಾನು ನಿನ್ನೆ ರಾಜಾಧ್ಯಕ್ಷರಿಗೆ ಸ್ಪಷ್ಟಿಕರಣ ನೀಡಿ ಬಂದಿರುವೆ.
ಬಿಎಸ್ ವೈ ಪಕ್ಷಕ್ಕಾಗಿ ತಮ್ನ ಜೀವವನ್ನೆ ಮುಡಿಪಾಗಿಟ್ಟಿದ್ದಾರೆ, ಅವರನ್ನು ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಅವರ ಮಾರ್ಗದರ್ಶನದಲ್ಲೆ ಚುನಾವಣೆ ಎದುರಿಸುತ್ತೇವೆ ಎಂದು ನುಡಿದರು.

 

Published On - 12:21 pm, Thu, 18 August 22