ಬಳ್ಳಾರಿ, ನ.03: ಭ್ರಷ್ಟಾಚಾರ ಕೂಪವಾಗಿರುವ ಬಳ್ಳಾರಿ(Ballari) ಆರ್ಟಿಓ ಕಚೇರಿ(RTO Office)ಗೆ ನಗರ ಶಾಸಕ ಭರತ್ ರೆಡ್ಡಿ ಧಿಡೀರ್ ಭೇಟಿ ನಿಡಿದ್ದಾರೆ. ಹೌದು, ಆರ್ಟಿಓ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದ ಹಿನ್ನೆಲೆ ಇಂದು(ನ.3) ಕಚೇರಿಗೆ ತೆರಳಿ ಆರ್ಟಿಓ ಶೇಖರಪ್ಪ ಮತ್ತು ಆರ್ಟಿಓ ಇನ್ಸ್ಪೆಕ್ಟರ್ ನಾಗೇಶ್ ಎಂಬುವವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿಯವರ ನೂತನ ಪಕ್ಷದಿಂದ ನಿಲ್ಲಲು ಆರ್ಟಿಓ ಇನ್ಸ್ಪೆಕ್ಟರ್ ನಾಗೇಶ್ ಮುಂದಾಗಿದ್ದರು. ಆದರೆ, ಕೊನೆ ಹಂತದಲ್ಲಿ ಆಗಿರಲಿಲ್ಲ. ಇದೀಗ ಅದನ್ನೆ ಹಿಡಿದುಕೊಂಡ ಶಾಸಕ ಭರತ್ ರೆಡ್ಡಿ ಅವರು ‘ಚುನಾವಣೆ ನಿಲ್ಲೋದಿದ್ರೇ ರಾಜೀನಾಮೆ ನೀಡಿ. ರಾಜಕೀಯ ಮಾಡುವುದಕ್ಕೆ ಕಚೇರಿಗೆ ಬರಬೇಡಿ. ಮರ್ಯಾದೆಯಿಂದ ಕೆಲಸ ಮಾಡಿ ಇಲ್ಲವಾದ್ರೇ ಸರಿಯಿರಲ್ಲ ಎಂದು ನೇರವಾಗಿ ವಾರ್ನಿಂಗ್ ಮಾಡಿದ್ದಾರೆ.
ಇದೇ ವೇಳೆ ದಲ್ಲಾಳಿಗಳ ಹಾವಳಿ ತಪ್ಪಿಸದಿದ್ದರೆ ನಿಮ್ಮನ್ನು ವರ್ಗಾವಣೆ ಮಾಡಿಸುವೆ ಎಂದು ಖಡಕ್ ವಾರ್ನಿಂಗ್ ನೀಡಿದರು.
ಯಾರೇ ಬಂದರೂ ಹಣವಿಲ್ಲದೇ ಕೆಲಸ ಆಗಬೇಕು. ಇದು ಮೊದಲ ವಾರ್ನಿಂಗ್ ಮತ್ತೊಮ್ಮೆ ಮಾಡಿದ್ರೇ ಸಸ್ಪಂಡ್ ಮಾಡುವೆ. ಜನ ದಲ್ಲಾಳಿಗಳ ಹಾವಳಿಗೆ ಬೇಸತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಸರಿ ಇರಲ್ಲ ಎಂದರು. ಶಾಸಕರೆದುರು ಸೇರಿದ್ದ ಜನರು, ಆರ್ಟಿಓ ಕಚೇರಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದಿದ್ದಾರೆ. ಇನ್ಮುಂದೆ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯದಂತೆ ಮಾಡುವೆ ಎಂದು ಭರತ್ ರೆಡ್ಡಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ