ಇನ್ನು ಮುಂದೆ ಆರ್ಟಿಓ ಕಚೇರಿ ಮುಂದೆ ಕಾಯುವ ಅವಶ್ಯಕತೆ ಇಲ್ಲ; ಆನ್ಲೈನ್ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದ ಸಾರಿಗೆ ಕಚೇರಿ
ಡ್ರೈವಿಂಗ್ ಲೈಸೆನ್ಸ್, ರಿನವಲ್ ಡ್ರೈವಿಂಗ್ ಲೈಸೆನ್ಸ್, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ, ಕಳೆದು ಹೋದ ಲೈಸನ್ಸ್ ಅನ್ನು ನಕಲಿ ಲೈಸೆನ್ಸ್ ತೆಗೆದುಕೊಳ್ಳುವಂತಹ ಸೇವೆಗಳನ್ನು ಆನ್ಲೈನ್ನಲ್ಲಿ ಲಭ್ಯ ಇರುವಂತೆ ಮಾಡಿದ್ದು, ಜನರು ಕಚೇರಿಗೆ ಅಲೆದಾಡುವ ಸಮಸ್ಯೆ ಇರುವುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಆಯುಕ್ತರಾದ ದಾಮೋದರ್ ಹೇಳಿದ್ದಾರೆ.
ಹುಬ್ಬಳ್ಳಿ: ಇಷ್ಟು ದಿನ ಯಾವುದಾದರೂ ಸಾರ್ವಜನಿಕ ಸೇವೆ ಬೇಕು ಅಂದರೆ ಸರ್ಕಾರಿ ಕಚೇರಿಗೆ ಅಲೆದಾಡಬೇಕಿತ್ತು. ಜನರು ಆರ್ಟಿಓ ಕಚೇರಿ(RTO Office) ಮುಂದೆ ದಿನಗಟ್ಟಲೇ ಕಾಲ ಕಳೆಯಬೇಕಿತ್ತು. ಆದರೆ ಪ್ರಸ್ತುತವಾಗಿ ಪ್ರಾದೇಶಿಕ ಸಾರಿಗೆ ಕಚೇರಿಯು ಆನ್ಲೈನ್ (Online) ಸೇವೆಗೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಫೆ.02 ರಿಂದ ರಾಜ್ಯ ಸರ್ಕಾರ 5 ಸೇವೆಗಳನ್ನು ಕಡಿತಗೊಳಿಸಿದ್ದು, ಇದೀಗ ಆ ಸೇವೆಗಳನ್ನು ಆನ್ಲೈನ್ನಲ್ಲಿ ಪಡೆಯಬಹುದಾಗಿದೆ. ಇಂತಹದೊಂದು ಹೊಸ ವ್ಯವಸ್ಥೆ ಜಾರಿಗೆ ತಂದಿರುವ ರಾಜ್ಯ ಸರ್ಕಾರವು ಹೊಸ ವಾಹನ ತೆಗೆದುಕೊಳ್ಳಬೇಕಾದರೇ ಆರ್ಟಿಓಗೆ ಹೋಗಿ ಡ್ರೈವಿಂಗ್ ಟೆಸ್ಟ್ ನೀಡಿದರೇ ಮಾತ್ರ ಕಚೇರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ (Driving licence) ದೊರೆಯುತ್ತಿತ್ತು. ಆದರೇ ವಿವಿಧ ಸೇವೆಗಳನ್ನು ಕಚೇರಿಯಲ್ಲಿ ನಿರ್ಬಂಧಿಸಲಾಗಿದ್ದು, ಆನ್ಲೈನ್ ಸೇವೆಯ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ.
ಡ್ರೈವಿಂಗ್ ಲೈಸೆನ್ಸ್, ರಿನವಲ್ ಡ್ರೈವಿಂಗ್ ಲೈಸೆನ್ಸ್, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ, ಕಳೆದು ಹೋದ ಲೈಸನ್ಸ್ ಅನ್ನು ನಕಲಿ ಲೈಸೆನ್ಸ್ ತೆಗೆದುಕೊಳ್ಳುವಂತಹ ಸೇವೆಗಳನ್ನು ಆನ್ಲೈನ್ನಲ್ಲಿ ಲಭ್ಯ ಇರುವಂತೆ ಮಾಡಿದ್ದು, ಜನರು ಕಚೇರಿಗೆ ಅಲೆದಾಡುವ ಸಮಸ್ಯೆ ಇರುವುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಆಯುಕ್ತರಾದ ದಾಮೋದರ್ ಹೇಳಿದ್ದಾರೆ.
ಒಟ್ಟಿನಲ್ಲಿ ಇಂತಹದೊಂದು ಹೊಸ ಆಯಾಮ ರೂಪಿಸಿರುವ ರಾಜ್ಯ ಸರ್ಕಾರ ಜನರ ನೆರವಿಗೆ ನಿಂತಿದೆ. ಇದರಿಂದಾಗಿ ಸರ್ಕಾರಿ ಕಚೇರಿಗಳ ಮುಂದೆ ಇನ್ನು ಮುಂದೆ ಸಾಲು ಸಾಲಾಗಿ ನಿಲ್ಲುವ ಸಮಸ್ಯೆ ಇರುವುದಿಲ್ಲ. ಆನ್ಲೈನ್ ಸೇವೆಯ ಬಗ್ಗೆ ಜನರು ಮಾಹಿತಿ ಪಡೆದು ಇದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
ವರದಿ: ರಹಮತ್ ಕಂಚಗಾರ್
ಇದನ್ನೂ ಓದಿ:
ಆಧಾರ್ ಸೇವಾ ಕೇಂದ್ರದ ಮೂಲಕ ಆಧಾರ್ಗೆ ನೋಂದಣಿ ಮಾಡಿಸಬೇಕಾ? ಆನ್ಲೈನ್ನಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡುವುದು ಹೇಗೆ?
Published On - 9:30 am, Thu, 10 February 22