ಆಧಾರ್ ಸೇವಾ ಕೇಂದ್ರದ ಮೂಲಕ ಆಧಾರ್​ಗೆ ನೋಂದಣಿ ಮಾಡಿಸಬೇಕಾ? ಆನ್​ಲೈನ್​ನಲ್ಲಿ ಅಪಾಯಿಂಟ್​ಮೆಂಟ್ ಬುಕ್ ಮಾಡುವುದು ಹೇಗೆ?

ಆಧಾರ್​ಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯುವುದಕ್ಕಾಗಿ ಆಧಾರ್ ಸೇವಾ ಕೇಂದ್ರಗಳಲ್ಲಿ ಆನ್​ಲೈನ್ ಅಪಾಯಿಂಟ್​ಮೆಂಟ್ ಪಡೆಯುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಇಲ್ಲಿದೆ.

ಆಧಾರ್ ಸೇವಾ ಕೇಂದ್ರದ ಮೂಲಕ ಆಧಾರ್​ಗೆ ನೋಂದಣಿ ಮಾಡಿಸಬೇಕಾ? ಆನ್​ಲೈನ್​ನಲ್ಲಿ ಅಪಾಯಿಂಟ್​ಮೆಂಟ್ ಬುಕ್ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 22, 2022 | 2:03 PM

ಆಧಾರ್ ನೋಂದಣಿ, ವಿಳಾಸ ಬದಲಾವಣೆ, ಹೆಸರು ಬದಲಾವಣೆ, ಜನ್ಮ ದಿನಾಂಕದಲ್ಲಿನ ಬದಲಾವಣೆ ಸೇರಿದಂತೆ ಇತರ ಯಾವುದೇ ಸೇವೆಗಳಿಗೆ ಆಧಾರ್​ ಸೇವಾ ಕೇಂದ್ರಗಳನ್ನು ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI)ನಿಂದ ಆರಂಭಿಸಲಾಗಿದೆ. ಭಾರತೀಯ ನಾಗರಿಕರು ಅವರ ವಯಸ್ಸು, ಲಿಂಗ ಎಂಬ ತಾರತಮ್ಯ ಇಲ್ಲದೆ 12 ಅಂಕಿಯ ಈ ಆಧಾರ್ ಸಂಖ್ಯೆಯನ್ನು ಪಡೆಯುವುದಕ್ಕೆ ಅರ್ಹರು. ಇದು ರಾಷ್ಟ್ರೀಯ ಐಡಿ ಕಾರ್ಡ್​ನಂತೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ನಾಗರಿಕರು ಇದಕ್ಕಾಗಿ ತಮ್ಮ ಸಮಯವನ್ನು ನಿಗದಿ ಮಾಡಿಕೊಳ್ಳಬೇಕು. ತಮ್ಮ ಕುಟುಂಬ ಸದಸ್ಯರು, ಸ್ನೇಹಿತರಿಗಾಗಿಯೂ ಆನ್​ಲೈನ್ ಅಪಾಯಿಂಟ್​ಮೆಂಟ್ ಸೇವೆಯನ್ನು ಬಳಸಿ, ಸಮಯ ನಿಗದಿ ಮಾಡಬಹುದು. ಹೊಸದಾಗಿ ನೋಂದಣಿ, ಹೆಸರಿನಲ್ಲಿ ಯಾವುದೇ ಅಪ್​ಡೇಟ್, ಮೊಬೈಲ್ ಸಂಖ್ಯೆ, ವಿಳಾಸ, ಇಮೇಲ್ ಐಡಿ ಅಥವಾ ಜನ್ಮ ದಿನಾಂಕವನ್ನು ಯುಐಡಿಎಐನಲ್ಲಿ ಬದಲಾಯಿಸುವುದಕ್ಕೆ ಈ ಆಧಾರ್ ಸೇವಾ ಕೇಂದ್ರಗಳು ಅಥವಾ ರಿಜಿಸ್ಟ್ರಾರ್ ಮೂಲಕ ನಡೆಯುವ ಆಧಾರ್ ಸೇವಾ ಕೇಂದ್ರಗಳಲ್ಲಿ ಸಾಧ್ಯವಾಗುತ್ತದೆ.

ಆಧಾರ್​ ನೋಂದಣಿಗೆ ಆನ್​ಲೈನ್​ ಅಪಾಯಿಂಟ್​ಮೆಂಟ್​ಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ: ಹಂತ 1: https://uidai.gov.in/ಗೆ ಭೇಟಿ ನೀಡಿ

ಹಂತ 2: ‘ನನ್ನ ಆಧಾರ್’ (My Aadhaar) ಅಡಿಯಲ್ಲಿ, ‘ಅಪಾಯಿಂಟ್‌ಮೆಂಟ್ ಬುಕ್ ಮಾಡಿ’ (Book an appointment) ಕ್ಲಿಕ್ ಮಾಡಿ

ಹಂತ 3: ಯುಐಡಿಎಐ ನಡೆಸುವ ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್​ಮೆಂಟ್​ ಕಾಯ್ದಿರಿಸುವಿಕೆಯಿಂದ ಆಯ್ಕೆ ಮಾಡಿ

ಹಂತ 4: ಡ್ರಾಪ್‌ಡೌನ್‌ನಿಂದ ನಿಮ್ಮ ನಗರ/ಸ್ಥಳವನ್ನು ಆಯ್ಕೆ ಮಾಡಿ

ಹಂತ 5: ‘ಅಪಾಯಿಂಟ್​ಮೆಂಟ್ ಬುಕ್ ಮಾಡಲು ಮುಂದುವರಿಯಿರಿ’ (proceed to book an appointment) ಮೇಲೆ ಕ್ಲಿಕ್ ಮಾಡಿ

ಹಂತ 6: ‘ಬುಕ್ ಅಪಾಯಿಂಟ್‌ಮೆಂಟ್’ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹಂತ 7: ‘ಹೊಸ ಆಧಾರ್’ ಅಥವಾ ‘ಆಧಾರ್ ಅಪ್‌ಡೇಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ಕ್ಯಾಪ್ಚಾ ನಮೂದಿಸಿ ಮತ್ತು ‘ಜನರೇಟ್ OTP’ ಕ್ಲಿಕ್ ಮಾಡಿ

ಹಂತ 8: OTP ಅನ್ನು ನಮೂದಿಸಿ ಮತ್ತು ಪರಿಶೀಲಿಸು ಕ್ಲಿಕ್ ಮಾಡಿ

ಹಂತ 9: ರಾಜ್ಯ, ನಗರ ಮತ್ತು ಆಧಾರ್ ಸೇವಾ ಕೇಂದ್ರದಂತಹ ಅಪಾಯಿಂಟ್​ಮೆಂಟ್ ವಿವರಗಳನ್ನು ನಮೂದಿಸಿ, ಭಾಷೆಯನ್ನು ಆಯ್ಕೆ ಮಾಡಿ ಮತ್ತು ಮುಂದೆ (Next) ಎಂಬುದರ ಮೇಲೆ ಕ್ಲಿಕ್ ಮಾಡಿ

ಹಂತ 10: ಪುರಾವೆಯೊಂದಿಗೆ ವೈಯಕ್ತಿಕ ವಿವರಗಳು ಮತ್ತು ವಿಳಾಸದ ವಿವರಗಳನ್ನು ನಮೂದಿಸಿ ಮತ್ತು ಮುಂದಿನ (Next) ಟ್ಯಾಬ್ ಅನ್ನು ಕ್ಲಿಕ್ ಮಾಡಿ

ಹಂತ 11: ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಿ ಮತ್ತು ಮುಂದೆ (Next) ಕ್ಲಿಕ್ ಮಾಡಿ.

ನಿಮ್ಮ ಸಮಯಾವಕಾಶ (ಅಪಾಯಿಂಟ್​ಮೆಂಟ್) ದೃಢೀಕರಿಸುವ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

ಹತ್ತಿರದ ನೋಂದಣಿ ಕೇಂದ್ರವನ್ನು ಕಂಡುಹಿಡಿಯುವುದು ಹೇಗೆ?: ಹತ್ತಿರದ ನೋಂದಣಿ ಕೇಂದ್ರವನ್ನು ಹುಡುಕಲು ‘ನೋಂದಣಿ ಕೇಂದ್ರವನ್ನು ಪತ್ತೆ ಮಾಡಿ’ ಎಂದು ಹುಡುಕಬಹುದು ಅಥವಾ https://appointments.uidai.gov.in/easearch.aspxಗೆ ಭೇಟಿ ನೀಡಿ ಮತ್ತು ರಾಜ್ಯ, ಜಿಲ್ಲೆ ಮತ್ತು ಪ್ರದೇಶವನ್ನು ನಮೂದಿಸಬಹುದು ಅಥವಾ ದಾಖಲಾತಿಗೆ ಏಜೆನ್ಸಿ ನಡೆಸುವ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು.

ಅಗತ್ಯವಿರುವ ದಾಖಲೆಗಳು: ನೋಂದಣಿಗೆ ಮಾನ್ಯವಾದ ಗುರುತಿನ ಪುರಾವೆ (ಭಾವಚಿತ್ರದೊಂದಿಗೆ), ವಿಳಾಸದ ಪುರಾವೆ ಮತ್ತು ಜನ್ಮ ದಿನಾಂಕದ ಪುರಾವೆ. ಅನುಮೋದಿತ ಪಟ್ಟಿಯಲ್ಲಿ ಇರುವಂಥ ದಾಖಲೆ ಆಗಿದ್ದಲ್ಲಿ ನೀವು ಒಂದೇ ದಾಖಲೆಯನ್ನು ಬಳಸಿಕೊಳ್ಳಬಹುದು.

ಆಧಾರ್-ಸಂಬಂಧಿತ ಸೇವೆಗಳಿಗೆ ಈ ಕೆಳಗಿನ ಶುಲ್ಕಗಳು: ಆಧಾರ್ ನೋಂದಣಿ: ಉಚಿತ

ಮಕ್ಕಳಿಗಾಗಿ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (5 ಮತ್ತು 15 ವರ್ಷ ವಯಸ್ಸಿನವರು): ಉಚಿತ

ಡೆಮೋಗ್ರಾಫಿಕ್ ಅಪ್‌ಡೇಟ್ ಜೊತೆಗೆ ಅಥವಾ ಇಲ್ಲದ ಯಾವುದೇ ಬಯೋಮೆಟ್ರಿಕ್ ಅಪ್‌ಡೇಟ್*: ರೂ 100

ನಿವಾಸಿಗಳಿಂದ ಕೇವಲ ಜನಸಂಖ್ಯೆಗೆ ಸಂಬಂಧಿಸಿದ ಅಪ್​ಡೇಟ್*: ರೂ. 50

ಆಧಾರ್ ಮತ್ತು ಬಣ್ಣದ ಮುದ್ರಣವನ್ನು ಡೌನ್‌ಲೋಡ್ ಮಾಡಿ: ರೂ. 30

*ಒಂದೇ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಮಾಹಿತಿಯ ಅಪ್​ಡೇಟ್ ಮಾಡಿದರೂ ಅದನ್ನು ಒಂದು ಅಪ್‌ಡೇಟ್ ಅಂತಷ್ಟೇ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: PAN- Aadhaar Linking: ನಿಗದಿತ ಗಡುವಿನೊಳಗೆ ಆಧಾರ್- ಪ್ಯಾನ್ ಜೋಡಣೆ ಆಗದಿದ್ದಲ್ಲಿ ರೂ. 10 ಸಾವಿರ ದಂಡ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ