ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿ ಜಪ್ತಿ: ತಮಿಳುನಾಡಿನ ಇಬ್ಬರ ಬಂಧನ

| Updated By: ಸಾಧು ಶ್ರೀನಾಥ್​

Updated on: Mar 07, 2022 | 9:30 PM

ಕೂಡ್ಲಿಗಿ (ವಿಜಯನಗರ): ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿಯನ್ನು ವಿಜಯನಗರ ಜಿಲ್ಲೆಯ ಹೊಸಹಳ್ಳಿ ಪೊಲೀಸರು ಜಪ್ತಿ ಮಾಡಿದ್ದಾರೆ. ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಸುದ್ದಿ ತಿಳಿದ ಕೂಡಲೆ ಕೂಡ್ಲಿಗಿ ಆಹಾರ ನಿರೀಕ್ಷಕರೊಂದಿಗೆ ದಾಳಿ ನಡೆಸಿದ ಪೊಲೀಸರು ಅಕ್ರಮ ಪಡಿತರ ಅಕ್ಕಿ ಮತ್ತು ಲಾರಿ ಜಪ್ತಿಗೊಳಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡಿನ ಮೂಲದ ಲಾರಿ ಚಾಲಕ ಕಂದಸ್ವಾಮಿ ಹಾಗೂ ಕ್ಲಿನರ್ ಬಸವರಾಜ ಬಂಧಿತ ಆರೋಪಿಗಳಾಗಿದ್ದು, ಚಳ್ಳಕೆರೆ ಭೂಮಿಕಾ ಟ್ರೇಡರ್ಸ್ ಮಾಲೀಕ […]

ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿ ಜಪ್ತಿ: ತಮಿಳುನಾಡಿನ ಇಬ್ಬರ ಬಂಧನ
ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿ ಜಪ್ತಿ: ತಮಿಳುನಾಡಿನ ಇಬ್ಬರ ಬಂಧನ
Follow us on

ಕೂಡ್ಲಿಗಿ (ವಿಜಯನಗರ): ಚಳ್ಳಕೆರೆಯಿಂದ ಗುಜರಾತಿಗೆ ಆಕ್ರಮವಾಗಿ ಸಾಗಿಸುತ್ತಿದ್ದ 25 ಸಾವಿರ ಕೆಜಿ ಪಡಿತರ ಅಕ್ಕಿಯನ್ನು ವಿಜಯನಗರ ಜಿಲ್ಲೆಯ ಹೊಸಹಳ್ಳಿ ಪೊಲೀಸರು ಜಪ್ತಿ ಮಾಡಿದ್ದಾರೆ. ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಸುದ್ದಿ ತಿಳಿದ ಕೂಡಲೆ ಕೂಡ್ಲಿಗಿ ಆಹಾರ ನಿರೀಕ್ಷಕರೊಂದಿಗೆ ದಾಳಿ ನಡೆಸಿದ ಪೊಲೀಸರು ಅಕ್ರಮ ಪಡಿತರ ಅಕ್ಕಿ ಮತ್ತು ಲಾರಿ ಜಪ್ತಿಗೊಳಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಮೂಲದ ಲಾರಿ ಚಾಲಕ ಕಂದಸ್ವಾಮಿ ಹಾಗೂ ಕ್ಲಿನರ್ ಬಸವರಾಜ ಬಂಧಿತ ಆರೋಪಿಗಳಾಗಿದ್ದು, ಚಳ್ಳಕೆರೆ ಭೂಮಿಕಾ ಟ್ರೇಡರ್ಸ್ ಮಾಲೀಕ ದಿಲೀಪಕುಮಾರ ತಲೆ ಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ. ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ನಾಗರತ್ನ ಹಾಗೂ ಸಿಬ್ಬಂದಿಗಳು ಮತ್ತು ಕೂಡ್ಲಿಗಿ ಆಹಾರ ನಿರೀಕ್ಷಕ ಗೀತಾಂಜನೇಯ ಜಂಟಿ‌ ದಾಳಿ ನಡೆಸಿ ಹೊಸಹಳ್ಳಿ ಕೊಲುಮೆಹಟ್ಟಿ ಬಳಿ ಲಾರಿ ಜಪ್ತಿ ಮಾಡಿದ್ದಾರೆ.

ಲಾರಿಯಲ್ಲಿದ್ದ 25 ಸಾವಿರ ಕೆಜಿಯ 7 ಲಕ್ಷದ 15 ಸಾವಿರದ ಐನೂರು ರೂಪಾಯಿ ಬೆಲೆಯ ಅಕ್ರಮ ಪಡಿತರ ಅಕ್ಕಿ ಹಾಗೂ ಲಾರಿಯನ್ನ ಜಪ್ತಿ ಮಾಡಲಾಗಿದ್ದು. ತಲೆಮರೆಸಿಕೊಂಡಿರುವ ಅರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಕುರಿತು ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read:
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಹಾಲಿ ಸಚಿವ ಆನಂದ್ ಸಿಂಗ್, ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

Also Read:
ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ -ಕುಗ್ರಾಮದಲ್ಲಿ ಚಾಲನೆ ನೀಡಲಿದ್ದಾರೆ ಸಿಎಂ ಬೊಮ್ಮಾಯಿ, ಯೋಜನೆ ವಿವರ ಇಲ್ಲಿದೆ