ನೀರಿನ ಮಧ್ಯೆ ಒನಕೆ ಇರಿಸಿ ಗ್ರಹಣ ಪರೀಕ್ಷಿಸಿದ ಹಳ್ಳಿ ಜನ

|

Updated on: Dec 27, 2019 | 11:50 AM

ಬಳ್ಳಾರಿ: ಕಂಕಣ ಸೂರ್ಯ ಗ್ರಹಣ ಸಂದರ್ಭದಲ್ಲಿ ನೀರಿನ ಮಧ್ಯೆ ಒನಕೆ ನಿಲ್ಲಿಸಿ ಪ್ರಯೋಗ ಮಾಡಿರುವ ಘಟನೆ ಸಿರುಗುಪ್ಪ ತಾಲೂಕಿನ ಎರಕಲ್ಲು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಗ್ರಾಮಸ್ಥರು ಹಳೆಯ ಸಂಪ್ರದಾಯ ಪಾಲನೆ ಮಾಡಿ ಗ್ರಾಹಣ ಹಿಡಿಯುವ ಪ್ರಯೋಗ ಮಾಡಿದ್ದಾರೆ. ಬಗಲಿ ಶಾಂತಮ್ಮ ಎನ್ನುವವರ ಮನೆಯಲ್ಲಿ ಈ ಪ್ರಯೋಗ ನಡೆದಿದ್ದು, ಹಳ್ಳಿಯ ಜನರೆಲ್ಲ ಇದಕ್ಕೆ ಸಾಕ್ಷಿಯಾಗಿದ್ದಾರೆ. ಗ್ರಹಣ ಸಂದರ್ಭದಲ್ಲಿ ಒನಕೆ ನೀರಿನ ಮಧ್ಯೆ ನಿಂತಿದ್ದಕ್ಕೆ ಜನರು ಅಚ್ಚರಿ ಪಟ್ಟರು. ಗ್ರಹಣ ಶುರುವಾದಾಗ ಪ್ರಾರಂಭವಾಗುವ ಈ ಪ್ರಯೋಗ ಗ್ರಹಣ ಬಿಟ್ಟ ಮೇಲೆ […]

ನೀರಿನ ಮಧ್ಯೆ ಒನಕೆ ಇರಿಸಿ ಗ್ರಹಣ ಪರೀಕ್ಷಿಸಿದ ಹಳ್ಳಿ ಜನ
Follow us on

ಬಳ್ಳಾರಿ: ಕಂಕಣ ಸೂರ್ಯ ಗ್ರಹಣ ಸಂದರ್ಭದಲ್ಲಿ ನೀರಿನ ಮಧ್ಯೆ ಒನಕೆ ನಿಲ್ಲಿಸಿ ಪ್ರಯೋಗ ಮಾಡಿರುವ ಘಟನೆ ಸಿರುಗುಪ್ಪ ತಾಲೂಕಿನ ಎರಕಲ್ಲು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಗ್ರಾಮಸ್ಥರು ಹಳೆಯ ಸಂಪ್ರದಾಯ ಪಾಲನೆ ಮಾಡಿ ಗ್ರಾಹಣ ಹಿಡಿಯುವ ಪ್ರಯೋಗ ಮಾಡಿದ್ದಾರೆ.

ಬಗಲಿ ಶಾಂತಮ್ಮ ಎನ್ನುವವರ ಮನೆಯಲ್ಲಿ ಈ ಪ್ರಯೋಗ ನಡೆದಿದ್ದು, ಹಳ್ಳಿಯ ಜನರೆಲ್ಲ ಇದಕ್ಕೆ ಸಾಕ್ಷಿಯಾಗಿದ್ದಾರೆ. ಗ್ರಹಣ ಸಂದರ್ಭದಲ್ಲಿ ಒನಕೆ ನೀರಿನ ಮಧ್ಯೆ ನಿಂತಿದ್ದಕ್ಕೆ ಜನರು ಅಚ್ಚರಿ ಪಟ್ಟರು. ಗ್ರಹಣ ಶುರುವಾದಾಗ ಪ್ರಾರಂಭವಾಗುವ ಈ ಪ್ರಯೋಗ ಗ್ರಹಣ ಬಿಟ್ಟ ಮೇಲೆ ನಿಲ್ಲುತ್ತದೆ.

ವಿಸ್ಮಯ ಎಂದರೆ ಗ್ರಹಣ ಸಂದರ್ಭದಲ್ಲಿ ಮಾತ್ರ ಒನಕೆ ನೀರಿನ ಮಧ್ಯೆ ನಿಲ್ಲುತ್ತದೆ ಉಳಿದ ಸಂದರ್ಭದಲ್ಲಿ ಒನಕೆ ನಿಲ್ಲುವುದಿಲ್ಲ. ನಿಂತ ಒನಕೆ ಗ್ರಹಣ ಮುಗಿದ ಬಳಿಕ ಬೀಳುತ್ತೆ. ಈ ಹಿಂದೆಯು ಗ್ರಹಣ ಸಂದರ್ಭದಲ್ಲಿ ಇದೇ ರೀತಿ ಪದ್ಧತಿ ಆಚರಿಸಲಾಗುತ್ತಿತ್ತು. ಅಲ್ಲದೆ ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಪದ್ಧತಿ ನಂಬಿಕೆಯನ್ನು ಆಚರಿಸಲಾಗುತ್ತಿದೆ.

Published On - 11:09 am, Thu, 26 December 19