ತುಂಗಭದ್ರಾ  ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ; ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪ ಮುಳುಗಡೆ

| Updated By: ವಿವೇಕ ಬಿರಾದಾರ

Updated on: Jul 13, 2022 | 6:41 PM

ತುಂಗಭದ್ರಾ  ಜಲಾಶಯದಿಂದ  1.1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ  ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

ವಿಜಯನಗರ: ತುಂಗಭದ್ರಾ  ಜಲಾಶಯದಿಂದ (Tungabhadra Dam)  1.1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆ, ಕೊಪ್ಪಳ (Koppal) ಜಿಲ್ಲೆ ಗಂಗಾವತಿ (Gangavati) ತಾಲೂಕಿನ ಆನೆಗೊಂದಿಯಲ್ಲಿರುವ (Anegundi) ಶ್ರೀ ಕೃಷ್ಣದೇವರಾಯ (Sri krishnadevaraya) ಸಮಾಧಿ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ನೀರು ಹರಿಯುತ್ತಿರುವ ಹಿನ್ನೆಲೆ ನವಬೃಂದಾವನ‌ ಗಡ್ಡೆಗೆ ಸಂಪರ್ಕ ಕಡಿತಗೊಂಡಿದೆ. ನಾಳೆ ನವಬೃಂದಾವನದಲ್ಲಿ ನಡೆಯಬೇಕಿದ್ದ ರಘುವರ್ಯ ಮಹಿಮೋತ್ಸವ ಗಂಗಾವತಿ ಪಟ್ಟಣದಲ್ಲಿರುವ ಸಿಬಿಎಸ್‌ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಗೊಂಡಿದೆ. ನಾಳೆ ಹಾಗೂ ನಾಡಿದ್ದು ಎರಡು ದಿನ ರುಘುವರ್ಯ ಮಹಿಮೋತ್ಸವ ನಡೆಯಲಿದೆ.

ಹಾಗೇ ಐತಿಹಾಸಿಕ ಹಂಪಿಯ ಪುರಂದರ ಮಂಟಪ, ಚಕ್ರತೀರ್ಥ ಸ್ನಾನಘಟ್ಟ, ವಿಜಯನಗರ ಕಾಲದ ಕಾಲು ಸೇತುವೆ, ರಾಮ ಲಕ್ಷ್ಮಣ ದೇವಸ್ಥಾನ ಮತ್ತು ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಹಂಪಿಯ ಪಕ್ಕದಲ್ಲಿರುವ ನದಿಯ ಬಳಿ ಪೊಲೀಸರ ನಿಯೋಜನೆ ಮಾಡಿದ್ದು, ನದಿ ತೀರಕ್ಕೆ ತೆರಳದಂತೆ ಪ್ರವಾಸಿಗರಿಗೆ, ಸ್ಥಳೀಯರಿಗೆ ಸೂಚನೆ ನೀಡಲಾಗುತ್ತಿದೆ.

Published On - 6:41 pm, Wed, 13 July 22

Follow us on