ಬಳ್ಳಾರಿ: ಮಾಜಿ ಸಿಎಂ ಸಿದ್ರಾಮಯ್ಯನವರ ಶ್ರೀರಾಮುಲು ಪೆದ್ದ ಎಂಬ ಹೇಳಿಕೆ ಸಂಬಂಧಿಸಿ ಬಳ್ಳಾರಿಯ ವಿಜಯನಗರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ನಾನು ಪೆದ್ದನಾದ್ರೆ ನೀವು ಬುದ್ದಿವಂತನಾಗಿ ಏನು ಮಾಡಿದಿರಿ, ದಲಿತ ನಾಯಕರನ್ನು ಬೆಳೆಸಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನಿಂದ ಕಾಂಗ್ರೆಸ್ ನಿರ್ನಾಮ:
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನ ನಿರ್ನಾಮ ಮಾಡಿದರು. ದಲಿತ, ಹಿಂದುಳಿದ ನಾಯಕರನ್ನು ತುಳಿದಿದ್ದಾರೆ. ವಂಚನೆ ಮಾಡಿ ಪರಮೇಶ್ವರ್, ಖರ್ಗೆರನ್ನು ತುಳಿದಿದ್ದಾರೆ. ಈ ಬಗ್ಗೆ ನಾನು ಹೇಳಲ್ಲ, ಬದಲಾಗಿ ಅವರ ಶಿಷ್ಯರೇ ಹೇಳ್ತಾರೆ ಎಂದು
ಸಿದ್ದರಾಮಯ್ಯ ವಿರುದ್ಧ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಸಿದ್ದರಾಮಯ್ಯಗೆ ರಾಜಕಾರಣದಲ್ಲಿ ಶಕ್ತಿಯಿಲ್ಲ ಇಲ್ಲ:
ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಅಧಿಕಾರ ಚಲಾಯಿಸಿದ್ದೀರಿ. ಈಗ ಸಿದ್ದರಾಮಯ್ಯಗೆ ಯಾವ ಜವಾಬ್ದಾರಿ ಕೊಟ್ಟಿದ್ದಾರೆ? ಸಿದ್ದರಾಮಯ್ಯ ಜತೆ ಯಾರೂ ಇಲ್ಲ, ಅವರು ಏಕಾಂಗಿಯಾಗಿದ್ದಾರೆ. ಸಿದ್ದರಾಮಯ್ಯಗೆ ರಾಜಕಾರಣದಲ್ಲಿ ಶಕ್ತಿಯಿಲ್ಲ ಇಲ್ಲ ಶ್ರೀರಾಮುಲು ಹೇಳಿದ್ದಾರೆ.
ಸಿದ್ದರಾಮಯ್ಯ ವರ್ಸಸ್ ರಾಮುಲು:
ವಿಪಕ್ಷದ ನಾಯಕರಾಗಿ ಲಘುವಾಗಿ ಮಾತನಾಡಬಾರದು, ಏನೇ ಆದರು ಸಿದ್ದರಾಮಯ್ಯ ವರ್ಸಸ್ ರಾಮುಲು ಆಗಲಿ. ಜಾತಿವಾರು ಸಂಘರ್ಷವಾಗಬಾರದು. ನಾವು ಕಷ್ಟಪಟ್ಟು ಸರ್ಕಾರ ರಚಿಸಿದ್ದೇವೆ, ಯಾರೋ ಕಟ್ಟಿದ ಪಕ್ಷದಲ್ಲಿ ಎಂಜಾಯ್ ಮಾಡುತ್ತಿಲ್ಲ. ಕಷ್ಟಪಟ್ಟು ಪಕ್ಷ ಕಟ್ಟಿ ಅಧಿಕಾರ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಹಿರಿಯರು ಅವರು ನಮಗೆ ಮಾದರಿಯಾಗಬೇಕು. ನಮ್ಮಂತರ ಬಗ್ಗೆ ಟೀಕೆ ಮಾಡಿ ಸಣ್ಣವರಾಗಬಾರದು ಎಂದು ಸಿದ್ದರಾಮಯ್ಯ ವಿರುದ್ದ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
Published On - 12:53 pm, Fri, 22 November 19