Uchangi Jatre: ಭರತ ಹುಣ್ಣಿಮೆ ಹಿನ್ನೆಲೆ ಉಚ್ಚಂಗೆಮ್ಮ ದರ್ಶನಕ್ಕೆ ಜನ ಸಾಗರ
ಉಚ್ಚಂಗೆಮ್ಮ ಪುಣ್ಯಕ್ಷೇತ್ರದ ಉಚ್ಚಂಗೆಮ್ಮನ ಐತಿಹಾಸಿಕ ಜಾತ್ರೆಗೆ ಜನ ಸಾಗರವೇ ಹರಿದು ಬಂದಿದೆ. ಭರತ ಹುಣ್ಣಿಮೆ ಹಿನ್ನೆಲೆ ಸಾವಿರಾರು ಜನ ಭಕ್ತರು ದೇವಿಗೆ ಉಡಿ ತುಂಬಿ ಹರಕೆ ಒಪ್ಪಿಸಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗುಡ್ಡದ ಮೇಲೆ ಇರುವ ಉಚ್ಚಂಗೆಮ್ಮ ಪುಣ್ಯಕ್ಷೇತ್ರದ ಉಚ್ಚಂಗೆಮ್ಮನ ಐತಿಹಾಸಿಕ ಜಾತ್ರೆಗೆ ಜನ ಸಾಗರವೇ ಹರಿದು ಬಂದಿದೆ. ಭರತ ಹುಣ್ಣಿಮೆ ಹಿನ್ನೆಲೆ ಸಾವಿರಾರು ಜನ ಭಕ್ತರು ದೇವಿಗೆ ಉಡಿ ತುಂಬಿ ಹರಕೆ ಒಪ್ಪಿಸಿದರು. ಮುತ್ತು ಕಟ್ಟುವುದು, ಹೆಣ್ಣು ಮಕ್ಕಳನ್ನ ದೇವಿಗೆ ಬಿಡುವ ಅನಿಷ್ಟ ಪದ್ದತಿ ನಡೆಯದಂತೆ ಪುಣ್ಯಕ್ಷೇತ್ರ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುಡ್ಡದ ಬಹುತೇಕ ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.