ಬಳ್ಳಾರಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗದಗ ಮೂಲದ ಮಾಲನ್ ಭೀ ಮೃತಪಟ್ಟ ಮಹಿಳೆ. ಬಳ್ಳಾರಿ ಸಮಾವೇಶ ಮುಗಿಸಿ ಬಸ್ನಲ್ಲಿ ಮರಳಿ ತೆರಳುತ್ತಿದ್ದಾಗ ಹೃದಯಾಘಾತವಾಗಿದೆ. ಹೃದಯಾಘಾತಕ್ಕೆ ಒಳಗಾದ ವೇಳೆ ಮಹಿಳೆಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾಳೆ.
ದರೋಡೆಗೆ ಸ್ಕೆಚ್ ಹಾಕ್ತಿದ್ದ ಮೂವರು ದರೋಡೆಕೋರರ ಬಂಧನ
ನೆಲಮಂಗಲ: ದರೋಡೆಗೆ ಸ್ಕೆಚ್ ಹಾಕುತ್ತಿದ್ದ ಮೂವರು ದರೋಡೆಕೋರರ ಬಂಧನ ಮಾಡಲಾಗಿದೆ. ಸಾಯಿ ಪ್ರಸಾದ್ (32), ಅಭಿಲಾಷ್ (26), ಮತ್ತು ರಾಹುಲ್ (25), ಬಂಧಿತ ಆರೋಪಿಗಳು. ಬಂಧಿತರು ಕೃತ್ಯಕ್ಕೆ ಬಳಸುತ್ತಿದ್ದ ಕದ್ದ ಕಾರು, ಚಾಕು, ಕಬ್ಬಿಣದ ರಾಡು ಮತ್ತು ಖಾರದ ಪುಡಿ ಜಪ್ತಿ ಮಾಡಲಾಗಿದೆ. ಬೆಂ.ಉತ್ತರ ತಾಲ್ಲೂಕು ರಾವುತ್ತನಹಳ್ಳಿ ಸಮೀಪದ ರಾಜೀವ್ ಗಾಂಧಿ ವೃತ್ತ ಬಳಿ ಅರೆಸ್ಟ್ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ತಿ ವಿಚಾರವಾಗಿ ಸೊಸೆಯಿಂದ ಅತ್ತೆಯ ಕೊಲೆ
ಬೆಂಗಳೂರು: ಆಸ್ತಿ ವಿಚಾರವಾಗಿ ಸೊಸೆಯಿಂದ ಅತ್ತೆಯ ಕೊಲೆ ಮಾಡಿರುವಂತಹ ಘಟನೆ ಇದೇ ತಿಂಗಳ 12 ರ ರಾತ್ರಿ ಶ್ರೀರಾಂಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಣಿ (76) ಕೊಲೆಯಾದ ದುರ್ದೈವಿ ಅತ್ತೆ. ಸುಗುಣ ಅತ್ತೆಯನ್ನು ಕೊಲೆಗೈದ ಸೊಸೆ. ಆರೋಪಿ ಸುಗುಣಳನ್ನು ಶ್ರೀರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇರುವ ಆಸ್ತಿ ಎಲ್ಲವನ್ನು ಮೂವರು ಗಂಡು ಮಕ್ಕಳಿಗೆ ಅತ್ತೆ ರಾಣಿ ಹಂಚಿದ್ದಾಳೆ. ಒಂದು ಮನೆಯಲ್ಲಿ ತಾನೊಬ್ಬಳೆ ಇದ್ದಳು. ಆ ಮನೆಯನ್ನು ಕೊಡುವಂತೆ ಸುಗುಣ ಪೀಡಿಸಿದ್ದಾಳೆ. ಕೊಡಲು ನಿರಾಕರಿಸಿದಾಗ ಹಲ್ಲೆಗೆ ಮುಂದಾಗಿದ್ದಾಳೆ. ಮೊನ್ನೆ ಹಲ್ಲೆ ನಡೆಸುವಾಗ ಕತ್ತು ಮುರಿದು ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಯಾದಗಿರಿ: ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಸುರಪುರ ನಗರದ ಸರ್ಕಾರಿ ವಸತಿ ನಿಲಯದ ಬಳಿ ನಡೆದಿದೆ. ಶಹಾಪುರ ತಾಲೂಕಿನ ಶೆಟ್ಟಿಗೇರ ಗ್ರಾಮದ ನಿವಾಸಿ ಭೀಮಾಶಂಕರ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸುರಪುರದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಬಿಎ ಓದುತ್ತಿದ್ದು, ಸರ್ಕಾರಿ ಮೆಟ್ರಿಕ್ ನಂತರದ SC,ST ಹಾಸ್ಟೆಲ್ನಲ್ಲಿ ವಾಸವಿದ್ದ. ಸದ್ಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸರು ಭೇಟಿ ನೀಡಿ, ಕೇಸ್ ದಾಖಲು ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:42 pm, Sat, 15 October 22