ಲೋಕಾಯುಕ್ತ ಐಜಿಪಿಯಾಗಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌​ ವರ್ಗಾವಣೆ

ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್​ ಆಯುಕ್ತರಾಗಿದ್ದ ಡಾ.ಎ.ಸುಬ್ರಹ್ಮೇಶ್ವರ ರಾವ್​ ಅವರನ್ನು ಲೋಕಾಯುಕ್ತ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಸಿಬಿಐನಲ್ಲೂ ಕರ್ತವ್ಯ ನಿರ್ವಹಿಸಿದ್ದರು.

ಲೋಕಾಯುಕ್ತ ಐಜಿಪಿಯಾಗಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌​ ವರ್ಗಾವಣೆ
ಲೋಕಾಯುಕ್ತ ಐಜಿಪಿಯಾಗಿ ಡಾ.ಎ.ಸುಬ್ರಹ್ಮೇಶ್ವರ ರಾವ್​ ವರ್ಗಾವಣೆ
Updated By: Rakesh Nayak Manchi

Updated on: Oct 22, 2022 | 7:24 AM

ಬೆಂಗಳೂರು: ನಗರದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್​ ಆಯುಕ್ತರಾಗಿದ್ದ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಅವರನ್ನು ಲೋಕಾಯುಕ್ತ ಐಜಿಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಲೋಕಾಯುಕ್ತಕ್ಕೆ ಅಧಿಕಾರ ಮರುಸ್ಥಾಪನೆ ನಂತರ ಇಲಾಖೆಗೆ ಮತ್ತೊಬ್ಬ ಖಡಕ್ ಐಪಿಎಸ್ ಅಧಿಕಾರಿ ಸೇರ್ಪಡೆಯಾದಂತಾಗಿದೆ. ಈ ಹಿಂದೆ ಸಿಬಿಐ ಬೆಂಗಳೂರು ಘಟಕದ ಎಸ್​ಪಿಯಾಗಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಕಾರ್ಯನಿರ್ವಹಿಸಿದ್ದರು. ನಿನ್ನೆಯಷ್ಟೇ ರಾಜ್ಯ ಸರ್ಕಾರ 21 ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್​ದಾಗ 2016 ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ತೆಗೆದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ್ದರು. ಆದರೆ ಇತ್ತೀಚೆಗೆ (ಆ. 11 ರಂದು) ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದುಪಡಿಸಿ ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾರವರಿದ್ದ ಪೀಠ ತೀರ್ಪು ನೀಡಿದೆ. ಎಸಿಬಿ ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಆದೇಶ ಹೊರಡಿಸಿತ್ತು. ಆ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಮತ್ತೆ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ಬಂದತಾಯಿತು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 am, Sat, 22 October 22