ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದ ಪ್ರೊಫೆಸರ್ ಅಮಾನತು

| Updated By: Rakesh Nayak Manchi

Updated on: Oct 22, 2022 | 3:00 PM

ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಉಪನ್ಯಾಸಕನನ್ನು ಅಮಾನತುಗೊಳಿಸಿ ನಿಟ್ಟೆ ಮೀನಾಕ್ಷಿ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದ್ದು, ಘಟನೆಗೆ ಕಾಲೇಜು ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದೆ.

ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದ ಪ್ರೊಫೆಸರ್ ಅಮಾನತು
ಅಮಾನತುಗೊಂಡ ಮಧುಸೂದನ್
Follow us on

ದೇವನಹಳ್ಳಿ: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದ ಉಪನ್ಯಾಸಕನನ್ನು ಅಮಾನತುಗೊಳಿಸಿ ಬಾಗಲೂರು ಕ್ರಾಸ್ ಬಳಿಯ ನಿಟ್ಟೆ ಮೀನಾಕ್ಷಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಿಂದ ಆದೇಶಿಸಲಾಗಿದೆ. ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೋಪೆಸರ್ ಮಧುಸೂಧನ್ ಆಚಾರ್ಯ ವಿದ್ಯಾರ್ಥಿಳಿಗೆ ವೈಯುಕ್ತಿಕವಾಗಿ ಅಶ್ಲೀಲ ವಿಡಿಯೋಗಳನ್ನ ಕಳಿಸಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಪ್ಐಆರ್ ಕೂಡ ದಾಖಲಾಗಿತ್ತು. ಸೈಬರ್ ಟಿಪ್ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.  ಈ ಹಿನ್ನಲೆ ನಿಟ್ಟೆ ಮೀನಾಕ್ಷಿ ಇಂಜನಿಯರಿಂಗ್ ಕಾಲೇಜು‌ ಆಡಳಿತ ಮಂಡಳಿಯಿಂದ ಉಪಾನ್ಯಾಸಕನನ್ನು ಅಮಾನತು ಮಾಡಿ‌ ಆದೇಶಿಸಿದೆ. ಇದೇ ವೇಳೆ ಘಟನೆಯ ಬಗ್ಗೆ ನಿಟ್ಟೆ ಮೀನಾಕ್ಷಿ ಕಾಲೇಜು ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದ್ದು, ಉಪಾನ್ಯಸಕನನ್ನ ಅಮಾನತ್ತು ಮಾಡಿರುವುದಾಗಿ ಟಿವಿ9ಗೆ ಪ್ರಾಂಶುಪಾಲ ನಾಗರಾಜ್ ಮಾಹಿತಿ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ

ಮಧುಸೂದನ್ ಆಚಾರ್ಯ ಅವರು ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಕಳಿಸಿದ್ದರು. ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಗೌರವಯುತ ಸ್ಥಾನದಲ್ಲಿರುವ ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳಿಸಿದ್ದರು.

ವಿಡಿಯೋ ಕಳಿಸಿದ್ದನ್ನು ಮಾನಿಟರ್ ಮಾಡಿದ್ದ National Center For Missing and Exploited Children ಪೋರ್ಟೆಲ್ ನಂತರ ಈ ಮಾಹಿತಿಯನ್ನು ಎನ್​ಸಿಆರ್​ಬಿಗೆ ನೀಡಿತ್ತು. ಬಳಿಕ ಎನ್​ಸಿಆರ್​ಬಿ ರಾಜ್ಯ ಸಿಐಡಿಗೆ ಸಿಡಿ ಸಹಿತ ಪ್ರಕರಣದ ಮಾಹಿತಿ ನೀಡಿತ್ತು. ನಂತರ ಸೈಬರ್ ಕ್ರೈಮ್ ಟಿಪ್ ಲೈನ್ ಅಡಿಯಲ್ಲಿ ಮಾಹಿತಿ ನೀಡಲಾಗಿತ್ತು. ಮಾಹಿತಿ ಅನ್ವಯ ತಾಂತ್ರಿಕ ತನಿಖೆ ನಡೆಸಿದ್ದ ಸಿಐಡಿ ಸೈಬರ್ ಕ್ರೈಮ್ ಪೊಲೀಸರಿಗೆ ಯಲಹಂಕ ಬಳಿಯ ಪ್ರತಿಷ್ಠಿತ ಕಾಲೇಜಿನ ಬಗ್ಗೆ ಮಾಹಿತಿ ತಿಳಿದುಬಂದಿತ್ತು.

ಐಪಿ ಅವಿಳಾಸ ಸಹಿತ ಏರಿಯಾ ಪತ್ತೆ ಮಾಡಿದ್ದ ಪೊಲೀಸರು ನಂತರ ಘಟನೆ ಸಂಬಂಧ ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಕೇಸ್ ದಾಖಲು ಮಾಡಿದ ಸಿಇಎನ್ ಪೊಲೀಸರು ಕೇಸ್ ಸಂಬಂಧಿಸಿ ಪ್ರೊಫೆಸರ್ ಮಧುಸೂದನ್​ರನ್ನು ವಿಚಾರಣೆಗೆ ಕರೆಸಿ ವಿಚಾರಿಸಿದಾಗ ಕೃತ್ಯ ಬಯಲಾಗಿತ್ತು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ