ಹಳಿ ತಪ್ಪಿದ ಬೆಂಗಳೂರು-ತಾಳಗುಪ್ಪ ಇಂಟರ್​ಸಿಟಿ ರೈಲು; ರೈಲು ಸಂಚಾರ ಸ್ಥಗಿತ

|

Updated on: Dec 31, 2020 | 11:34 PM

ರೈಲ್ವೇ ಟ್ರಾಕ್ ಮಧ್ಯೆ ರಾತ್ರಿ 8.24 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಇಂಟರ್ ಸಿಟಿ ಟ್ರೇನ್ ತೆರಳುತ್ತಿತ್ತು. ಈ ವೇಳೆ ರೈಲಿನ‌ ಇಂಜಿನ್​ನ ಗಾಲಿ ರೈಲ್ವೆ ಟ್ರಾಕ್ ಬಿಟ್ಟು ಕೆಳಗೆ ಇಳಿದಿದೆ. ಇದರ ಪರಿಣಾಮದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ.

ಹಳಿ ತಪ್ಪಿದ ಬೆಂಗಳೂರು-ತಾಳಗುಪ್ಪ ಇಂಟರ್​ಸಿಟಿ ರೈಲು; ರೈಲು ಸಂಚಾರ ಸ್ಥಗಿತ
ರೈಲು
Follow us on

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲೂಕಿನ‌ ಬಸವಾಪುರ (ಸೂಡೂರು/ಅರಸಾಳು ಮಧ್ಯೆ ) ಬಳಿ ಬೆಂಗಳೂರು – ತಾಳಗುಪ್ಪ ಇಂಟರ್ ಸಿಟಿ ರೈಲು ಹಳಿ ತಪ್ಪಿರುವ ಘಟನೆ ನಡೆದಿದೆ.

ರೈಲ್ವೇ ಟ್ರಾಕ್ ಮಧ್ಯೆ ರಾತ್ರಿ 8.24 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಇಂಟರ್ ಸಿಟಿ ಟ್ರೇನ್ ತೆರಳುತ್ತಿತ್ತು. ಈ ವೇಳೆ ರೈಲಿನ‌ ಇಂಜಿನ್​ನ ಗಾಲಿ ರೈಲ್ವೆ ಟ್ರಾಕ್ ಬಿಟ್ಟು ಕೆಳಗೆ ಇಳಿದಿದೆ. ಇದರ ಪರಿಣಾಮದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಈ ಯಾವುದೇ ಅವಘಡ ಸಂಭವಿಸಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಪ್ರಯಾಣಿಕರೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.