ನಿಷೇಧಾಜ್ಞೆ ಮಧ್ಯೆ ನ್ಯೂ ಇಯರ್ ಸೆಲೆಬ್ರೇಷನ್.. ಬೆಂಗಳೂರಲ್ಲಿ ಸರಳವಾಗಿ ಹೊಸ ವರ್ಷಕ್ಕೆ ವೆಲ್ ಕಮ್
ನಿಷೇಧಾಜ್ಞೆ ನಡುವೆಯೂ ಸಿಲಿಕಾನ್ ಸಿಟಿ ಬೆಂಗಳೂರಿನ ಜನ ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ. ಕರಾಳ 2020ಕ್ಕೆ ಗುಡ್ ಬೈ ಹೇಳಿ, 2021ಕ್ಕೆ ಸರಳವಾಗಿ ಗ್ರ್ಯಾಂಡ್ ವೆಲಕಮ್ ಮಾಡಿದ್ದಾರೆ. ನಿಷೇಧಾಜ್ಞೆಯಿಂದಾಗಿ ಈ ಬಾರಿ ಎರ್ರಾಬಿರ್ರಿ ಡಿಜೆ ಮ್ಯೂಸಿಕ್ ಗೆ, ಕುಣಿತಕ್ಕೆ ಬ್ರೇಕ್ ಬಿದ್ದಿದೆ.
ಬೆಂಗಳೂರು: ಡಿಜೆ ಸದ್ದಿನ ಗಮ್ಮತ್ತು.. ಮೈಗೆ ಎಣ್ಣೆಯ ಮತ್ತು.. ಎರಡೂ ಸೇರ್ತಿದ್ದಂತೆ ಅಲ್ಲಿದ್ದವರ ಗತ್ತು ಬದಲಾಗಿತ್ತು. ಮ್ಯೂಸಿಕ್‌ಗೆ ತಕ್ಕಂತೆ ಮೈಕುಲುಕಿಸುತ್ತಿದ್ರು.
ಕೊರೊನಾ ಅಬ್ಬರ ನಡುವೆಯೂ, ನಿಷೇಧಾಜ್ಞೆ ನಡುವೆಯೂ ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದ ಪಬ್‌ವೊಂದರಲ್ಲಿ ಸೇರಿದ್ದ ಯುವಕ ಯುವತಿಯರು ಮೋಜು ಮಸ್ತಿ ಮಾಡುತ್ತ ಹೊಸವರ್ಷವನ್ನ ಬರಮಾಡಿ ಕೊಂಡಿದ್ದಾರೆ. ಕರಾಳ ವರ್ಷ 2020ಕ್ಕೆ ಗುಡ್ ಬೈ ಹೇಳಿ, 2021ಕ್ಕೆ ಗ್ರ್ಯಾಂಡ್ ವೆಲಕಮ್ ಮಾಡಿದ್ದಾರೆ.
2021ಕ್ಕೆ ಗ್ರ್ಯಾಂಡ್ ವೆಲಕಮ್.. ಸೈಲೆಂಟ್ ಸೆಲೆಬ್ರೇಷನ್..! ಡಿಜೆ ಮ್ಯೂಸಿಕ್, ವಿದ್ಯುತ್ ದೀಪಾಲಂಕಾರ ಯುವಕ-ಯುವತಿಯರಿಗೆ ಭರ್ಜರಿ ಥ್ರಿಲ್ ಕೊಡ್ತು.. ಅದೇ ಜೋಶ್ನಲ್ಲಿ ಸಖತ್ ಸ್ಟೆಪ್ಸ್ ಹಾಕುತ್ತ ಹೊಸ ವರ್ಷವನ್ನ ಬರಮಾಡಿಕೊಂಡ್ರು. ಹೊಸ ವರ್ಷದ ಜೋಶ್ನಲ್ಲಿ ಬ್ಯೂಟಿಫುಲ್ ಬೆಡಗಿಯರು ಮಸ್ತಿ ಮಾಡಿದ್ರು. ಫ್ರೆಂಡ್ಸ್ ಜೊತೆ ರೆಸ್ಟೋರೆಂಟ್ ಪಬ್ಗಳಲ್ಲಿ ಫುಲ್ ಎಂಜಾಯ್ ಮಾಡಿದ್ರು.
ಹೊಸ ವರ್ಷಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗುತ್ತಿದ್ದಂತೆ ಕೋರಮಂಗಲದ ಜ್ಯೋತಿ ನಿವಾಸದ ಕಾಲೇಜಿನ ರಸ್ತೆ ಮೆಲ್ಲಗೆ ರಂಗೇರಿತ್ತು. ‘ಜೋಡಿ’ಗಳ ರೌಂಡ್ಸ್ ಶುರುವಾಗಿತ್ತು. ಜತೆ ಜತೆಯಾಗಿ ಪಬ್, ರೆಸ್ಟೋರೆಂಟ್ಗಳಿಗೆ ಎಂಟ್ರಿ ಕೊಟ್ರು. ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದ ರೆಸ್ಟೋರೆಂಟ್ಗೆ ಆಗಮಿಸಿದ್ದ ಜೋಡಿಗಳು ಭರ್ಜರಿ ಎಂಜಾಯ್ ಮಾಡಿದ್ರು.
ರೂಲ್ಸ್ಗಳ ನಡುವೆ ಜನರ ಸೈಲೆಂಟ್ ಸೆಲೆಬ್ರೇಷನ್..! ಯೆಸ್, ಬೆಂಗಳೂರಿನ ಜನ 2021ಕ್ಕೆ ಗ್ರ್ಯಾಂಡ್ ವೆಲಕಮ್ ಮಾಡಿ, ಸೈಲೆಂಟ್ ಆಗಿ ಸೆಲೆಬ್ರೇಷನ್ ಮಾಡಿದ್ದಾರೆ. ಆದ್ರೆ ರೂಪಾಂತರಿ ಕೊರೊನಾ ಅಬ್ಬರದಿಂದಾಗಿ ನಿಷೇಧಾಜ್ಞೆ ಹೇರಿದ್ದ ಪರಿಣಾಮ ಈ ಬಾರಿ ಬೆಂಗಳೂರು ಹೊಸ ವರ್ಷಾಚರಣೆಯಂದೇ ಬಿಕೋ ಎನ್ನುತ್ತಿತ್ತು. ಪ್ರತಿ ನ್ಯೂ ಇಯರ್ ದಿನದಂದು ತುಂಬಿ ತುಳುಕುತ್ತಿದ್ದ ಬ್ರಿಗೇಡ್, ಎಂ.ಜಿ. ರಸ್ತೆ ಭಣ ಭಣ ಅಂತಿತ್ತು. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಬ್ರಿಗೇಡ್ ರಸ್ತೆಯಲ್ಲಿ ಜನರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚಾಗಿತ್ತು. ಬ್ರಿಗೇಡ್, ಎಂ.ಜಿ. ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲಿತ್ತು.
ಕರ್ತವ್ಯ ನಿರತ ಪೊಲೀಸರ ಜೊತೆ ನ್ಯೂ ಇಯರ್ ಸೆಲೆಬ್ರೇಷನ್ ಇನ್ನು ರೆಸಿಡೆನ್ಸಿ ರಸ್ತೆಯಲ್ಲಿ ಯುವಕನೊಬ್ಬ ಕರ್ತವ್ಯ ನಿರತ ಪೊಲೀಸರ ಜೊತೆ ನ್ಯೂ ಇಯರ್ ಆಚರಿಸಿಕೊಂಡ ಪ್ರಸಂಗ ನಡೆಯಿತು. ಯುವಕನೊಬ್ಬ ಗಸ್ತಿನಲ್ಲಿದ್ದ ಪೊಲೀಸರ ಬಳಿಗೆ ಕೇಕ್ ತೆಗೆದುಕೊಂಡು ಬಂದು ಕೇಕ್ ಕತ್ತರಿಸಿ, ಎಲ್ಲರಿಗೂ ಕೇಕ್ ತಿನ್ನಿಸಿ ನ್ಯೂ ಇಯರ್ ಆಚರಿಸಿದ.
ಬೆಂಗಳೂರಿನಲ್ಲಿ ಕಮಿಷನರ್ ಕಮಲ್ ಪಂತ್ ನೈಟ್ ರೌಂಡ್ಸ್ ಇನ್ನು ಹೊಸವರ್ಷ ಆರಂಭವಾಗುತ್ತಿದ್ದಂತೆ ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ರೌಂಡ್ಸ್ ಬಂದಿದ್ರು. ಎಂ.ಜಿ.ರೋಡ್, ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ಭದ್ರತೆ ಪರಿಶೀಲಿಸಿದ್ರು. ಎಂ.ಜಿ.ರೋಡ್, ಬ್ರಿಗೇಡ್ ರಸ್ತೆಗಳ ಭದ್ರತೆ ಪರಿಶೀಲಿಸಿದ ಬಳಿಕ ಇಂದಿರಾನಗರಕ್ಕೆ ತೆರಳಿದ ಕಮಿಷನರ್ ಕಮಲ್ ಪಂತ್, ಅಲ್ಲೂ ಹೊಸ ವರ್ಷದ ಭದ್ರತೆಯನ್ನ ಪರಿಶೀಲಿಸಿದ್ರು.
ಒಟ್ನಲ್ಲಿ, ಈ ಬಾರಿ ಎರ್ರಾಬಿರಿ ಡಿಜೆ ಮ್ಯೂಸಿಕ್ ಇರಲಿಲ್ಲ. ಅದ್ಧೂರಿ ಲೈಟಿಂಗ್ಸ್.. ಬಿರುಸು ಬಾಣಗಳ ಚಿತ್ತಾರಕ್ಕೆ ಜನ ಹುಚ್ಚರಂತೆ ಕುಣಿಯಲಿಲ್ಲ. ಕೇಕೆ ಸಿಳ್ಳೆ ಹೊಡೆಯುತ್ತಾ ಅಬ್ಬರಿಸಿಲ್ಲ. ಸೈಲೆಂಟ್ ಆಗಿಯೇ ಹೊಸ ವರ್ಷ 2021ಕ್ಕೆ ಸ್ವಾಗತ ಕೋರಿದ್ದಾರೆ. ಲೈಟಾಗಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಈ ಹೊಸ ವರುಷ ಎಲ್ಲರಿಗೂ ಹೊಸ ಹರುಷ ತರಲಿ.. ಕೊರೊನಾ ತೊಲಗಲಿ.