ಮಾದಾವರ ಅರ್ಕಾವತಿ ಜಲಾನಯನ ಪ್ರದೇಶ ಒತ್ತುವರಿ: ಅಕ್ರಮ ನಿರ್ಮಾಣ ಹಂತದ ಕಟ್ಟಡ ಕುಸಿಯುವ ಭೀತಿ!

| Updated By: ಗಂಗಾಧರ​ ಬ. ಸಾಬೋಜಿ

Updated on: Nov 16, 2024 | 3:13 PM

ಮಾದಾವರದಲ್ಲಿ ಅರ್ಕಾವತಿ ನದಿ ದಂಡೆಯಲ್ಲಿ ಅಕ್ರಮ ಕಟ್ಟಡ ನಿರ್ಮಾಣದಿಂದ ನದಿ ಒತ್ತುವರಿಯಾಗಿದೆ. ಉದ್ಯಮಿ ರಾಜ್ ಕುಮಾರ್ ಕಾಲುವೆಯ ಅಗಲವನ್ನು ಕಡಿಮೆ ಮಾಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ಉಲ್ಬಣಗೊಂಡಿದೆ. ವಾಜರಹಳ್ಳಿಯಲ್ಲಿಯೂ ಇದೇ ರೀತಿಯ ಅಕ್ರಮ ಕಟ್ಟಡವನ್ನು ತೆರವುಗೊಳಿಸಲಾಗಿದೆ.

ಮಾದಾವರ ಅರ್ಕಾವತಿ ಜಲಾನಯನ ಪ್ರದೇಶ ಒತ್ತುವರಿ: ಅಕ್ರಮ ನಿರ್ಮಾಣ ಹಂತದ ಕಟ್ಟಡ ಕುಸಿಯುವ ಭೀತಿ!
ಮಾದಾವರ ಅರ್ಕಾವತಿ ಜಲಾನಯನ ಪ್ರದೇಶ ಒತ್ತುವರಿ: ಅಕ್ರಮ ನಿರ್ಮಾಣ ಹಂತದ ಕಟ್ಟಡ ಕುಸಿಯುವ ಭೀತಿ!
Follow us on

ನೆಲಮಂಗಲ, ನವೆಂಬರ್​ 16: ನಗರದ ಮಾದಾವರ ಅರ್ಕಾವತಿ ನದಿಗೆ (Arkavati River) ಹರಿಯುವ ನೀರಿನ ದಡದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವಂತಹ ಘಟನೆ ನಡೆದಿದೆ. ಉದ್ಯಮಿ ರಾಜ್ ಕುಮಾರ್ ಎಂಬುವವರಿಂದ ಕಾಲುವೆಯ ಗಾತ್ರ ಕಿರಿದು ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. 60 ಅಡಿ ಕಾಲುವೆ ಈಗ ಕೇವಲ 10 ಅಡಿಯಾಗಿವೆ. ನೋಟಿಸ್​ ನೀಡಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

ದೊಡ್ಡ ಬಿರುಕು: ನಿರ್ಮಾಣ ಹಂತದ ಕಟ್ಟಡ ಕುಸಿಯುವ ಭೀತಿ

ಸರ್ವೆ ನಂಬರ್ 17/2ರಲ್ಲಿ ಜಲಾನಯನ ಪ್ರದೇಶ ಒತ್ತುವರಿ ಮಾಡಲಾಗಿದೆ. ಆದರೆ ಒತ್ತುವರಿ ತಡೆಯಲು ಮಾದನಾಯಕನಹಳ್ಳಿ ನಗರ ಸಭೆ ಅಧಿಕಾರಿಗಳು ವಿಫಲವಾಗಿದ್ದಾರೆ. ಅಕ್ರಮ ಕಟ್ಟಡ ನಿರ್ಮಾಣ ಮಾಡಲು ಲೋಡ್ ಗಟ್ಟಲೆ ಮಣ್ಣು ತುಂಬಿದ್ದು, ಇದೀಗ ಸುಮಾರು 200 ಅಡಿಗಳಷ್ಟು ದೊಡ್ಡ ಬಿರುಕು ಬಿಟ್ಟಿದೆ. ಬಿರುಕು ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 48 ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡ ಕುಸಿಯುವ ಭೀತಿ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡ ಕುಸಿದು ದುರಂತ ಬೆನ್ನಲ್ಲೇ ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ

ಈಗಾಗಲೇ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಯುವ ನೀರಿನ ಪ್ರಮಾಣ ಕ್ಷೀಣಿಸಿದರೂ ನಗರಸಭೆ ಅಧಿಕಾರಿಗಳು ಎಚ್ಚರಿಕೆ ವಹಿಸಿಲ್ಲ. ಸರ್ಕಾರದ ಸರ್ವೆ ಇಲಾಖೆಯಿಂದ ನದಿ ಪಾತ್ರದ ಒತ್ತುವರಿ ಸಮೀಕ್ಷೆ ವರದಿ ಇದ್ದರೂ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48ರ ಆಸುಪಾಸಿನಲ್ಲಿರುವ ಮಾದಾವರ, ರಾವುತನಹಳ್ಳಿ, ಅಡಕಮಾರನಹಳ್ಳಿ, ದೇವಣ್ಣನಪಾಳ್ಯ, ದಾಸನಪುರ ಭಾಗದಲ್ಲಿ ಅರ್ಕಾವತಿ ನದಿ ಹರಿಯುತ್ತದೆ. ಒತ್ತುವರಿ ತೆರವಿಗಾಗಿ ಬೆಂಗಳೂರು ಜಲಮಂಡಳಿ ಅರ್ಕಾವತಿ-ಕುಮದ್ವತಿ ನದಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಸದ್ಯ ನಿರ್ಲಕ್ಷ್ಯ ಹಿನ್ನೆಲೆ ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಳ್ಳಲಾಗಿದೆ.

ಅನುಮತಿಗೂ ಮೀರಿ‌ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ತೆರವು

ಇನ್ನು ಇದೇ ರೀತಿಯಾಗಿ ಬೆಂಗಳೂರಿನ ವಾಜರಹಳ್ಳಿ ಬಾಲಾಜಿ ಲೇಔಟ್​​ನಲ್ಲಿ ಬಿಬಿಎಂಪಿಯಿಂದ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ತೆರವು ಮಾಡಲಾಗಿದೆ. ಅನುಮತಿಗೂ ಮೀರಿ‌ ಕಟ್ಟಡ ಕಟ್ಟಿದ ಹಿನ್ನೆಲೆ  ಮಹೇಂದರ್ ಎಂಬುವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ವಲಯ ಆಯುಕ್ತ ಸತೀಶ್, ಜಂಟಿ ಆಯುಕ್ತ ಅಜಯ್ ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಮೂವರ ಶವ ಹೊರಕ್ಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಅಕ್ಕಪಕ್ಕ ಮನೆಗಳಿರುವ ಕಾರಣ ಜೆಸಿಬಿ ಬಳಸದೇ ಕಾರ್ಮಿಕರನ್ನು ನೇಮಿಸಿಕೊಂಡು ತೆರವು ಮಾಡಲಾಗಿದೆ. ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದರೂ ಕಟ್ಟಡದ ಮಾಲೀಕರು ಸ್ಪಂದಿಸಿರಲಿಲ್ಲ. ಹಾಗಾಗಿ ಇಂದು ಖುದ್ದು ಆಯುಕ್ತರೇ ಡೆಮಾಲಿಷ್ ಮಾಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.