ಬೆಂಗಳೂರಿನ ರಾಮೇಶ್ವರಂ‌ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: 5ನೇ ಆರೋಪಿ ಬಂಧನ

|

Updated on: May 24, 2024 | 7:37 PM

ಬೆಂಗಳೂರಿನ ರಾಮೇಶ್ವರಂ‌ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳಿಂದ 5ನೇ ಆರೋಪಿಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ಶೋಹೆಬ್ ಅಹ್ಮದ್ ಮಿರ್ಜಾ@ಛೋಟು(35) ಬಂಧಿತ ಆರೋಪಿ. ಎಲ್‌ಇಟಿ ಪಿತೂರಿ ಕೇಸ್‌ನಲ್ಲೂ ಶೋಹೆಬ್ ಅಹ್ಮದ್ ಶಿಕ್ಷೆಗೊಳಗಾಗಿದ್ದ. 

ಬೆಂಗಳೂರಿನ ರಾಮೇಶ್ವರಂ‌ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: 5ನೇ ಆರೋಪಿ ಬಂಧನ
ಬೆಂಗಳೂರಿನ ರಾಮೇಶ್ವರಂ‌ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: 5ನೇ ಆರೋಪಿ ಬಂಧನ
Follow us on

ಬೆಂಗಳೂರು, ಮೇ 24: ಬೆಂಗಳೂರಿನ ರಾಮೇಶ್ವರಂ‌ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ (Rameshwaram Cafe Bomb Blast) ಸಂಬಂಧ ಎನ್​ಐಎ ಅಧಿಕಾರಿಗಳಿಂದ 5ನೇ ಆರೋಪಿಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ಶೋಹೆಬ್ ಅಹ್ಮದ್ ಮಿರ್ಜಾ@ಛೋಟು(35) ಬಂಧಿತ ಆರೋಪಿ. ಎಲ್‌ಇಟಿ ಪಿತೂರಿ ಕೇಸ್‌ನಲ್ಲೂ ಶೋಹೆಬ್ ಅಹ್ಮದ್ ಶಿಕ್ಷೆಗೊಳಗಾಗಿದ್ದ. 2018ರಲ್ಲಿ ಜೈಲಿನಿಂದ ಹೊರಬಂದ ಬಳಿಕ ಮತೀನ್ ಸ್ನೇಹ ಬೆಳೆಸಿದ್ದ. ಬಳಿಕ ವಿದೇಶದಲ್ಲಿರುವ ಶಂಕಿತ ಆನ್‌ಲೈನ್‌ ಹ್ಯಾಂಡ್ಲರ್‌ಗೆ ಅಬ್ದುಲ್ ಮತೀನ್‌ನನ್ನು ಶೋಹೆಬ್ ಅಹ್ಮದ್ ಪರಿಚಯ ಮಾಡಿದ್ದ.

ಹ್ಯಾಂಡ್ಲರ್, ಅಬ್ದುಲ್ ನಡುವಿನ ಸಂವಹನಕ್ಕಾಗಿ ಐಡಿ ಸಹ ನೀಡಿದ್ದ. ಎನ್‌ಕ್ರಿಪ್ಟ್‌ ಸಂವಹನಕ್ಕಾಗಿ ಶೋಹೆಬ್ ಇ-ಮೇಲ್ ಐಡಿ ನೀಡಿದ್ದ. ಕಳೆದ 3 ದಿನಗಳ ಹಿಂದಷ್ಟೇ ನಾಲ್ಕು ರಾಜ್ಯಗಳ 11 ಸ್ಥಳಗಳ‌ಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣ: ಹುಬ್ಬಳ್ಳಿಯಲ್ಲಿ ಇಬ್ಬರು NIA ವಶಕ್ಕೆ

ಕರ್ನಾಟಕದ ಹುಬ್ಬಳ್ಳಿಯಲ್ಲೂ ದಾಳಿ ನಡೆಸಿ ಶೋಹೆಬ್ ಮತ್ತು ಸಹೋದರನನ್ನ ವಶಕ್ಕೆ ಪಡೆಯಲಾಗಿತ್ತು. ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ್ದ NIA ಅಧಿಕಾರಿಗಳು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಹೆಬ್ ಮಿರ್ಜಾನನ್ನು ಬಂಧಿಸಿದ್ದಾರೆ.

ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶೋಯೆಬ್‌ ಅಬ್ದುಲ್ ಮಿರ್ಜಾ, ಹುಬ್ಬಳ್ಳಿಯಲ್ಲಿ ಗೌಸಿಯಾ ಟೌನ್ ವಾಸವಿದ್ದ. ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ಈ ಹಿಂದೆ ಒಂದು ಬಾರಿ NIA ತಂಡ ಹುಬ್ಬಳ್ಳಿಗೆ ಆಗಮಿಸಿತ್ತು. ಇತ್ತೀಚೆಗೆ ಮತ್ತೆ ದಾಳಿ ಮಾಡಿ ಶೋಯೆಬ್‌ ಅಬ್ದುಲ್ ಮಿರ್ಜಾನನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್​ಐಎ

ಶೋಯೆಬ್‌ ಪತ್ನಿ ನಿವಾಸ ಬೆಳಗಾವಿಯಲ್ಲಿ ವಿಚಾರಣೆ ಮಾಡಲಾಗಿದೆ. ಹುಬ್ಬಳ್ಳಿಯ ಗೌಸಿಯಾ ಟೌನ್ ಎರಡು ತಂಡದಿಂದ ದಾಳಿ ನಡಿದಿತ್ತು. ಹುಬ್ಬಳ್ಳಿಯ ಅಲ್ತಾಪ್ ನಗರದಲ್ಲಿ ಒಂದು ತಂಡದಿಂದ ದಾಳಿ‌ ಮಾಡಲಾಗಿತ್ತು. ಪ್ರಕರಣ ಹಿನ್ನಲೆ ಹುಬ್ಬಳ್ಳಿ ನಗರದಲ್ಲಿ NIA ಒಂದು ತಂಡ ಬೀಡು ಬಿಟ್ಟಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ರಾಮೇಶ್ವರಂ ಕೆಪೆ ಸ್ಪೋಟ ಪ್ರಕರಣ ಸದ್ದು ಮಾಡುತ್ತಿದೆ. ಸದ್ಯ ಶೋಯೆಬ್‌ ಅಬ್ದುಲ್ ಮಿರ್ಜಾನನ್ನು ಅರೆಸ್ಟ್​ ಮಾಡಿದ್ದು, ಮತ್ಯಾರನ್ನ NIA ತಂಡ ಟಾರ್ಗೆಟ್ ಮಾಡಿದೆ, ಯಾರನ್ನ ವಿಚಾರಣೆ ಮಾಡತ್ತೆ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:23 pm, Fri, 24 May 24