ತೋಟವನ್ನೇ ಪ್ರಾಣಿ ಪಕ್ಷಿಗಳ ಆಹಾರಕ್ಕೆ ಮೀಸಲಿಟ್ಟ ರೈತ ದೊರೆ

|

Updated on: Sep 19, 2019 | 2:29 PM

ಮನುಷ್ಯ ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ತನಗೆ ಅದರಿಂದ ಏನಾದರು ಉಪಯೋಗವಾಗುವುದ ಎಂದು ಅಪೇಕ್ಷೆ ಪಡುವುದು ಸಾಮಾನ್ಯ. ಲಾಭವಿಲ್ಲದ ಕೆಲಸಮಾಡುವ ಮನಸ್ಸು ತುಂಬ ವಿರಳ  ಆದರೆ ಇಲ್ಲಿ ಜಿ.ಬಿ.ರೆಡ್ಡಿ ದಂಪತಿ ತಮ್ಮ ತೋಟದಲ್ಲಿ ವಿವಿಧ ತಳಿಯ ಹಣ್ಣುಗಳನ್ನ ಬೆಳೆಸಿದ್ದು ಅವುಗಳನ್ನ ಪ್ರಾಣಿ ಪಕ್ಷಿಗಳಿಗೆ ಮೀಸಲಿಟ್ಟಿದ್ದಾರೆ. ಇವರು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮರಾಠಹೊಸಹಳ್ಳಿ ಗ್ರಾಮದ ನಿವಾಸಿಗಳು, ದಿನ, ರಾತ್ರಿ ಎನ್ನದೆ ತೋಟದಲ್ಲಿ ಕಾರ್ಯನಿರ್ವಹಿಸಿ ಬೆಳೆಯನ್ನು ಯಾವ ರೋಗವು ತಗುಲದ ಹಾಗೆ ಆರೋಗ್ಯಕರವಾಗಿ ಬೆಳೆಸುತ್ತಿದ್ದು, ಆ ಹಣ್ಣುಗಳನ್ನು ಸಂಪೂರ್ಣವಾಗಿ ಪ್ರಾಣಿ […]

ತೋಟವನ್ನೇ ಪ್ರಾಣಿ ಪಕ್ಷಿಗಳ ಆಹಾರಕ್ಕೆ ಮೀಸಲಿಟ್ಟ ರೈತ ದೊರೆ
Follow us on

ಮನುಷ್ಯ ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ತನಗೆ ಅದರಿಂದ ಏನಾದರು ಉಪಯೋಗವಾಗುವುದ ಎಂದು ಅಪೇಕ್ಷೆ ಪಡುವುದು ಸಾಮಾನ್ಯ. ಲಾಭವಿಲ್ಲದ ಕೆಲಸಮಾಡುವ ಮನಸ್ಸು ತುಂಬ ವಿರಳ  ಆದರೆ ಇಲ್ಲಿ ಜಿ.ಬಿ.ರೆಡ್ಡಿ ದಂಪತಿ ತಮ್ಮ ತೋಟದಲ್ಲಿ ವಿವಿಧ ತಳಿಯ ಹಣ್ಣುಗಳನ್ನ ಬೆಳೆಸಿದ್ದು ಅವುಗಳನ್ನ ಪ್ರಾಣಿ ಪಕ್ಷಿಗಳಿಗೆ ಮೀಸಲಿಟ್ಟಿದ್ದಾರೆ.

ಇವರು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮರಾಠಹೊಸಹಳ್ಳಿ ಗ್ರಾಮದ ನಿವಾಸಿಗಳು, ದಿನ, ರಾತ್ರಿ ಎನ್ನದೆ ತೋಟದಲ್ಲಿ ಕಾರ್ಯನಿರ್ವಹಿಸಿ ಬೆಳೆಯನ್ನು ಯಾವ ರೋಗವು ತಗುಲದ ಹಾಗೆ ಆರೋಗ್ಯಕರವಾಗಿ ಬೆಳೆಸುತ್ತಿದ್ದು, ಆ ಹಣ್ಣುಗಳನ್ನು ಸಂಪೂರ್ಣವಾಗಿ ಪ್ರಾಣಿ ಪಕ್ಷಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ. ಅಲ್ಲದೆ ಈ ಹಣ್ಣುಗಳನ್ನ ಯಾರು ತಿನ್ನೋದಿಲ್ಲ, ತನ್ನ ಮನೆ ಮಕ್ಕಳಿಗೂ ಕೂಡಾ ಅದನ್ನ ತಿನ್ನಲು ಬಿಡೋದಿಲ್ಲ.

ಪ್ರಾಣಿ ಪಕ್ಷಿಗಳ ಮೇಲಿರುವ ಇವರ ಪ್ರೀತಿಗೆ ಜನ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಇವರು ಕೋಲಾರದಲ್ಲೇ ಪ್ರೀತಿಯ ಮನುಷ್ಯನಾಗಿ ಮಾದರಿಯಾಗಿದ್ದಾರೆ.

Published On - 2:03 pm, Thu, 19 September 19