ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ರಾಜಕಾಲುವೆ ತಡೆಗೋಡೆಯನ್ನು ಒಡೆದ ಪರಿಣಾಮ ಕೊಳಚೆ ನೀರು ಮನೆಗಳಿಗೆ ನುಗ್ಗಿದೆ. ಮನೆಗಳಿಗೆ ಕೊಳಚೆ ನೀರು ನುಗ್ಗಿದ್ದರಿಂದ ಹತ್ತಾರು ಕುಟುಂಬಗಳು ಅತಂತ್ರಗೊಂಡಿವೆ. ಜೊತೆಗೆ ರಾಜಕಾಲುವೆ ಪಕ್ಕದಲ್ಲೇ ಇದ್ದ ವೃದ್ಧಾಶ್ರಮಕ್ಕೂ ಕೊಳಚೆ ನೀರು ನುಗ್ಗಿದ್ದರಿಂದ ವೃದ್ಧಾಶ್ರಮದಲ್ಲಿದ್ದ 50ಕ್ಕೂ ಹೆಚ್ಚು ವೃದ್ಧರು ಬೀದಿ ಪಾಲಾಗುವಂತಾಗಿದೆ. ಈ ಘಟನೆ ಲಗ್ಗೆರೆಯ ವಾರ್ಡ್ ನಂಬರ್ 41ರಲ್ಲಿ ನಡೆದಿದೆ.
ವೃಷಭಾವತಿ ನದಿಗೆ ಅಡ್ಡಲಾಗಿ ರಾಜಕಾಲುವೆ ಕಟ್ಟಲಾಗಿತ್ತು. ರಾಜಕಾಲುವೆ ಪಕ್ಕದಲ್ಲೇ ಇಪ್ಪತ್ತಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿತ್ತು. ಆದರೆ ಇದೀಗ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ತಡೆಗೋಡೆಯನ್ನು ಒಡೆದಿದ್ದಾರೆ. ಮನೆಗಳಿಗೆ ಮಾಹಿತಿ ನೀಡದೇ ರಾಜಕಾಲುವೆ ಒಡೆಯಲಾಗಿದೆ ಎಂದು ಸ್ಥಳೀಯ ನಿವಾಸಿಗಳ ಆರೋಪಿಸುತ್ತಿದ್ದಾರೆ.
ಸ್ಥಳೀಯ ಜೆಡಿಎಸ್ ಮುಖಂಡ ರುದ್ರೇಗೌಡನವರೇ ರಾಜಕಾಲುವೆ ಅಡ್ಡಗೋಡೆಯನ್ನು ಒಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರುದ್ರೇಗೌಡ ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಜೆಸಿಬಿ ಕರೆಸಿ ರಾಜಕಾಲುವೆ ಅಡ್ಡಗೋಡೆ ಒಡೆಸಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ. ಕೊಳಚೆ ನೀರು ನುಗ್ಗಿರುವ ಮನೆ ಮಾಲೀಕರ ಹಾಗೂ ರುದ್ರೇಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಪೊಲೀಸರು ಇದ್ದರು ಏನೂ ಮಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ
ಏಕಾಏಕಿ ಬಜ್ಪೆ ಮಂಗಳೂರು ಏರ್ಪೋರ್ಟ್ ರನ್ವೇಗೆ ನುಗ್ಗಿದ ಅಪರಿಚಿತ ವ್ಯಕ್ತಿ! ಮುಂದೇನಾಯ್ತು?
(BBMP officials smashed a Raja Kaluve wall in laggere)
Published On - 2:23 pm, Tue, 6 July 21