ಏಕಾಏಕಿ ಬಜ್ಪೆ ಮಂಗಳೂರು ಏರ್ಪೋರ್ಟ್ ರನ್ವೇಗೆ ನುಗ್ಗಿದ ಅಪರಿಚಿತ ವ್ಯಕ್ತಿ! ಮುಂದೇನಾಯ್ತು?
ಶಂಕಿತ ವ್ಯಕ್ತಿ ಪಶ್ಚಿಮ ಬಂಗಾಳ ಮೂಲದ ರಾಕೇಶ್ ಎಂದು ತಿಳಿದು ಬಂದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಿಂದ(CISF) ರಾಕೇಶ್ ವಶಕ್ಕೆ ಪಡೆಯಲಾಗಿದೆ.
ಮಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಬಜ್ಪೆಯಲ್ಲಿರುವ ಮಂಗಳೂರು ಏರ್ಪೋರ್ಟ್ನ ರನ್ವೇಗೆ ನುಗ್ಗಿದ ಘಟನೆ ನಡೆದಿದೆ. ಓಲ್ಡ್ ಏರ್ಪೋರ್ಟ್ ನಿಂದ ಶಂಕಿತ ವ್ಯಕ್ತಿ ಎಂಟ್ರಿಯಾಗಿದ್ದಾನೆ. ಸದ್ಯ ಶಂಕಿತನನ್ನು ಏರ್ಪೋರ್ಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬಜ್ಪೆ ಠಾಣೆ ಪೊಲೀಸರು ಶಂಕಿತ ವ್ಯಕ್ತಿ ವಿಚಾರಣೆ ನಡೆಸುತ್ತಿದ್ದಾರೆ.
ಶಂಕಿತ ವ್ಯಕ್ತಿ ಪಶ್ಚಿಮ ಬಂಗಾಳ ಮೂಲದ ರಾಕೇಶ್ ಎಂದು ತಿಳಿದು ಬಂದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಿಂದ(CISF) ರಾಕೇಶ್ ವಶಕ್ಕೆ ಪಡೆಯಲಾಗಿದ್ದು ದಾರಿ ತಪ್ಪಿ ರನ್ವೇಗೆ ಪ್ರವೇಶಿಸಿದ್ದೆ ಎಂದು ಹೇಳಿದ್ದಾನೆ. ಲಾರಿ ಕ್ಲೀನರ್ ರಾಕೇಶ್ ಒಬ್ಬನನ್ನೇ ಲಾರಿಯಲ್ಲಿ ಬಿಟ್ಟು ಚಾಲಕ ಹೊರಗೆ ಹೋಗಿದ್ದ. ಈ ವೇಳೆ ದಾರಿ ಗೊತ್ತಿಲ್ಲದೆ ರನ್ವೇ ಪ್ರದೇಶಕ್ಕೆ ರಾಕೇಶ್ ಬಂದಿದ್ದಾನೆ. ಕೂಡಲೇ ರಾಕೇಶ್ನನ್ನು CISF ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ರಾಕೇಶ್ ವಿರುದ್ಧ ಮೊಕದ್ದಮೆ ಹಾಕಲಾಗಿದೆ. ಘಟನೆ ವೇಳೆ ಏರ್ಪೋರ್ಟ್ನಲ್ಲಿದ್ದ ಪ್ರಯಾಣಿಕರಲ್ಲಿ ಕೊಂಚ ಆತಂಕ ವ್ಯಕ್ತವಾಗಿತ್ತು.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಸೇತುವೆ ಕುಸಿತ; ಕಾವೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್
Published On - 2:11 pm, Tue, 6 July 21