ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಸೇತುವೆ ಕುಸಿತ; ಕಾವೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್

ಮಂಗಳೂರು ನಗರದಿಂದ ವಿಮಾನ ನಿಲ್ದಾಣದತ್ತ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ ಗುರುಪುರ ರಸ್ತೆಯಾಗಿ ತೆರಳಬೇಕಿದೆ. ಸದ್ಯ ಮಂಗಳೂರಿನ ಕಾವೂರಿನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಸೇತುವೆ ಕುಸಿತ; ಕಾವೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Follow us
TV9 Web
| Updated By: Skanda

Updated on:Jun 15, 2021 | 10:54 AM

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಸೇತುವೆ ಕುಸಿದಿರುವ ಘಟನೆ ಇಂದು ನಡೆದಿದೆ. ಮಂಗಳೂರು ಹೊರವಲಯದ ಬಜ್ಪೆ-ಮರವೂರು ನಡುವಿನ ಸೇತುವೆ ಕುಸಿದಿದ್ದು, ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹೊಸ ಸೇತುವೆ ಕಾಮಗಾರಿ ನಡೆಯುತ್ತಿದ್ದ ಕಾರಣ ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಹೀಗಾಗಿ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯಾಗಿದೆ.

ಸೇತುವೆ ಕುಸಿದಿರುವ ಕಾರಣ ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಸಂಪೂರ್ಣ ಸ್ಥಗಿತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ಬಂದ್ ಮಾಡಿರುವ ಮಂಗಳೂರು ಪೊಲೀಸರು, ಉಡುಪಿಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.

ಮಂಗಳೂರು ನಗರದಿಂದ ವಿಮಾನ ನಿಲ್ದಾಣದತ್ತ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ ಗುರುಪುರ ರಸ್ತೆಯಾಗಿ ತೆರಳಬೇಕಿದೆ. ಸದ್ಯ ಮಂಗಳೂರಿನ ಕಾವೂರಿನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

MANGALURU BRIDGE DAMAGE

ಸೇತುವೆ ಕುಸಿದಿರುವ ದೃಶ್ಯ

ಸಂಕ್ಷಿಪ್ತ ಮಾಹಿತಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಮರವೂರು ಸೇತುವೆ ಕುಸಿದಿರುವ ಕಾರಣ ಬದಲಿ ರಸ್ತೆಗಳು ಹೀಗಿವೆ: ಕಾವೂರು ಕೂಳೂರು – ಕೆ ಬಿ ಎಸ್ ಜೋಕಟ್ಟೆ, ಪೋರ್ಕೊಡಿ – ಬಜಪೆ ಅಥವಾ ಪಚ್ಚನಾಡಿ – ವಾಮಂಜೂರ್ – ಗುರುಪುರ ಕೈಕಂಬ – ಬಜಪೆ.

ಇದನ್ನೂ ಓದಿ: ಭಾರತದ ಮೂಲಕ ಕೆನಡಾಕ್ಕೆ ಅಕ್ರಮವಾಗಿ ತೆರಳುತ್ತಿದ್ದ ಶ್ರೀಲಂಕಾ ಪ್ರಜೆಗಳ ಬಂಧನ; ಮಾನವ ಕಳ್ಳಸಾಗಣೆ ಜಾಲ ಪತ್ತೆಹಚ್ಚಿದ ಮಂಗಳೂರು ಪೊಲೀಸರು 

ಮಂಗಳೂರು: ಅಗತ್ಯ ವಸ್ತುವಿನ ಸೋಗಿನಲ್ಲಿ ಹೊರ ರಾಜ್ಯದಿಂದ ಗಾಂಜಾ ಸಪ್ಲೇ; ನಾಲ್ವರು ವಶ

Published On - 7:50 am, Tue, 15 June 21