ಇಂದು ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ಅವಕಾಶ

Sanchari Vijay Last Sight: ಸರ್ಕಾರದ ಕಡೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹುಟ್ಟೂರು ಪಂಚನಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ಅವಕಾಶ
ಸಂಚಾರಿ ವಿಜಯ್​ ‘ಮೇಲೊಬ್ಬ ಮಾಯಾವಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾ ಹೆಸರಿನಂತೆ ಸಂಚಾರಿ ವಿಜಯ್​ ಕೂಡ ಮೇಲಿರುವ ಮಾಯಾವಿಯ ಆಟದ ಕೈಗೊಂಬೆಯಾಗಿ ಮೃತಪಟ್ಟಿದ್ದು ನಿಜಕ್ಕೂ ಬೇಸರದ ಸಂಗತಿ.

ಬೆಂಗಳೂರು: ನಟ ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಪೋಲೊ ಆಸ್ಪತ್ರೆ ಬಳಿ ನಿರ್ದೇಶಕ ಮಂಜು ಮಂಸೋರೆ ತಿಳಿಸಿದ್ದಾರೆ. ಸರ್ಕಾರದ ಕಡೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹುಟ್ಟೂರು ಪಂಚನಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯ್​ ಅವರ ಮಿದುಳು ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದು ಪರೀಕ್ಷೆಯ ಮೂಲಕ ದೃಢಪಟ್ಟಿದ್ದು, ರಾತ್ರಿ 9:30ಕ್ಕೆ ಅಂಗಾಂಗ ಬೇರ್ಪಡಿಸುವ ಕಾರ್ಯ ಆರಂಭವಾಗಲಿದೆ. ಇದು ಬೆಳಗ್ಗೆವರೆಗೂ ನಡೆಯಲಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯ ಡಾ.ಅರುಣ್ ನಾಯ್ಕ್ ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್​ ತಲೆಗೆ ಏಟು ಬಿದ್ದಿತ್ತು. ತೀವ್ರವಾಗಿ ಏಟು ಬಿದ್ದ ಹಿನ್ನೆಲೆಯಲ್ಲಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಅವರ ಮಿದುಳು ಸಂಪೂರ್ಣವಾಗಿ ಕೆಲಸ ನಿಲ್ಲಿಸಿದೆ. ಈ ಮೂಲಕ ಅವರು ಮೃತಪಟ್ಟಿರುವುದು ಬಹುತೇಕ ಖಚಿತವಾದಂತಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಾ.ಅರುಣ್ ನಾಯ್ಕ್, ‘ಸಂಚಾರಿ ವಿಜಯ್ ಬ್ರೈನ್ ಟೆಸ್ಟ್ ಮುಕ್ತಾಯವಾಗಿದೆ. ಎರಡು ಅಪ್ನಿಯಾ ಟೆಸ್ಟ್​ನಲ್ಲೂ ಪಾಸಿಟಿವ್ ಬಂದಿವೆ. ಕುಟುಂಬಸ್ಥರ ಬಳಿ ಅಂಗಾಂಗ ದಾನ ಪತ್ರಕ್ಕೆ ಸಹಿ ಪಡೆದಿದ್ದೇವೆ. ರಾತ್ರಿ 9.30ರ ಸುಮಾರಿಗೆ ಅಂಗಾಂಗ ಬೇರ್ಪಡಿಸುವ ಕಾರ್ಯ ಆರಂಭವಾಗಲಿದೆ. ಆನಂತರ ಅಂಗಾಂಗ ಕಸಿ ಮಾಡುವ ಕೆಲಸ ನಡೆಯಲಿದೆ. ಅಂಗಾಂಗ ಕಸಿ ಕಾರ್ಯ ನಾಳೆ ಬೆಳಗ್ಗೆವರೆಗೂ ನಡೆಯಲಿದೆ’ ಎಂದಿದ್ದಾರೆ.

’ಸಂಚಾರಿ ವಿಜಯ್​ರವರ ಎಲ್ಲ ಅಂಗಾಂಗ ಸಮರ್ಪಕವಾಗಿದೆ. 1 ಲಿವರ್, 2 ಕಿಡ್ನಿ, 2 ಕಣ್ಣು, ಹೃದಯದ ವಾಲ್ವ್ ಪಡೆಯುತ್ತಿದ್ದೇವೆ. ಮುಂದಿನ ಹೆಲ್ತ್ ಬುಲೆಟಿನ್​ನಲ್ಲಿ ಅಪ್​ಡೇಟ್ ಮಾಡುತ್ತೇವೆ.  ಅಂಗಾಂಗ ಕಸಿ ಮಾಡುವ ಪ್ರಕ್ರಿಯೆ ಬೆಳಗ್ಗೆವರೆಗೆ ನಡೆಯಲಿದೆ’ ಎಂದು ಅವರು ಹೇಳಿದ್ದಾರೆ.

ನಟ ಸಂಚಾರಿ ವಿಜಯ್ ಡೆತ್ ಡಿಕ್ಲೆರೇಷನ್ ಪ್ರಕ್ರಿಯೆ ಆರಂಭಗೊಂಡಿದ್ದು, ರಾತ್ರಿ  12.30 ರಿಂದ 1 ಗಂಟೆ ವೇಳೆಗೆ ಅಧಿಕೃತವಾಗಿ ಡೆತ್ ಡಿಕ್ಲೆರೇಷನ್ ಮಾಡುವ ಸಾಧ್ಯತೆಯಿದೆ.  ಅಂಗಾಗ ದಾನ ಪ್ರಕ್ರಿಯೆ ಮುಗಿದ ಬಳಿಕವೇ ಡೆತ್ ಡಿಕ್ಲೆರೇಷನ್ ಮಾಡಲಾಗುವುದು. ಸದ್ಯ ಬ್ರೈನ್ ಡೆತ್ ಎಂದು ವೈದ್ಯ ಅರುಣ್ ನಾಯಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು

ನಿಧನರಾಗುವುದಕ್ಕೂ ಎರಡು ದಿನ ಮೊದಲು ಮನದ ನೋವು ಹಂಚಿಕೊಂಡಿದ್ದ ಸಂಚಾರಿ ವಿಜಯ್​

(Sanchari Vijay dead and the Ravindra Kalakshetra is arranged for visitors to have last sights on Tuesday Morning)

Click on your DTH Provider to Add TV9 Kannada