ನಿಧನರಾಗುವುದಕ್ಕೂ ಎರಡು ದಿನ ಮೊದಲು ಮನದ ನೋವು ಹಂಚಿಕೊಂಡಿದ್ದ ಸಂಚಾರಿ ವಿಜಯ್​

ಸಂಚಾರಿ ವಿಜಯ್​ ಇತ್ತೀಚೆಗೆ ಕಲರ್ಸ್​ ಕನ್ನಡ ವಾಹಿನಿ ಪೇಜ್​ನಲ್ಲಿ ಲೈವ್​ ಬಂದಿದ್ದರು. ಈ ವೇಳೆ ಅವರು ‘ನಾನು ಅವನಲ್ಲ ಅವಳು’ ಸಿನಿಮಾ ಬಗ್ಗೆ ಮಾತನಾಡಿದ್ದರು.

ನಿಧನರಾಗುವುದಕ್ಕೂ ಎರಡು ದಿನ ಮೊದಲು ಮನದ ನೋವು ಹಂಚಿಕೊಂಡಿದ್ದ ಸಂಚಾರಿ ವಿಜಯ್​
ಸಂಚಾರಿ ವಿಜಯ್
Follow us
ರಾಜೇಶ್ ದುಗ್ಗುಮನೆ
|

Updated on: Jun 14, 2021 | 9:15 PM

ನಟ ಸಂಚಾರಿ ವಿಜಯ್​ ಮೃತಪಟ್ಟಿದ್ದಾರೆ. ಸಣ್ಣ ವಯಸ್ಸಿಗೆ ಅವರು ಅಸುನೀಗಿರುವ ವಿಚಾರ ಸ್ಯಾಂಡಲ್​ವುಡ್​ ಮಂದಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಸಂಚಾರಿ ವಿಜಯ್​ ಇತ್ತೀಚೆಗೆ ಲೈವ್​ ಬಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದರು. ಈಗ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬುದು ನಿಜಕ್ಕೂ ಬೇಸರದ ಸಂಗತಿ.

ಸಂಚಾರಿ ವಿಜಯ್​ ಇತ್ತೀಚೆಗೆ ವಾಹಿನಿ ಒಂದರ  ಪೇಜ್​ನಲ್ಲಿ ಲೈವ್​ ಬಂದಿದ್ದರು. ಈ ವೇಳೆ ಅವರು ‘ನಾನು ಅವನಲ್ಲ ಅವಳು’ ಸಿನಿಮಾ ಬಗ್ಗೆ ಮಾತನಾಡಿದ್ದರು. ಈ ಚಿತ್ರದ ಬಗ್ಗೆ ಅವರಿಗೆ ನೋವೊಂದು ಹಾಗೆಯೇ ಉಳಿದುಕೊಂಡಿದೆಯಂತೆ. ಇದನ್ನು ಅವರು ಮನಬಿಚ್ಚಿ ಹೇಳಿಕೊಂಡಿದ್ದರು.

‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಸಂಚಾರಿ ವಿಜಯ್​ ಅದ್ಭುತವಾಗಿ ನಟಿಸಿದ್ದರು. ಆದರೆ, ಈ ಸಿನಿಮಾ ಹೆಚ್ಚು ಜನರಿಗೆ ತಲುಪಿಲ್ಲ ಎನ್ನುವ ಕೊರಗು ಅವರಲ್ಲಿದೆಯಂತೆ. ಫೇಸ್​ಬುಕ್ ​ಲೈವ್​ನಲ್ಲಿ ಅಭಿಮಾನಿಯೋರ್ವ ಆ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು. ಈ ವೇಳೆ ಸಂಚಾರಿ ವಿಜಯ್​, ‘ಈ ಸಿನಿಮಾ ಬಗ್ಗೆ ಅನೇಕರು ಮಾತನಾಡಿದ್ದಾರೆ. ಆ ಬಗ್ಗೆ ನಿಜ್ಜಕ್ಕೂ ಖುಷಿ ಇದೆ. ಆದರೆ, ಈ ಸಿನಿಮಾ ಹೆಚ್ಚು ಜನರಿಗೆ ರೀಚ್​​ ಆಗಿಲ್ಲ ಎನ್ನುವ ಬೇಸರ ಇದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಹೆಚ್ಚು ಜನರಿಗೆ ರೀಚ್​ ಆಗೋಕೆ ಏನು ಮಾಡಬೇಕು ಎನ್ನುವ ಬಗ್ಗೆ ನಾವು ಯೋಚಿಸುತ್ತಿದ್ದೆವೆ ’ ಎಂದು  ಹೇಳಿದ್ದರು.

2015ರಲ್ಲಿ ತೆರೆಗೆ ಬಂದ ‘ನಾನು ಅವನಲ್ಲ ಅವಳು’ ಸಿನಿಮಾ ಸಂಚಾರಿ ವಿಜಯ್​ ಅವರ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಚಿತ್ರದಲ್ಲಿ ಅವರ ಅದ್ಭುತ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕವು. ಈ ಚಿತ್ರ ತೆರೆಕಂಡ ನಂತರ ಅವರಿಗೆ ಅವಕಾಶಗಳು ತೀವ್ರವಾಗಿ ಹೆಚ್ಚಿದವು. 2017 ಮತ್ತು 2018ರಲ್ಲಿ ಅವರ ನಟನೆಯ 8-9 ಚಿತ್ರಗಳು ತೆರೆಗೆ ಬಂದವು. ‘ಆ್ಯಕ್ಟ್​ 1978’ ಅವರ ಕೊನೆಯ ಚಿತ್ರ.

 ಇದನ್ನೂ ಓದಿ:

Sanchari Vijay: ಸಂಚಾರಿ ವಿಜಯ್​ ಎಂಬ ಪ್ರತಿಭಾವಂತ ಕಲಾವಿದನಿಗೆ, ಅದಕ್ಕೂ ಮಿಗಿಲಾದ ಮಾನವೀಯ ವ್ಯಕ್ತಿಗೆ ಭಾವಪೂರ್ಣ ವಿದಾಯ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ