ಭಾರತದ ಮೂಲಕ ಕೆನಡಾಕ್ಕೆ ಅಕ್ರಮವಾಗಿ ತೆರಳುತ್ತಿದ್ದ ಶ್ರೀಲಂಕಾ ಪ್ರಜೆಗಳ ಬಂಧನ; ಮಾನವ ಕಳ್ಳಸಾಗಣೆ ಜಾಲ ಪತ್ತೆಹಚ್ಚಿದ ಮಂಗಳೂರು ಪೊಲೀಸರು

Human Trafficking in Mangaluru: ತಮಿಳುನಾಡು ಚುನಾವಣೆ ನಡೆದ ಕಾರಣ ತಪಾಸಣೆ ಚುರುಕುಗೊಂಡಿದ್ದರಿಂದ ಅವರನ್ನು ಮಂಗಳೂರಿಗೆ ತಂದು ಬಿಡಲಾಗಿತ್ತು. ಮಂಗಳೂರಿಗೆ ಬಂದು ಇಲ್ಲಿನ ಲಾಡ್ಜ್ ಗಳಲ್ಲಿ ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು.

ಭಾರತದ ಮೂಲಕ ಕೆನಡಾಕ್ಕೆ ಅಕ್ರಮವಾಗಿ ತೆರಳುತ್ತಿದ್ದ ಶ್ರೀಲಂಕಾ ಪ್ರಜೆಗಳ ಬಂಧನ; ಮಾನವ ಕಳ್ಳಸಾಗಣೆ ಜಾಲ ಪತ್ತೆಹಚ್ಚಿದ ಮಂಗಳೂರು ಪೊಲೀಸರು
ಮಾನವ ಕಳ್ಳಸಾಗಣೆ ಜಾಲ ಬಯಲಿಗೆಳೆದ ಮಂಗಳೂರು ಪೊಲೀಸರು
Follow us
TV9 Web
| Updated By: guruganesh bhat

Updated on: Jun 11, 2021 | 4:32 PM

ಮಂಗಳೂರು: ಬೃಹತ್​ ಮಾನವ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ಪೊಲೀಸರು ಶ್ರೀಲಂಕಾದ 38 ಪ್ರಜೆಗಳನ್ನು ಬಂಧಿಸಿದ್ದಾರೆ. ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ಬಂದಿದ್ದ ಶ್ರೀಲಂಕಾದ ಪ್ರಜೆಗಳು ನಂತರ ತಮಿಳುನಾಡಿನಿಂದ ಮಂಗಳೂರಿಗೆ 2 ತಿಂಗಳ ಹಿಂದೆ ಬಂದಿದ್ದರು. ಮಂಗಳೂರಿನಿಂದ ಕೆನಡಾಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ಶ್ರೀಲಂಕಾ ಪ್ರಜೆಗಳು ಲಾಕ್​ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೇ ಸಿಲುಕಿದ್ದರು.

ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ ಪ್ರಜೆಗಳ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಶ್ರೀಲಂಕಾದ ಪ್ರಜೆಗಳು ಅಕ್ರಮವಾಗಿ ದೇಶದೊಳಗೆ ನುಸುಳಿರುವುದು ಆಂತರಿಕಾ ಭದ್ರತಾ ವಿಚಾರವೂ ಆಗಿದೆ. ಅವರು ಶ್ರೀಲಂಕಾದಿಂದ ತಮಿಳುನಾಡಿನ ತೂತುಕುಡಿಗೆ ಬಂದು ಅಲ್ಲಿಂದ ಕೆನಡಾಗೆ ತೆರಳುವ ಯೋಜನೆ ಹೊಂದಿದ್ದರು. 6 ಲಕ್ಷ ಶ್ರೀಲಂಕಾ ರೂಪಾಯಿಗಳನ್ನು ಏಜೆಂಟ್ ಗೆ ಕೊಟ್ಟಿದ್ದಾಗಿ ಮಾಹಿತಿ ದೊರೆತಿದೆ. ತಮಿಳುನಾಡು ಚುನಾವಣೆ ನಡೆದ ಕಾರಣ ತಪಾಸಣೆ ಚುರುಕುಗೊಂಡಿದ್ದರಿಂದ ಅವರನ್ನು ಮಂಗಳೂರಿಗೆ ತಂದು ಬಿಡಲಾಗಿತ್ತು. ಮಂಗಳೂರಿಗೆ ಬಂದು ಇಲ್ಲಿನ ಲಾಡ್ಜ್ ಗಳಲ್ಲಿ ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು ಎಂದು ತಿಳಿಸಿದರು.

ಹೀಗಾಗಿ ಸದ್ಯ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 38 ಜನರನ್ನು ವಶಕ್ಕೆ ಪಡೆದಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ. ಮಂಗಳೂರಿನಲ್ಲಿ ಇವರಿಗೆ ಆಶ್ರಯ ಕೊಡಲು ನೆರವು ನೀಡಿದವರ ಬಗ್ಗೆಯೂ ತನಿಖೆ ಆರಂಭವಾಗಿದೆ. ಬೇರೆ ದೇಶದ ವ್ಯಕ್ತಿಗಳು ಮಂಗಳೂರಿಗೆ ಆಗಮಿಸಿ ಅಕ್ರಮ ಆಶ್ರಯ ಪಡೆದಿರುವ ಬಗ್ಗೆ ತನಿಖೆ ಮುಂದುವರೆದಿದೆ. ಇವರಿಗೆ ಆಶ್ರಯ ಕೊಟ್ಟ ಕಾರಣ ಮತ್ತು ನೆರವು ನೀಡಿದ ಕಾರಣ ಇಲ್ಲಿನ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.

ಶ್ರೀಲಂಕಾದಿಂದ ಮಾರ್ಚ್ 17ಕ್ಕೆ ಹೊರಟು ತಮಿಳುನಾಡಿಗೆ ಬಂದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಶ್ರೀಲಂಕಾದ ಉತ್ತರ ಭಾಗದವರು. ಮಂಗಳೂರಿನ ಎರಡು ಲಾಡ್ಜ್ ಮತ್ತು ಎರಡು ಮನೆಗಳಲ್ಲಿ ವಾಸ್ತವ್ಯ ಹೂಡಿದ್ದರು. ತಮಿಳುನಾಡು ‌ಗುಪ್ತಚರ ಇಲಾಖೆ ಪ್ರಕಾರ ಇವರು ಕೆಲಸಕ್ಕಷ್ಟೇ ಕೆನಡಾಗೆ ತೆರಳುತ್ತಿದ್ದರು. ಇವರಿಗೆ ಶ್ರೀಲಂಕಾ ಮತ್ತು ತಮಿಳುನಾಡಿನಲ್ಲಿ ಇರುವ ಏಜೆಂಟ್​ಗಳು ಭಾರತದ ಮೂಲಕ ಕೆನಡಾಕ್ಕೆ ತೆರಳಲು ಸಹಾಯ ಮಾಡುತ್ತಿದ್ದರು. ಮಂಗಳೂರಿನಲ್ಲೂ ಇವರ ಏಜೆಂಟ್​ಗಳಿರುವ ಸಾಧ್ಯತೆ ಇದ್ದು, ಈ ಕುರಿತು ತನಿಖೆ ನಡೆಸುತ್ತೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಟ್ಕಳದಲ್ಲಿ 8 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಬಂಧನ

ಹಣಕಾಸಿನ ಇತಿಮಿತಿ ನೋಡಿಕೊಂಡು ಕೊವಿಡ್​ಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರದ ಕುರಿತು ನಿರ್ಧರಿಸುವೆ: ಸಿಎಂ ಯಡಿಯೂರಪ್ಪ

(Mangalore police tracking down human trafficking network Detained Sri Lankan nationals illegally migrating to Canada through India)