ಮೂರು ದಿನದ ಗಂಡು ಮಗು ಮಾರಾಟ ಮಾಡಿ ಏಳು ತಿಂಗಳ ಬಳಿಕ ಮಗು ವಾಪಾಸ್ ಕೊಡಿ ಎಂದು ಮಹಿಳೆ ಗಲಾಟೆ
ಬೆಂಗಳೂರಿನ ರೋಜಾ ಎಂಬುವವರಿಂದ ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನ ಅಂಬರೀಶ್ ಮತ್ತು ಮಧುಮಾಲತಿ ದಂಪತಿಗೆ ಮಗು ಮಾರಾಟ ಮಾಡಲಾಗಿದೆ. 1.5 ಲಕ್ಷ ರೂ.ಗೆ ಅಂಬರೀಶ್ ದಂಪತಿ ಮಗುವನ್ನು ಖರೀದಿಸಿದ್ದಾರೆ.
ಮೈಸೂರು: ಜನಿಸಿದ ಮೂರು ದಿನದ ಗಂಡು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣ 7 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಮೊಬೈಲ್ನಲ್ಲೇ ವ್ಯವಹಾರ ಕುದುರಿಸಿ ಗಂಡು ಮಗು ಮಾರಾಟ ಮಾಡಲಾಗಿದ್ದು ಸದ್ಯ 7 ತಿಂಗಳ ಬಳಿಕ ಈಗ ಘಟನೆ ಬಹಿರಂಗವಾಗಿದೆ.
ಬೆಂಗಳೂರಿನ ರೋಜಾ ಎಂಬುವವರಿಂದ ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನ ಅಂಬರೀಶ್ ಮತ್ತು ಮಧುಮಾಲತಿ ದಂಪತಿಗೆ ಮಗು ಮಾರಾಟ ಮಾಡಲಾಗಿದೆ. 1.5 ಲಕ್ಷ ರೂ.ಗೆ ಅಂಬರೀಶ್ ದಂಪತಿ ಮಗುವನ್ನು ಖರೀದಿಸಿದ್ದಾರೆ. ಹಕ್ಕಿಪಿಕ್ಕಿ ಸಮುದಾಯದ ಅಂಬರೀಷ್ ಮತ್ತು ಮಧುಮಾಲತಿ ದಂಪತಿ ಬಳಿ ಕಳೆದ 7 ತಿಂಗಳಿನಿಂದ ಮಗು ಆಶ್ರಯ ಪಡೆದಿದೆ. ಆದರೆ ಇದೀಗ ಮಗು ವಾಪಸ್ ಬೇಕೆಂದು ತಾಯಿ ರೋಜಾ ಗಲಾಟೆ ಮಾಡಿದ್ದಾರೆ. ಮೈಸೂರಿಗೆ ಬಂದು ದಂಪತಿ ಮನೆ ಮುಂದೆ ಗಲಾಟೆ ಮಾಡಿದ್ದಾರೆ.
ಮೈಸೂರು ದಂಪತಿ ತಲೆಕೂದಲು ಬೆಳೆಯುವ ತೈಲ ಮಾರುವಾಗ ಆನ್ಲೈನ್ನಲ್ಲಿ ಬೆಂಗಳೂರಿನ ರೋಜಾ ಪರಿಚಯವಾಗಿದೆ. ಮಗು ನನ್ನದೆ ನನಗೆ ಹೆಣ್ಣು ಮಗು ಬೇಕಿತ್ತು ಗಂಡು ಮಗು ಬೇಡ ಎಂದು ಮಹಿಳೆ ದಂಪತಿಗೆ ಮಾರಾಟ ಮಾಡಿದ್ದಾಳೆ. ಮಗು ಮಾರಾಟ ಮಾಡುವಾಗ ಮೊಬೈಲ್ ಕರೆಯಲ್ಲಿ ಚೌಕಾಸಿ ನಡೆಸಿ ಅಂತಿಮವಾಗಿ 1.5ಲಕ್ಷಕ್ಕೆ ಮಗು ಮಾರಾಟ ಮಾಡಲಾಗಿದೆ. ಏಳು ತಿಂಗಳ ವರೆಗೆ ಸುಮ್ಮನಿದ್ದ ರೋಜಾ ಈಗ ಮಗು ವಾಪಸ್ ನೀಡುವಂತೆ ಒತ್ತಾಯಿಸಿದ್ದಾಳೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Viral Video: ಹಣ್ಣೆಂದು ಭಾವಿಸಿ ಹೆಲ್ಮೆಟ್ ನುಂಗಿದ ಕಾಡಾನೆ; ಬೈಕ್ ಸವಾರನ ಸ್ಥಿತಿ ಅಯ್ಯೋ ಪಾಪ!