ಸಾ.ರಾ.ಮಹೇಶ್ ವಿರುದ್ಧ ಭೂ ಒತ್ತುವರಿ ಆರೋಪ; ಕಳಂಕಿತರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ: ಹೆಚ್.ವಿಶ್ವನಾಥ್ ಗಂಭೀರ ಆರೋಪ
ಹಿಂದಿನ ಡಿಸಿ ಆಗಿದ್ದ ರೋಹಿಣಿ ಮಾಡಿದ ಆದೇಶ ಎಲ್ಲಾ ಬಿಟ್ಟು ನಿಮಗೆ ಅನುಕೂಲಕವಾದ ಭಾಗದ ತನಿಖೆಗೆ ಮಾತ್ರ ಆಗ್ರಹ ಮಾಡಲಾಗಿದೆ. ಡಿಸಿ ಮಾಡಿದ ಆದೇಶ ಬಿಟ್ಟು ಪಾಸಿಂಗ್ ರೀಮಾರ್ಕ್ ಅಷ್ಟನ್ನೆ ಹಿಡಿದು ಕೊಂಡು ಯಾಕೆ ಎಳೆದಾಡಲಾಗುತ್ತಿದೆ. ಪ್ರಾದೇಶಿಕ ಆಯುಕ್ತರು ಸೋಮವಾರ ಕೊಡುವ ವರದಿಗೆ ಯಾವ ಬೆಲೆಯೂ ಇಲ್ಲ...
ಮೈಸೂರು: ಶಾಸಕ ಸಾ.ರಾ.ಮಹೇಶ್ ವಿರುದ್ಧ ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿ ಕಳಂಕಿತರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಮೈಸೂರಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಗಂಭೀರವಾಗಿ ಆರೋಪಿಸಿದ್ದಾರೆ.
ನಿನ್ನೆ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಹೈಡ್ರಾಮಾ ನಡೆಯಿತು. ಶಾಸಕರು ಪ್ರತಿಭಟನೆ ಮಾಡಿದಂತೆ, ಆರ್.ಸಿ. ಮನವಿ ಸ್ವೀಕರಿಸಿದಂತೆ, ತನಿಖೆ ಮಾಡುವುದಾಗಿ ಆರ್.ಸಿ. ಹೇಳಿದಂತೆ ಹೈಡ್ರಾಮಾ ಮಾಡಲಾಗಿದೆ. ಸಾಮಾನ್ಯವಾಗಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುತ್ತೆ. ಮನವಿ ಪರಿಶೀಲನೆ ಮಾಡುವುದಾಗಿ ಅಧಿಕಾರಿ ಹೇಳುತ್ತಾರೆ. ಆದರೆ ಪ್ರಾದೇಶಿಕ ಆಯುಕ್ತರು ತನಿಖೆಗಾಗಿ ಸಮಿತಿ ರಚನೆ ಮಾಡಿದ್ದಾರೆ. ವರದಿ ಕೊಡುವ ಟೈಮ್ ಕೂಡ ಫಿಕ್ಸ್ ಮಾಡಿಬಿಟ್ಟಿದ್ದಾರೆ. ಪ್ರಾದೇಶಿಕ ಆಯುಕ್ತರ ಸ್ಪೀಡ್ ನೋಡಿ ನಾವೆಲ್ಲ ಗಾಬರಿಯಾಗಿದ್ದೇವೆ. ಪ್ರಾದೇಶಿಕ ಆಯುಕ್ತರು ಮತ್ತು ಕಳಂಕಿತರ ನಡುವೆ ಒಪ್ಪಂದ ಆಗಿದೆ. ಈಗಾಗಲೇ ವರದಿ ಸಿದ್ಧವಾಗಿದೆ. ಸೋಮವಾರ ಅದನ್ನು ಬಿಡುಗಡೆ ಮಾಡುತ್ತಾರೆ. ಆರ್.ಸಿ. ಏನು ವರದಿ ಕೊಡುತ್ತಾರೆ ಎಂಬುದೂ ಗೊತ್ತಿದೆ ಎಂದು ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.
ಹಿಂದಿನ ಡಿಸಿ ಆಗಿದ್ದ ರೋಹಿಣಿ ಮಾಡಿದ ಆದೇಶ ಎಲ್ಲಾ ಬಿಟ್ಟು ನಿಮಗೆ ಅನುಕೂಲಕವಾದ ಭಾಗದ ತನಿಖೆಗೆ ಮಾತ್ರ ಆಗ್ರಹ ಮಾಡಲಾಗಿದೆ. ಡಿಸಿ ಮಾಡಿದ ಆದೇಶ ಬಿಟ್ಟು ಪಾಸಿಂಗ್ ರೀಮಾರ್ಕ್ ಅಷ್ಟನ್ನೆ ಹಿಡಿದು ಕೊಂಡು ಯಾಕೆ ಎಳೆದಾಡಲಾಗುತ್ತಿದೆ. ಪ್ರಾದೇಶಿಕ ಆಯುಕ್ತರು ಸೋಮವಾರ ಕೊಡುವ ವರದಿಗೆ ಯಾವ ಬೆಲೆಯೂ ಇಲ್ಲ. ಕಣ್ಣಿಗೆ ಮಣ್ಣೆರೆಚಿ, ರೋಹಿಣಿ ಸಿಂಧೂರಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ಯತ್ನ ಈ ವರದಿ ಮೂಲಕ ನಡೆದಿದೆ. ಪ್ರಾದೇಶಿಕ ಆಯುಕ್ತರಿಗೆ ಒಳ್ಳೆಯ ಹೆಸರಿಲ್ಲ. ಪ್ರಾದೇಶಿಕ ಆಯುಕ್ತರು ಕಳಂಕಿತರ ಬಗ್ಗೆ ಸೋಮವಾರ ನೀಡುವ ವರದಿ ಜನ ನಂಬಬಾರದು. ಒಂಟಿ ಧ್ವನಿಗೆ ಗಟ್ಟಿಧ್ವನಿ. ಒಂಟಿಯಾದರೂ ಪರವಾಗಿಲ್ಲ ನಾನು ಹೋರಾಡುತ್ತೇನೆ ಎಂದು ಹೆಚ್ ವಿಶ್ವನಾಥ್ ಹೇಳಿದ್ರು.
ಇದನ್ನೂ ಓದಿ: Sa Ra Mahesh on Rohini : ಸಿಂಧೂರಿಗೆ ಸಾರಾ ಮಹೇಶ್ ಸವಾಲ್..! ರಾಜಕೀಯಕ್ಕೆ ಗುಡ್ಬೈ ಹೇಳ್ತೀನಿ!