ಬೆಂಗಳೂರು: ಸಂಬಳ ನೀಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ವಾರ್ರೂಂ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರಿಂದಾಗಿ ಕೊರೊನಾ ಸೋಂಕಿತರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಸಿಬ್ಬಂದಿ ಪ್ರತಿಭಟನೆ ಕೈಗೊಂಡಿರುವುದರಿಂದ ವಾರ್ರೂಂಗೆ ಬರುತ್ತಿರುವ ದೂರವಾಣಿ ಕರೆಗಳನ್ನೂ ಕೂಡಾ ಯಾರೂ ಸ್ವೀಕರಿಸುವವರಿಲ್ಲ ಎನ್ನುವಂತಾಗಿದೆ.
ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ತುರ್ತಾಗಿ ಬೆಡ್ ವ್ಯವಸ್ಥೆ ಆಗಬೇಕು ಎಂದು ಕರೆ ಮಾಡಿದರೆ ಯಾರೂ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಕರ್ತವ್ಯ ನಿರ್ವಹಿಸದೇ ವಾರ್ರೂಂ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬೆಡ್ ಬೇಕು ಎಂದು ನೂರಾರು ಕರೆಗಳು ಬರುತ್ತಿದ್ದರೂ ಕೂಡಾ ಯಾರೂ ಕೂಡಾ ಈ ಕುರಿತಂತೆ ಗಮನ ಹರಿಸುತ್ತಿಲ್ಲ. ಬಿಯು ನಂಬರ್ ಜನರೇಟ್ ಆಗೋದು ಕೂಡ ವಾರ್ರೂಂನಿಂದಲೇ ಆಗಿರುವುದರಿಂದ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ತುರ್ತಾಗಿ ಚಿಕಿತ್ಸೆ ಬೇಕಾದ ರೋಗಿಗಳ ಪ್ರಾಣದ ಮೇಲೆ ಪರಿಣಾಮ ಬೀರುತ್ತದೆ.
ಇನ್ನೊಂದೆಡೆ ಬಿಬಿಎಂಪಿ, ಹೋಂ ಐಸೋಲೇಷನ್ನಲ್ಲಿದ್ದ ಸೋಂಕಿತರ ಆರೈಕೆ ಮಾಡುತ್ತಿಲ್ಲ, ಉಸಿರಾಟ ಸಮಸ್ಯೆ ಆಗುತ್ತಿದೆ. ಮಾತ್ರೆ ತಂದು ಕೊಡಿ ಅಂದರೂ ಬಿಬಿಎಂಪಿ ಸಿಬ್ಬಂದಿ ಕಾಳಜಿ ವಹಿಸುತ್ತಿಲ್ಲ. ಕನಿಷ್ಟ ಮಾತ್ರೆಗಳನ್ನೂ ಕೊಡದೇ ನಿರ್ಲ್ಯಕ್ಷ ತೋರುತ್ತಿದ್ದಾರೆ. ನಾವೇ ಔಷಧದ ಅಂಗಡಿಗೆ ಹೋಗಿ ಔಷಧ ತಂದುಕೊಳ್ತೇವೆ ಎಂದು ಸೋಂಕಿತರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
Coronavirus India Update: ಭಾರತದಲ್ಲಿ 4.12 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3980 ಮಂದಿ ಸಾವು