ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ರಾಜ್ಯದಲ್ಲಿ ಅನೇಕ ಕಡೆ ಭಾರಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಮುಂಗಾರು ಬಿತ್ತನೆ ಆರಂಭವಾಗಿದೆ. ರೈತರಿಗೆ ಗೊಬ್ಬರ, ಬಿತ್ತನೆ ಬೀಜದ ವಿತರಣೆ ಆಗುತ್ತಿದೆ ಎಂದು ಬೆಂಗಳೂರಲ್ಲಿ ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
2,35,865 ಬಿತ್ತನೆ ಬೀಜದ ಕಿಟ್‌ಗಳನ್ನು ನೀಡಲಾಗಿದೆ. ಬಹುಬೆಳೆಗಳ ಕಿಟ್ ಇದಾಗಿದೆ. ದ್ವಿದಳ ಧಾನ್ಯ ಬೆಳೆಯುವಂತೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಕೃಷಿಕರ ಆದಾಯ ಹೆಚ್ಚುತ್ತದೆ. ಈ ವರ್ಷ 220 ಮಿ.ಮಿ. ಮಳೆಯಾಗಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಬೆಳೆ ಬೆಳೆದಿದ್ದೇವೆ. ಈ ವರ್ಷ 77 ಲಕ್ಷ ಹೆಕ್ಟರ್ ಬಿತ್ತನೆ ಗುರಿ ಇದೆ. 12 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಎಲ್ಲೂ ಸಹ ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆಯಿಲ್ಲ. ವಿತರಣೆ 1.15 ಲಕ್ಷ ಕ್ವಿಂಟಲ್ ದಾಸ್ತಾನು ಇದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ರೈತರ ಖಾತೆಗೆ ಹಣ ಹಾಕುತ್ತಿದ್ದೇವೆ ಎಂದು ಬಿ.ಸಿ.ಪಾಟೀಲ್ ಹೇಳಿದ್ರು.
650 ಕೃಷಿ ಯಂತ್ರಧಾರೆಯನ್ನು ಆರಂಭ ಮಾಡಿದ್ದೇವೆ. ರೈತರೇ ಮೊಬೈಲ್‌ನಲ್ಲಿ ಬೆಳೆ ಸಮೀಕ್ಷೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು 4.24 ಕೋಟಿ ಮೌಲ್ಯದ ಕಳಪೆ ಬೀಜ ಹಾಗೂ ಕೀಟ ನಾಶಕವನ್ನ ಸೀಸ್ ಮಾಡಿದ್ದೇವೆ. ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ರು.
ಇದನ್ನೂ ಓದಿ: ಹಿಮಾಚಲಕ್ಕೆ ಪ್ರವಾಸಿಗರ ದಂಡು.. ಸಾಲುಸಾಲಾಗಿ ನಿಂತ ಕಾರುಗಳಿಂದ ಟ್ರಾಫಿಕ್ ಫುಲ್ ಜಾಮ್