BDA ಸೈಟ್​ ಹಂಚಿಕೆಯಲ್ಲಿ ಅವ್ಯವಹಾರ ಪ್ರಕರಣ: ತನಿಖೆ ಕೋರಿ ಪತ್ರ ಬರೆದಿದ್ದ ಉಪಕಾರ್ಯದರ್ಶಿಗೂ ನೋಟಿಸ್​

|

Updated on: Dec 26, 2020 | 10:49 AM

BDA ನಿವೇಶನ ಹಂಚಿಕೆಯಲ್ಲಿ ನಡೆದಿದ್ದ ಭಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಂದಿನ ಸರ್ಕಾರಕ್ಕೆ ಪತ್ರ ಬರೆದಿದ್ದ R.ಅನಿಲ್‌ಕುಮಾರ್‌ಗೆ ನೋಟಿಸ್ ಜಾರಿಯಾಗಿದೆ. ಪ್ರಾಧಿಕಾರದ ಉಪಕಾರ್ಯದರ್ಶಿಯಾಗಿದ್ದ ಅನಿಲ್‌ಕುಮಾರ್‌ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಅಂದಿನ ಸರ್ಕಾರಕ್ಕೆ ಪತ್ರ ಬರೆದಿದ್ದರು.

BDA ಸೈಟ್​ ಹಂಚಿಕೆಯಲ್ಲಿ ಅವ್ಯವಹಾರ ಪ್ರಕರಣ: ತನಿಖೆ ಕೋರಿ ಪತ್ರ ಬರೆದಿದ್ದ ಉಪಕಾರ್ಯದರ್ಶಿಗೂ ನೋಟಿಸ್​
ಬಿಡಿಎ ಹೆಡ್ ಆಫೀಸ್
Follow us on

ಬೆಂಗಳೂರು: BDA ನಿವೇಶನ ಹಂಚಿಕೆಯಲ್ಲಿ ನಡೆದಿದ್ದ ಭಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಂದಿನ ಸರ್ಕಾರಕ್ಕೆ ಪತ್ರ ಬರೆದಿದ್ದ R.ಅನಿಲ್‌ಕುಮಾರ್‌ಗೆ ನೋಟಿಸ್ ಜಾರಿಯಾಗಿದೆ. ಪ್ರಾಧಿಕಾರದ ಉಪಕಾರ್ಯದರ್ಶಿಯಾಗಿದ್ದ ಅನಿಲ್‌ಕುಮಾರ್‌ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಅಂದಿನ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಕೆಳ‌ ಹಂತದ ಅಧಿಕಾರಿಗಳು ನಕಲಿ‌ ದಾಖಲೆ ಸೃಷ್ಟಿಸಿ ಸೈಟ್ ಹಂಚಿಕೆಯಲ್ಲಿ‌ ಗೋಲ್ಮಾಲ್‌ ಮಾಡಿದ್ದ ಬಗ್ಗೆ ತನಿಖೆ ಕೋರಿ 2018ರಲ್ಲಿ ಪತ್ರ ಬರೆದಿದ್ದರು. ಇದೀಗ, ಅಂದು ಪತ್ರ ಬರೆದಿದ್ದ ಅನಿಲ್​ಕುಮಾರ್​ಗೂ ಇಂದಿನ ಆಯುಕ್ತರಿಂದ ನೋಟಿಸ್ ಜಾರಿಯಾಗಿದೆ. ಅಂದ ಹಾಗೆ, BDAನಲ್ಲಿ ನಡೆದಿದ್ದ ಈ ಭಾರಿ ಅವ್ಯವಹಾರದ ಬಗ್ಗೆ ಟಿವಿ 9 ಒಂದು ಎಕ್ಸ್​ಕ್ಲೂಸಿವ್​ ವರದಿಯನ್ನು ಪ್ರಸಾರ ಮಾಡಿತ್ತು.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅತಿದೊಡ್ಡ ಭೂ ಹಗರಣ? 11 ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್