BDA ಸೈಟ್​ಗೆ ಸಿಕ್ತು ಬಂಗಾರದ ಬೆಲೆ: ಚದರ ಮೀಟರ್​ಗೆ 1.67 ಲಕ್ಷ ರೂ ದಾಖಲೆ ಬೆಲೆಗೆ ಮಾರಾಟ!

| Updated By: ಸಾಧು ಶ್ರೀನಾಥ್​

Updated on: Jan 30, 2021 | 6:43 PM

ಸರ್​ M.V.ಲೇಔಟ್​ನ 3ನೇ ಹಂತದ ಸೈಟ್​ಗಳು ದಾಖಲೆ ಬೆಲೆಗೆ ಸೇಲ್ ಆಗಿದೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಚದರ ಮೀಟರ್​ಗೆ 39,000 ರೂಪಾಯಿ ಎಂದು BDA ನಿಗದಿ ಮಾಡಿತ್ತು. ಆದರೆ, ಎಲ್ಲಾ ನಿವೇಶನಗಳು ಪ್ರತಿ ಚದರ ಮೀಟರ್​ಗೆ 1.67 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

BDA ಸೈಟ್​ಗೆ ಸಿಕ್ತು ಬಂಗಾರದ ಬೆಲೆ: ಚದರ ಮೀಟರ್​ಗೆ 1.67 ಲಕ್ಷ ರೂ ದಾಖಲೆ ಬೆಲೆಗೆ ಮಾರಾಟ!
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂಋಉ ಅಭಿವೃದ್ಧಿ ಪ್ರಾಧಿಕಾರದಿಂದ (BDA) 6ನೇ ಹಂತದ ಎಲೆಕ್ಟ್ರಾನಿಕ್​ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾದ ನಿವೇಶನಗಳಿಗೆ ಬಂಗಾರದ ಬೆಲೆ ದೊರೆತಿದೆ.

ಆರನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ ಸರ್​ ಎಂ.ವಿ. ಲೇಔಟ್​ನ 3ನೇ ಹಂತದ ಸೈಟ್​ಗಳು ದಾಖಲೆ ಬೆಲೆಗೆ ಸೇಲ್ ಆಗಿವೆ. ಅಂದ ಹಾಗೆ, ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಚದರ ಮೀಟರ್​ಗೆ 39,000 ರೂಪಾಯಿ ಎಂದು BDA ನಿಗದಿ ಮಾಡಿತ್ತು. ಆದರೆ, ಎಲ್ಲಾ ನಿವೇಶನಗಳು ಪ್ರತಿ ಚದರ ಮೀಟರ್​ಗೆ 1.67 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಈ ಮೂಲಕ, 6ನೇ ಹಂತದ E ಹರಾಜಿನಲ್ಲಿ BDA 255 ಕೋಟಿ ರೂಪಾಯಿ ಆದಾಯ ಗಳಿಸಿದೆ. ಅಂದ ಹಾಗೆ, E ಹರಾಜು ಪ್ರಕ್ರಿಯೆಯಲ್ಲಿ 1,614 ಜನ ಭಾಗವಹಿಸಿದ್ದರು. ಜೊತೆಗೆ, ಶೀಘ್ರದಲ್ಲೇ 7ನೇ ಹಂತದ E ಹರಾಜು ಪ್ರಕ್ರಿಯೆಗೆ ಚಾಲನೆ ಕೊಡಲಾಗುವುದು ಎಂದು BDA ತಿಳಿಸಿದೆ.

ಬಿಸ್ಮಿಲ್ಲಾನಗರದಲ್ಲಿ ರಾಮರಥದ ಮೇಲೆ ಕಲ್ಲುತೂರಾಟ ಪ್ರಕರಣ: ಪೊಲೀಸರಿಂದ ಐದು ಆರೋಪಿಗಳ ಅರೆಸ್ಟ್​