
ಸಹೋದರ, ಸಹೋದರಿಯ ನಡುವಿನ ಬಾಂಧವ್ಯವವನ್ನು ಇನ್ನಷ್ಟು ಗಟ್ಟಿಗೊಳಿಸುವ ರಕ್ಷಾ ಬಂಧನವನ್ನು ಇದೇ ಮುಂದಿನ ರವಿವಾರ (ಆಗಸ್ಟ್ 22)ರಂದು ಆಚರಿಸಲಾಗುತ್ತಿದೆ. ಈ ದಿನದ ವಿಶೇಷವಾಗಿ ಈಗಿನಿಂದಲೇ ಅಂಗಡಿಗಳಲ್ಲಿ ರಾಕಿ ಕಂಗೊಳಿಸುತ್ತಿದೆ. ಖರೀದಿ ಕೂಡಾ ಶುರುವಾಗಿದೆ. ಈ ವಿಶೇಷವಾಗಿ ಹೆಣ್ಣು ಮಕ್ಕಳ ಕೈಗೆಳೆಲ್ಲಾ ಮದರಂಗಿಯಲ್ಲಿ ಕಂಗೊಳಿಸಲಿ. ನಿಮಗಿಷ್ಟವಾಗುವ ಕೆಲವು ಸಿಂಪಲ್ ಡಿಸೈನ್ಗಳು ಇಲ್ಲಿವೆ.

ಹೆಣ್ಣು ಮಕ್ಕಳಿಗೆ ಮದರಂಗಿ ಅಥವಾ ಮೆಹಂದಿ ಅಂದರೆ ತುಂಬಾ ಇಷ್ಟ. ಹೊಸ ಹೊಸ ಡಿಸೈನ್ಗಳಿಂದ ಕೈಗಳು ಅಂದವಾಗಿ ಕಾಣಿಸುತ್ತದೆ ಎಂಬ ಆಸೆ ಎಲ್ಲ ಹೆಣ್ಣು ಮಕ್ಕಳದ್ದು. ರಕ್ಷಾ ಬಂಧನದ ವಿಶೇಷವಾಗಿ ಈ ಕೆಲವು ಡಿಸೈನ್ಗಳು ನಿಮ್ಮ ಕೈಗಳ ಅಂದವನ್ನು ಹೆಚ್ಚಿಸಬಹುದು. ಇಷ್ಟವಾದಲ್ಲಿ ಈ ಡಿಸೈನ್ಗಳೇ ನಿಮ್ಮ ಕೈ ಗಳಲ್ಲಿ ಮೂಡಲಿ.

ಹಬ್ಬ ಬಂತೆಂದರೆ ಕೈ ತುಂಬ ಮೆಹಂದಿ ಹಚ್ಚಿಕೊಂಡು ಸುಂದರವಾಗಿ ಸಿದ್ಧರಾಗಬೇಕೆಂಬ ಆಸೆ ಇದ್ದೇ ಇರುತ್ತದೆ. ಹೊಸ ಉಡುಪು ಧರಿಸಿ, ಅಣ್ಣ, ತಮ್ಮಂದಿರಿಗೆ ಶುಭಾಶಯ ತಿಳಿಸಲು ಅಕ್ಕ- ತಂಗಿಯರು ಕಾಯುತ್ತಿರುತ್ತಾರೆ. ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಕೈಗಳಿಗೆ ಮೆಹಂದಿ ಹಚ್ಚಿಕೊಳ್ಳಿ. ಸುಂದರವಾದ ಡಿಸೈನ್ಗಳು ಇಲ್ಲಿವೆ.

ನಿಮ್ಮ ಕೈಗಳಿಗೆ ಸರಿಹೊಂದುವ ಸಿಫಲ್ ಡಿಸೈನ್ಗಳು ನೀವು ಹುಡುಕುತ್ತಿರಬಹುದು. ಈ ಬಾರಿಯ ರಕ್ಷಾ ಬಂಧನಕ್ಕೆ ಸುಂದರವಾಗಿ ಅಲಂಕಾರಗೊಳ್ಳಬೇಕು ಎಂದು ಸಿದ್ಧತೆ ನಡೆಸುತ್ತಿರಬಹುದು. ಹೀಗಿರುವಾಗ ಕೈಗಳಿಗೆ ಮೆಹಂದಿ ಹಚ್ಚಿಕೊಂಡು ಈ ಬಾರಿಯ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಬಹುದು.

ಕೈಗಳಿಗೆ ಮೆಹಂದಿಯಿಂದ ಹೂವುಗಳನ್ನು ಬಿಡಿಸಿದರೆ ತುಂಬಾ ಸುಂದರವಾಗಿ ಕಾಣಿಸುತ್ತದೆ. ಕೈಗಳ ಎರಡೂ ಬದಿಯಲ್ಲಿ ಸಿಂಪಲ್ ಡಿಸೈನ್ ಮೂಡಿಬಂದರೆ ಕೆಂಪಾದ ಬಳಿಕ ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ.

ಹಸ್ತದಲ್ಲಿ ಮೆಹಂದಿ ಚೆನ್ನಾಗಿ ಮೂಡಿ ಬರುತ್ತದೆ. ಬಿಳಿ ಕೈಗಳಿಗೆ ಕೆಂಪು ಬಣ್ಣದ ಮದರಂಗಿ ಕೈಗಳ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.
Published On - 3:18 pm, Tue, 17 August 21