ಮತ್ತೆ ಮುನಿಸಿಕೊಂಡನಾ ಮಳೆರಾಯ: ಬೆಳಗಾವಿಯಲ್ಲಿ ವೃದ್ಧನ ಸಾವು

|

Updated on: Oct 21, 2019 | 12:42 PM

ಬೆಳಗಾವಿ: ಇತ್ತೀಚೆಗಷ್ಟೇ ರಾಜ್ಯದಲ್ಲಿ ಮಳೆರಾಯನ ಅವಾಂತರ ಎಲ್ಲೆ ಮೀರಿತ್ತು. ಅದರಲ್ಲೂ ಮಹರಾಷ್ಟ್ರದ ಎಲ್ಲೆ ಮೀರಿ ರಾಜ್ಯದೊಳಕ್ಕೆ ನುಸುಳಿದ್ದ ವರುಣ, ಭಾರೀ ಅವಾಂತರ ಸೃಷ್ಟಸಿದ್ದ. ಇನ್ನೂ ಆ ಮಳೆಯ ಹೊಡೆತದಿಂದ ಸುಧಾರಿಸಿಕೊಂಡಿಲ್ಲ ಅನ್ನುತ್ತಿರುವಾಗ ರಾಜ್ಯದಲ್ಲಿ ಮತ್ತೆ ಮಳೆಯ ಕಾಟ ಶುರುವಾಗಿದೆ. ಬೆಳಗಾವಿಯಲ್ಲಿ ಮಳೆ ತೇವದಿಂದ ಗೋಡೆ ಕುಸಿದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಭಾರಿ ಮಳೆಗೆ ಗೋಡೆ ಕುಸಿದು ವೃದ್ಧ ಸಾವಿಗೀಡಾಗಿದ್ದಾರೆ. ಮನೆಯಲ್ಲಿ ಮಲಗಿದ್ದ ವೃದ್ಧ ಲಿಯಾಕತ್ ಮಕಾಂದರ್ ಅಸುನೀಗಿದ್ದಾರೆ. ನಂದಗಡ ಪೊಲೀಸ್ ಠಾಣಾ […]

ಮತ್ತೆ ಮುನಿಸಿಕೊಂಡನಾ ಮಳೆರಾಯ: ಬೆಳಗಾವಿಯಲ್ಲಿ ವೃದ್ಧನ ಸಾವು
Follow us on

ಬೆಳಗಾವಿ: ಇತ್ತೀಚೆಗಷ್ಟೇ ರಾಜ್ಯದಲ್ಲಿ ಮಳೆರಾಯನ ಅವಾಂತರ ಎಲ್ಲೆ ಮೀರಿತ್ತು. ಅದರಲ್ಲೂ ಮಹರಾಷ್ಟ್ರದ ಎಲ್ಲೆ ಮೀರಿ ರಾಜ್ಯದೊಳಕ್ಕೆ ನುಸುಳಿದ್ದ ವರುಣ, ಭಾರೀ ಅವಾಂತರ ಸೃಷ್ಟಸಿದ್ದ. ಇನ್ನೂ ಆ ಮಳೆಯ ಹೊಡೆತದಿಂದ ಸುಧಾರಿಸಿಕೊಂಡಿಲ್ಲ ಅನ್ನುತ್ತಿರುವಾಗ ರಾಜ್ಯದಲ್ಲಿ ಮತ್ತೆ ಮಳೆಯ ಕಾಟ ಶುರುವಾಗಿದೆ. ಬೆಳಗಾವಿಯಲ್ಲಿ ಮಳೆ ತೇವದಿಂದ ಗೋಡೆ ಕುಸಿದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಭಾರಿ ಮಳೆಗೆ ಗೋಡೆ ಕುಸಿದು ವೃದ್ಧ ಸಾವಿಗೀಡಾಗಿದ್ದಾರೆ. ಮನೆಯಲ್ಲಿ ಮಲಗಿದ್ದ ವೃದ್ಧ ಲಿಯಾಕತ್ ಮಕಾಂದರ್ ಅಸುನೀಗಿದ್ದಾರೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 12:34 pm, Mon, 21 October 19