ದೇಶದಲ್ಲಿ ಎಸ್‌ಸಿ, ಎಸ್‌ಟಿ ಜನರ ಮೇಲೆ ಶೇ26ರಷ್ಟು ದೌರ್ಜನ್ಯ ಹೆಚ್ಚಾಗಿದೆ: ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ

| Updated By: ವಿವೇಕ ಬಿರಾದಾರ

Updated on: Feb 07, 2023 | 9:42 PM

ದೇಶದುದ್ದಕ್ಕೂ ಬಿಜೆಪಿ ಸರ್ಕಾರ ದೌರ್ಜನ್ಯ ಮೇಲೆ ದೌರ್ಜನ್ಯ ಮಾಡುತ್ತಿದೆ. ಇದರಿಂದ ದಲಿತರು, ಹಿಂದುಳಿದ ವರ್ಗದವರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದಲ್ಲಿ ಎಸ್‌ಸಿ, ಎಸ್‌ಟಿ ಜನರ ಮೇಲೆ ಶೇಕಡ 26ರಷ್ಟು ದೌರ್ಜನ್ಯ ಹೆಚ್ಚಾಗಿದೆ ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದ್ದಾರೆ.

ದೇಶದಲ್ಲಿ ಎಸ್‌ಸಿ, ಎಸ್‌ಟಿ ಜನರ ಮೇಲೆ ಶೇ26ರಷ್ಟು ದೌರ್ಜನ್ಯ ಹೆಚ್ಚಾಗಿದೆ: ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ
Follow us on

ಬೆಳಗಾವಿ: ದೇಶದುದ್ದಕ್ಕೂ ಬಿಜೆಪಿ (BJP) ಸರ್ಕಾರ ದೌರ್ಜನ್ಯ ಮೇಲೆ ದೌರ್ಜನ್ಯ ಮಾಡುತ್ತಿದೆ. ಇದರಿಂದ ದಲಿತರು, ಹಿಂದುಳಿದ ವರ್ಗದವರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದಲ್ಲಿ ಎಸ್‌ಸಿ (SC), ಎಸ್‌ಟಿ (ST) ಜನರ ಮೇಲೆ ಶೇಕಡ 26ರಷ್ಟು ದೌರ್ಜನ್ಯ ಹೆಚ್ಚಾಗಿದೆ ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ (Niket Raj Maurya) ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಸಮಾವೇಶದಲ್ಲಿ ಮಾತನಾಡಿದ ಅವರು ಬಾಬಾಸಾಹೇಬರು ನಮಗೆ ಕೊಟ್ಟ ಸಂವಿಧಾನ ಜೋಪಾನವಾಗಿ ಕಾಪಾಡಿಕೊಳ್ಳುವ ಸ್ಥಿತಿ ಇದೆ. ಇದೇ ಸಂವಿಧಾನ ಬದಲಾಯಿಸಿ ಅಂತ ಹೇಳುವ ಧೈರ್ಯ ಇದ್ದರೇ ಅವರು ನಮ್ಮದೇ ಕರ್ನಾಟಕದ ಸಂಸದ ಅನಂತಕುಮಾರ ಹೆಗಡೆ ಒಬ್ಬರಿಗೆ. ಸಂವಿಧಾನದ ಪರ ನಿಲ್ಲುತ್ತಾರೆ ಎಂಬ ನಂಬಿಕೆ ಇರೋದ್ರಿಂದ ನಾವು ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar), ಸಚಿವ ಸತೀಶ್ ಜಾರಕಿಹೊಳಿಗೆ (Satish Jarkiholi) ಮತ ಹಾಕಬೇಕಿದೆ ಎಂದು ಮತಯಾಚಿಸಿದರು.

ನಾವೆಲ್ಲರೂ ಕೆಲಸ ಮಾಡುತ್ತಿರೋದು ಯಾರೋ ಒಬ್ಬರನ್ನ ಶಾಸಕರು ಮಾಡಲು ಮುಖ್ಯಮಂತ್ರಿ ಮಾಡಲು ಅಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಐದೂವರೆ ಸಾವಿರ ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ತಯಾರಿ ನಡೆಸಿದೆ. 75 ಸಾವಿರ ಸರ್ಕಾರಿ ಶಾಲೆಗಳು ಬಿದ್ದು ಹೋಗುವ ಸ್ಥಿತಿ ತಲುಪಿವೆ. ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆ ನಡೆಸಲು ತಯಾರಿ ನಡೆಸಿದ್ದಾರೆ. ಇವತ್ತು ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆ ಖಾಲಿ ಇವೆ. ದಲಿತರು, ಹಿಂದುಳಿದ ವರ್ಗದವರಿಗೆ ಅಲ್ಲಿ ನೌಕರಿ ಸಿಗುತ್ತೆ, ಆದರೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಯಾರೂ ತಿನ್ನಲಾರದ ನೋವುಂಡು ಶಾಸಕರಾಗಿದ್ದಾರೆ. 25 ವರ್ಷ ನನ್ನ ಯಾರೂ ಸೋಲಿಸಲ್ಲ ಅಂತ ಧೈರ್ಯದಿಂದ ನಿಂತಿದ್ದಾರೆ. ಸತೀಶ್ ಸಾಹುಕಾರ್, ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಹಣ ಹೆಂಡದ ಹೊಳೆ ಹರಿಸುತ್ತಾರೆ. ಒಬ್ಬ ಬಡವನ ಬಳಿಯೂ ಒಂದು ಲಕ್ಷ ತೆರಿಗೆ ವಸೂಲಿ ಮಾಡಲಾಗುತ್ತಿದೆ. ನಾನು ಒಂದು ಕಾಲದಲ್ಲಿ ದೇಶದ ಪ್ರಧಾನಿ ಮೋದಿ ಆದ್ರೆ ಏನೋ ಆಗುತ್ತೆ ಅಂದುಕೊಂಡಿದ್ದೆ. ಆದರೆ ಲಕ್ಷಾಂತರ ಕೋಟಿ ಹಗರಣಗಳಾಗಿವೆ, ನಿರುದ್ಯೋಗ ಹೆಚ್ಚಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ