ಮರಾಠಿ ಭಾಷಿಕರಿಗೆ ಒಲಿದ ಬೆಳಗಾವಿ ಪಾಲಿಕೆ ಮೇಯರ್, ಉಪಮೇಯರ್: ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧ ಆಯ್ಕೆ ಎಂದ ಬಿಜೆಪಿ

| Updated By: ರಮೇಶ್ ಬಿ. ಜವಳಗೇರಾ

Updated on: Feb 06, 2023 | 6:40 PM

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ - ಉಪಮೇಯರ್ ಮರಾಠಿ ಭಾಷಿಕರಿಗೆ ಒಲಿದಿದೆ. ಬಿಜೆಪಿ ಸದಸ್ಯೆಯರು ಆಯ್ಕೆಯಾಗಿದ್ದಾರೆ. ಶೋಭಾ ಪಾಯಪ್ಪಾ ಸೋಮನಾಚೆ ಮೇಯರ್ ಆಗಿದ್ದರೆ, ರೇಷ್ಮಾ ಪ್ರವೀಣ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮರಾಠಿ ಭಾಷಿಕರಿಗೆ ಒಲಿದ ಬೆಳಗಾವಿ ಪಾಲಿಕೆ ಮೇಯರ್, ಉಪಮೇಯರ್: ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧ ಆಯ್ಕೆ ಎಂದ ಬಿಜೆಪಿ
ಬೆಳಗಾವಿ ಮೇಯರ್ ಶೋಭಾ ಪಾಯಪ್ಪಾ ಸೋಮನಾಚೆ, ಉಪಮೇಯರ್ ರೇಷ್ಮಾ ಪ್ರವೀಣ್
Follow us on

ಬೆಳಗಾವಿ: ಬೆಳಗಾವಿ ಮಹಾನಗರಪಾಲಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಮೇಯರ್ (Belagavi Mayor)​ ಆಗಿ ಬಿಜೆಪಿಯ ಶೋಭಾ ಸೋಮನಾಚೆ ಆಯ್ಕೆಯಾಗಿದ್ದರೆ, ಉಪ ಮೇಯರ್ Deputy Mayor​ ಆಗಿ ಬಿಜೆಪಿಯ ರೇಷ್ಮಾ ಪಾಟೀಲ್​ ಆಯ್ಕೆಯಾಗಿದ್ದಾರೆ.

ಶೋಭಾ ಸೋಮನಾಚೆ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿಯ ರೇಷ್ಮಾ ಪಾಟೀಲ್ ಪರ 42 ಮತಗಳು ಚಲಾವಣೆಯಾಗಿದ್ದರೆ, ವೈಶಾಲಿಗೆ ಕೇವಲ 4 ಮತ, ಎಂಇಎಸ್​ ಸದಸ್ಯೆ ವೈಶಾಲಿ ಭಾತಕಾಂಡೆಗೆ ಕೇವಲ 4 ಮತಗಳು ಸಿಕ್ಕಿವೆ ಎಂದು ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.


ಮಹಾನಗರ ಪಾಲಿಕೆ ಮೇಯರ್ ಆಗಿರುವ ಶೋಭಾ ಸೋಮನಾಚೆ ಅವರು 57ನೇ ವಾರ್ಡ್ ನ ಬಿಜೆಪಿ ಸದಸ್ಯೆಯಾಗಿದ್ದರೆ, ಉಪ ಮೇಯರ್ ಆಗಿರುವ ರೇಷ್ಮಾ ಮಾಟೀಲ 33ನೇ ವಾರ್ಡ್​ನ ಬಿಜೆಪಿ ಸದಸ್ಯೆಯಾಗಿದ್ದಾರೆ. ಆದ್ರೆ, ಈ ಇಬ್ಬರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪ್ರತಿಕ್ರಿಯಿಸಿದ್ದು, ಭಾಷೆವಾರು ಚುನಾವಣೆಗಿಂತ ಅಭಿವೃದ್ಧಿಪರ ಚಿಂತನೆಗೆ ಒತ್ತು ಕೊಟ್ಟಿದ್ದೇವೆ ಎಂದರು. ಇದರೊಂದಿಗೆ ಕನ್ನಡಿಗರನ್ನು ಕಡೆಗಣಿಸಿ ಮರಾಠಿ ಭಾಷಿಕರಿಗೆ ಮಣೆ ಹಾಕಿದ್ದಕ್ಕೆ ಸಮರ್ಥಿಸಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು, ಬೆಳಗಾವಿ ಮಹಾನಗರಪಾಲಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ನೂತನ ಮಹಾಪೌರರಾದ ಶ್ರೀಮತಿ ಶೋಭಾ ಪಾಯಪ್ಪಾ ಸೋಮನಾಚೆ ಮತ್ತು ಉಪಮಹಾಪೌರರಾದ ಶ್ರೀಮತಿ ರೇಷ್ಮಾ ಪ್ರವೀಣ್ ಪಾಟೀಲ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದೆ.