ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇನ್​ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್: ಏನಿದು ಸಿಸ್ಟಮ್? ಇಲ್ಲಿದೆ ವಿವರ

|

Updated on: Oct 08, 2023 | 12:35 PM

ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಗುರುವಾರ ತನ್ನ ರನ್‌ವೇಗಾಗಿ ವರ್ಗ-I ಇನ್​ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅನ್ನು ಅಳವಡಿಸಿದೆ. ಇದರ ಸೌಲಭ್ಯದ ಸ್ಥಾಪನೆಗೆ ಒಟ್ಟು ವೆಚ್ಚ 12.38 ಕೋಟಿ ರೂ. ಆಗಿದೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇನ್​ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್: ಏನಿದು ಸಿಸ್ಟಮ್? ಇಲ್ಲಿದೆ ವಿವರ
ಬೆಳಗಾವಿ ವಿಮಾನ ನಿಲ್ದಾಣ
Image Credit source: EPS
Follow us on

ಬೆಳಗಾವಿ, ಅ.8: ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ (Belagavi Airport) ಹೆಚ್ಚುತ್ತಿರುವ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಗುರುವಾರ ರನ್‌ವೇಗಾಗಿ ಒಟ್ಟು ವೆಚ್ಚ 12.38 ಕೋಟಿ ವೆಚ್ಚದಲ್ಲಿ ವರ್ಗ-I ಇನ್​ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಅನ್ನು ಅಳವಡಿಸಿದೆ.

ಇನ್ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ (ಐಎಲ್​ಎಸ್​) ಎಂಬುದು ಆಧುನಿಕ ತಂತ್ರಜ್ಞಾನವಾಗಿದ್ದು, ದಟ್ಟವಾದ ಮೋಡ, ಭಾರೀ ಮಳೆ, ಮಂಜು ಮುಸುಕಿದ ವಾತಾವರಣವಿದ್ದರೂ ಸುಲಭವಾಗಿ ಹಾಗೂ ಸುರಕ್ಷಿತವಾಗಿ ವಿಮಾನವನ್ನು ಇಳಿಸಬಹುದು.

ಇನ್​ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಒಂದು ನಿಖರವಾದ ರೇಡಿಯೋ ನ್ಯಾವಿಗೇಷನ್ ಸಿಸ್ಟಮ್ ಆಗಿದ್ದು, ರಾತ್ರಿಯಲ್ಲಿ ಅಥವಾ ಕೆಟ್ಟ ಹವಾಮಾನದಲ್ಲಿ ರನ್​ವೇಗೆ ವಿಮಾನಗಳನ್ನು ಇಳಿಸಲು ಮಾರ್ಗದರ್ಶನವನ್ನು ನೀಡುತ್ತದೆ.

ಇದನ್ನೂ ಓದಿ: ಬೆಳಗಾವಿ ಟು ದೆಹಲಿಗೆ ವಿಮಾನ ಸೇವೆ ಮತ್ತೆ ಆರಂಭ, ಪ್ರಯಾಣಿಕರಿಗೆ ಕನ್ನಡದಲ್ಲೇ ಸ್ವಾಗತ

ಲ್ಯಾಂಡಿಂಗ್ ವಿಧಾನದ ಸಮಯದಲ್ಲಿ ಪೈಲಟ್‌ಗಳಿಗೆ ಲಂಬ ಮತ್ತು ಅಡ್ಡ ಮಾರ್ಗದರ್ಶನವನ್ನು ಒದಗಿಸಲು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಎರಡು ರೇಡಿಯೋ ಕಿರಣಗಳನ್ನು ಬಳಸಿಕೊಳ್ಳುತ್ತದೆ. ಬೆಳಗಾವಿಯಂತಹ ವಿಮಾನ ನಿಲ್ದಾಣಗಳಲ್ಲಿ ಪೈಲಟ್‌ಗಳಿಗೆ ಬಹಳ ಸಹಾಯಕವಾಗಿದೆ.

ಈ ವರ್ಷ ಜುಲೈ 31 ರಂದು ಇಂಡಿಗೋ ಏರ್‌ಲೈನ್ಸ್ ನಿರ್ವಹಿಸುವ ಹೈದರಾಬಾದ್‌ನ A320 ವಿಮಾನದಿಂದ ಸ್ಥಾಪಿಸಲಾದ ILS ನ ಪ್ರಾಯೋಗಿಕ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Sun, 8 October 23