ಬೆಳಗಾವಿಯಲ್ಲಿ ಟ್ರೈನಿಂಗ್‌ ಮುಗಿಸಿದ ಏರ್​ಮೆನ್‌ಗಳ ಚಿತ್ತ ದೇಶದ ಗಡಿ ಕಾಯುವತ್ತ!

ಬೆಳಗಾವಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣವಿದೆ. ಈ ನಡುವೆಯೇ ಹೊಸದಾಗಿ ಭಾರತೀಯ ವಾಯುಸೇನೆಗೆ ಮತ್ತಷ್ಟು ಏರ್​ಮೆನ್‌ಗಳು ಸೇರಿಕೊಳ್ಳುವ ಮೂಲಕ ಭಾರತೀಯ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ. ಹೌದು, ಇಂಡಿಯನ್ ಏರ್​ಫೋರ್ಸ್​ಗೆ ಆಯ್ಕೆಯಾಗಿರುವ 3325ಜನರಿಗೆ ಆರು ತಿಂಗಳ ಕಾಲ ಎಲ್ಲಾ ರೀತಿಯ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಶನಿವಾರ ನಡೆದ ಪ್ರಶಿಕ್ಷಣಾರ್ಥಿಗಳ ಪಾಸಿಂಗ್ ಪರೇಡ್‌ನಲ್ಲಿ ಒಟ್ಟು 3325 ತರಬೇತಿದಾರರು ತಮ್ಮ ತರಬೇತಿಯನ್ನ ಪೂರ್ಣಗೊಳಿಸಿ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಲು ಯೋಧರಾಗಿ ಸಜ್ಜಾಗಿದ್ದಾರೆ. ಏರ್‌ ಕಮಾಂಡರ್‌ […]

ಬೆಳಗಾವಿಯಲ್ಲಿ ಟ್ರೈನಿಂಗ್‌ ಮುಗಿಸಿದ ಏರ್​ಮೆನ್‌ಗಳ ಚಿತ್ತ ದೇಶದ ಗಡಿ ಕಾಯುವತ್ತ!
Follow us
Guru
| Updated By:

Updated on: Jun 20, 2020 | 7:01 PM

ಬೆಳಗಾವಿ: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣವಿದೆ. ಈ ನಡುವೆಯೇ ಹೊಸದಾಗಿ ಭಾರತೀಯ ವಾಯುಸೇನೆಗೆ ಮತ್ತಷ್ಟು ಏರ್​ಮೆನ್‌ಗಳು ಸೇರಿಕೊಳ್ಳುವ ಮೂಲಕ ಭಾರತೀಯ ಸೇನಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.

ಹೌದು, ಇಂಡಿಯನ್ ಏರ್​ಫೋರ್ಸ್​ಗೆ ಆಯ್ಕೆಯಾಗಿರುವ 3325ಜನರಿಗೆ ಆರು ತಿಂಗಳ ಕಾಲ ಎಲ್ಲಾ ರೀತಿಯ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಶನಿವಾರ ನಡೆದ ಪ್ರಶಿಕ್ಷಣಾರ್ಥಿಗಳ ಪಾಸಿಂಗ್ ಪರೇಡ್‌ನಲ್ಲಿ ಒಟ್ಟು 3325 ತರಬೇತಿದಾರರು ತಮ್ಮ ತರಬೇತಿಯನ್ನ ಪೂರ್ಣಗೊಳಿಸಿ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಲು ಯೋಧರಾಗಿ ಸಜ್ಜಾಗಿದ್ದಾರೆ.

ಏರ್‌ ಕಮಾಂಡರ್‌ ಆರ್.ರವಿಶಂಕರ್‌ರಿಂದ ಪಥ ಸಂಚಲನ ವೀಕ್ಷಣೆ ಭಾರತೀಯ ವಾಯುಸೇನೆ ವತಿಯಿಂದ ಹೊಸದಾಗಿ ಆಯ್ಕೆಯಾಗಿದ್ದ ಈ ಏರ್​ಮನ್‌ಗಳಿಗೆ ನೀಡುತ್ತಿದ್ದ ತರಬೇತಿ ಇದೀಗ ಸಂಪೂರ್ಣವಾಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ 3325 ಏರ್ ಮೆನ್​ಗಳು ತರಬೇತಿ ಮುಗಿಸಿ ಹೊರ ಬಂದಿದ್ದಾರೆ. ಶನಿವಾರ ನಡೆದ ಪಾಸಿಂಗ್ ಪರೇಡ್‌ನಲ್ಲಿ ಈ ಎಲ್ಲಾ ಯೋಧರು ತಮಗೆ ನೀಡಿದ್ದ ತರಬೇತಿಯನ್ನ ಪ್ರದರ್ಶನ ಮಾಡಿದರು.

ಏರ್ ಕಮಾಂಡರ್ ಆರ್ ರವಿಶಂಕರ್ ಪಾಸಿಂಗ್ ಪರೇಡ್‌ನ ಮುಖ್ಯ ಅತಿಥಿಯಾಗಿ ಆಗಮಿಸಿದ್ರು. ಪಥಸಂಚಲನ ವೀಕ್ಷಣೆ ಮಾಡಿದರಲ್ಲದೇ, ತರಬೇತಿ ವೇಳೆ ಅತ್ಯುತ್ತಮ ಪರ್‌ಫಾರ್ಮನ್ಸ್‌ ತೋರಿರುವ ನಾಲ್ಕು ಜನರಿಗೆ ಬಹುಮಾನ ವಿತರಿಸಿ ಗೌರವಿಸಿದರು.

ಕೊರೊನಾ ಬಗ್ಗೆ ಜಾಗೃತಿ ಏರ್ ಕಮಾಂಡರ್ ಆರ್.ರವಿಶಂಕರ್ ಮಾತನಾಡಿ, ಕೊರೊನಾದಂಥ ಸಂಕಷ್ಟದ ಸಂದರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಯಾವ ರೀತಿ ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಕರ್ತವ್ಯದ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯವನ್ನ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ತಿಳಿಹೇಳಿದರು. ಜತೆಗೆ ಕೊರೊನಾ ಬರುವ ಮೊದಲಿನ ಸಂದರ್ಭ ಮತ್ತು ಈಗ ಭಾರತೀಯ ವಾಯುಸೇನೆಯಲ್ಲಿ ಹೇಗೆಲ್ಲಾ ಬದಲಾವಣೆಯಾಗಿದೆ, ಯಾವ ರೀತಿಯಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ವಿವರಿಸಿದರು.

ಪಾಸಿಂಗ್‌ ಪರೇಡ್‌ ವೀಕ್ಷಿಸಿದ ಕುಟುಂಬಸ್ಥರು ಇನ್ನು ಪಾಸಿಂಗ್ ಪರೇಡ್‌ ವೀಕ್ಷಿಸಲು ಪ್ರಶಿಕ್ಷಣಾರ್ಥಿಗಳ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಗಮಿಸಿ ಖುಷಿ ಪಟ್ಟರು. ಇನ್ನೊಂದು ವಾರದಲ್ಲಿ ಭಾರತ ಮಾತೆಯ ಸೇವೆಗೆ ಸೇರಲಿರುವ ಪ್ರಶಿಕ್ಷಣಾರ್ಥಿಗಳು ಅಚ್ಚುಕಟ್ಟಾಗಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಣೆ ಮಾಡುತ್ತೇವೆ. ಭಾರತಾಂಬೆ ರಕ್ಷಣೆಗೆ ತಮ್ಮ ಪ್ರಾಣವನ್ನೂ ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. -ಸಹದೇವ ಮಾನೆ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ