ಕುತೂಹಲಕ್ಕೆ ಹೋಗಿ ನೋಡಿದಾಗ ಎದುರಾಗಿದ್ದು ಶಾಕ್​! ಬಾಲ್ಯ ವಿವಾಹ ತಡೆದ ಅಕ್ಕ ಪಡೆ

ಬೆಳಗಾವಿಯಲ್ಲಿ ಅಕ್ಕ ಪಡೆ ಕೇವಲ ಎರಡು ದಿನಗಳಲ್ಲಿ ಎರಡು ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆದು ಅಪ್ರಾಪ್ತ ಬಾಲಕಿಯರ ರಕ್ಷಣೆ ಮಾಡಿದೆ. ಸದ್ಯ ಅವರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲ್ಯ ವಿವಾಹ ತಡೆಯುವುದರ ಜೊತೆಗೆ, ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ರಕ್ಷಣೆಗೂ ಅಕ್ಕ ಪಡೆ ಮುಂದಾಗಿದೆ.

ಕುತೂಹಲಕ್ಕೆ ಹೋಗಿ ನೋಡಿದಾಗ ಎದುರಾಗಿದ್ದು ಶಾಕ್​! ಬಾಲ್ಯ ವಿವಾಹ ತಡೆದ ಅಕ್ಕ ಪಡೆ
ಬಾಲ್ಯ ವಿವಾಹ ತಡೆದ ಅಕ್ಕ ಪಡೆ
Image Credit source: tv9 kannada
Edited By:

Updated on: May 06, 2026 | 3:21 PM

ಬೆಳಗಾವಿ, ಮೇ 06: ನಗರದಲ್ಲಿ (Belagavi) ಅಕ್ಕ ಪಡೆ ಕಾರ್ಯಾಚರಣೆ ನಡೆಸಿ ಎರಡು ಬಾಲ್ಯ ವಿವಾಹವನ್ನು (child marriage) ತಡೆದಿರುವಂತಹ ಘಟನೆ ನಡೆದಿದೆ. ಬಾಲ್ಯ ವಿವಾಹ ಅಪರಾಧ ಅಂತಾ ಗೊತ್ತಿದ್ದರೂ ಪೋಷಕರು ಮದುವೆಗೆ ಮುಂದಾಗಿದ್ದರು. ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಅಕ್ಕ ಪಡೆ ಬಾಲ್ಯ ವಿವಾಹವನ್ನು ನಿಲ್ಲಿಸಿ 13 ಮತ್ತು 17 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರ ರಕ್ಷಣೆ ಮಾಡಿದ್ದಾರೆ. ಸದ್ಯ ಅಕ್ಕ ಪಡೆಯ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಬಾಲ್ಯ ವಿವಾಹಕ್ಕೆ ಮುಂದಾಗಿದ್ದ ಪೋಷಕರು
  • ಕಾರ್ಯಾಚರಣೆ ನಡೆಸಿ ಬಾಲ್ಯ ವಿವಾಹ ತಡೆದ ಅಕ್ಕ ಪಡೆ
  • ಅಕ್ಕ ಪಡೆ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಮೆಚ್ಚುಗೆ
  • ಬೆಳಗಾವಿ ನಗರದಲ್ಲಿ‌ ಹೆಣ್ಣು ಮಕ್ಕಳ ರಕ್ಷಣೆಗೆ ಅಕ್ಕ ಪಡೆ ನಿಯೋಜನೆ

ನಡೆದಿದ್ದೇನು?

ಬೆಳಗಾವಿಯ ವಂಟಮೂರಿ ಕಾಲೋನಿಯಲ್ಲಿ ಪೋಷಕರು 17 ವರ್ಷದ ಬಾಲಕಿ ಮದುವೆ ಮಾಡುತ್ತಿದ್ದರು. ಕುತೂಹಲಕ್ಕೆ ಏನು ಕಾರ್ಯಕ್ರಮ ಅಂತಾ ಅಕ್ಕ ಪಡೆ ಹೋಗಿ ನೋಡಿದಾಗ ಬಾಲ್ಯ ವಿವಾಹ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಪೊಲೀಸ್​ ಎಂಟ್ರಿ: ಹುಡುಗಿಗೆ 18 ತುಂಬಲು ಬಾಕಿ ಇತ್ತು ಕೇವಲ 4 ತಿಂಗಳು

ಇದೇ ರೀತಿಯಾಗಿ ಶಹಾಪುರದಲ್ಲಿ 13 ವರ್ಷದ ಬಾಲಕಿ ಮದುವೆ ಮಾಡುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಅಕ್ಕ ಪಡೆ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಬಾಲ್ಯ ವಿವಾಹ ತಡೆದಿದ್ದಾರೆ. ಸದ್ಯ ಎರಡು ಪ್ರಕರಣದಲ್ಲಿ ಬಾಲಕಿಯರ ತಂದೆ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗಿದೆ. ಸದ್ಯ ಬಾಲ್ಯ ವಿವಾಹ ತಡೆದಿದ್ದಕ್ಕೆ ಅಕ್ಕ ಪಡೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೊ ಕೇಸ್: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಇನ್ನು ಬೆಳಗಾವಿ ನಗರದಲ್ಲಿ‌ ಪುಂಡ ಪೋಕರಿಗಳಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅಕ್ಕ ಪಡೆ ನಿಯೋಜನೆ ಮಾಡಲಾಗಿದ್ದು, ಶಾಲಾ-ಕಾಲೇಜು, ಬಸ್ ನಿಲ್ದಾಣ, ಮಾರುಕಟ್ಟೆ ಹೀಗೆ ಪ್ರಮುಖ ಸ್ಥಳಗಳಲ್ಲಿ ಅಕ್ಕ ಪಡೆ ಸುತ್ತಾಟ ನಡೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us