ಬೆಳಗಾವಿ: ಸಾಲ ಹಿಂದಿರುಗಿಸದ್ದಕ್ಕೆ ಯೋಧನ ಮೇಲೆ ಗುಂಡು ಹಾರಿಸಿದ ಮತ್ತೊಬ್ಬ ಯೋಧ

| Updated By: Rakesh Nayak Manchi

Updated on: Sep 26, 2023 | 9:57 PM

ಕೊಟ್ಟ ಸಾಲ ಹಿಂದಿರುಗಿಸದಿದ್ದಕ್ಕೆ ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಸಾಲ ಹಿಂದಿರುಗಿಸದ್ದಕ್ಕೆ ಯೋಧನ ಮೇಲೆ ಗುಂಡು ಹಾರಿಸಿದ ಮತ್ತೊಬ್ಬ ಯೋಧ
ಸಾಲ ಹಿಂದಿರುಗಿಸದ್ದಕ್ಕೆ ಯೋಧನ ಮೇಲೆ ಗುಂಡು ಹಾರಿಸಿದ ಮತ್ತೊಬ್ಬ ಯೋಧ
Follow us on

ಬೆಳಗಾವಿ, ಸೆ.26: ಕೊಟ್ಟ ಸಾಲ ಹಿಂದಿರುಗಿಸದಿದ್ದಕ್ಕೆ ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಸಪ್ಪ ಬಂಬರಗಾ (32) ಗಾಯಾಳು ಯೋಧನಾಗಿದ್ದು, ನಂಜುಂಡಿ ಬೂದಿಹಾಳ (32) ಬಂಧಿತ ಯೋಧರಾಗಿದ್ದಾರೆ. ಸದ್ಯ ಬಸಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಬೆಳಗಾವಿ: ಕೆಎಸ್​​ಆರ್​ಟಿಸಿ ಬಸ್ ಪಲ್ಟಿ, ವಿದ್ಯಾರ್ಥಿಗಳು ಸೇರಿ 20 ಪ್ರಯಾಣಿಕರಿಗೆ ಗಾಯ

ನಂಜುಂಡಿ ಬೂದಿಹಾಳ ಅವರು ಬಸಪ್ಪ ಬಂಬರಗಾ ಅವರಿಗೆ ಒಂದು ಲಕ್ಷ ರೂಪಾಯಿ ಸಾಲ ನೀಡಿದ್ದರು. ಈ ಹಣವನ್ನು ಬಸಪ್ಪ ಅವರು ಮರುಪಾವತಿಸಿಲ್ಲ. ಈ ವಿಚಾರವಾಗಿ ರಜೆ ಮೇಲೆ ಬಂದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ಪರಸ್ಪರ ಮಾತಿಗೆ ಮಾತು ಬೆಳೆದಾಗ ಕೋಪಗೊಂಡ ನಂಜುಂಡಿ ಲೈಸೆನ್ಸ್ ರಿವಾಲ್ವರ್​ನಿಂದ ಗುಂಡು ಹಾರಿಸಿದ್ದಾರೆ.

ಕೂಡಲೇ ಬಸಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗೋಕಾಕ್ ತಾಲೂಕಿನ ಅಂಕಲಗಿ ಠಾಣಾ ಪೊಲೀಸರು ನಂಜುಂಡಿ ಅವರನ್ನು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ