ಬೆಳಗಾವಿ ಅ.22: ಬೆಳಗಾವಿ ಮಹಾನಗರ ಪಾಲಿಕೆ (Belagavi City Corporation) ಸೂಪರ್ ಸೀಡ್ ವಿಚಾರವಾಗಿ ಸಚಿವ ಹಾಗೂ ಶಾಸಕರ ನಡುವೆ ಬಿಗ್ ಫೈಟ್ ನಡೆದಿದೆ. ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡದುಂಟಿ ವಿರುದ್ಧ ಯುಪಿಎಸ್ಸಿಗೆ ಪತ್ರ ಬರೆಯುತ್ತೇನೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ (Abhay Patil) ಹೇಳಿದ್ದರು. ಈ ವಿಚಾರವಾಗಿ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ (Satish Jarkiholi) ಯುಪಿಎಸ್ಸಿಗೆ ಪತ್ರ ಬರೆದರೇ ಪಾಲಿಕೆ ಸೂಪರ್ ಸೀಡ್ ಮಾಡುತ್ತೇವೆ ಎಂದಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚಿಗೆ ತೆರಿಗೆ ಹೆಚ್ಚಳ ಮಾಡಿ ಠರಾವು ಹೊರಡಿಸಲಾಗಿತ್ತು. ಠರಾವು ಪ್ರತಿಯನ್ನು ಪಾಲಿಕೆ ಆಯುಕ್ತ ಅಶೋಕ ದುಡದುಂಟಿ ತಿದ್ದುಪಡಿ ಮಾಡಿರುವ ಆರೋಪ ಕೇಳಿಬಂದಿದೆ.
ಮಹಾನಗರ ಪಾಲಿಕೆ 2023-24 ಸಾಲಿಗೆ ಅನ್ವಯ ಆಗುವಂತೆ ತೆರಿಗೆ ಹೆಚ್ಚಳ ಮಾಡಿದೆ. ಆದರೆ 2024-25 ಸಾಲಿನ ತೆರಿಗೆ ಹೆಚ್ಚಳ ಎಂದು ಪಾಲಿಕೆ ಆಯುಕ್ತ ಅಶೋಕ ದುಡದುಂಟಿ ರಾಜ್ಯ ಸರ್ಕಾರ ಪತ್ರ ರವಾನೆ ಮಾಡಿದ್ದರು.
ಈ ವಿಚಾರವಾಗಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಾಗೂ ಸದಸ್ಯರು ಸರ್ಕಾರದ ದಿಕ್ಕು ತಪ್ಪಿಸಿ ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್ಗೆ ಯತ್ನಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಪಾಲಿಕೆ ಆಯುಕ್ತ ಅಶೋಕ ದುಡದುಂಟಿಗೆ ಕೆಲ ದಿನಗಳಲ್ಲಿ ಪ್ರಮೋಷನ್ ಸಿಗಲಿದೆ. ಪಾಲಿಕೆ ಆಯುಕ್ತ ಅಶೋಕ ದುಡದುಂಟಿ ಕೆಎಎಸ್ನಿಂದ ಐಎಎಸ್ ಪ್ರಮೋಷನ್ ಆಗಲಿದೆ.
ಇದನ್ನೂ ಓದಿ: ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ, ಅಖಾಡಕ್ಕಿಳಿದ ಸತೀಶ್ ಜಾರಕಿಹೊಳಿ
ಯುಪಿಎಸ್ಸಿಗೆ ಪತ್ರ ಬರೆಯುವ ಮೂಲಕ ಪ್ರಮೋಷನ್ ತಡೆಯಲು ಅಭಯ್ ಪಾಟೀಲ್ ಯತ್ನಿಸಿದ್ದಾರೆ. ಶಾಸಕ ಅಭಯ ಪಾಟೀಲ್ ಪತ್ರ ಬರೆದರೇ ಅದನ್ನೇ ಇಟ್ಟುಕೊಂಡು ಪಾಲಿಕೆ ಸೂಪರ್ ಸೀಡ್ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಮತ್ತು ಸದಸ್ಯರಿಗೆ ಸಚಿವ ಸತೀಶ್ ಜಾರಕಿಹೊಳಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಕಡತ ಕಾಣೆಯಾಗಿವೆ. ಆಸ್ತಿ ಕರ ಹೆಚ್ಚಳ ಮಾಡುವ ಕುರಿತು ಸಹಿ ಮಾಡಿದ್ದ, ಸಾಮಾನ್ಯ ಸಭೆಯಲ್ಲಿ ಅಂಗೀಕಾರವಾಗಿ ಸರ್ಕಾರಕ್ಕೆ ಕಳುಹಿಸಬೇಕಿದ್ದ ದಾಖಲೆ ಕಳ್ಳತನವಾಗಿದೆ. ಈ ಪ್ರಕರಣವನ್ನು ಸತೀಶ್ ಜಾರಕಿಹೊಳಿ ಗಂಭೀರವಾಗಿ ತೆಗೆದುಕೊಂಡಿದ್ದು, ಖುದ್ದು ಮಹಾನಗರ ಪಾಲಿಕೆಗೆ ಅಗಮಿಸಿ ಖಡತ ಮಿಸ್ ಆದ ಬಗ್ಗೆ ಚರ್ಚೆ ನಡೆಸಿ, ಇಂದು 12 ಗಂಟೆ ಒಳಗಾಗಿ ಮೇಯರ್ ಸಹಿ ಮಾಡಿದ ದಾಖಲೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಳಿಕ ಸತೀಶ್ ಜಾರಕಿಹೊಳಿ ಮಾರ್ಕೆಟ್ ಠಾಣೆ ಎಸಿಪಿ, ಸಿಪಿಐ ಇಬ್ಬರನ್ನೂ ಪಾಲಿಕೆಗೆ ಕರೆಯಿಸಿಕೊಂಡು, ತನಿಖೆಗೆ ಸೂಚನೆ ನೀಡಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ