ರಮೇಶ ಜಾರಕಿಹೊಳಿದು ಟುಸ್ಸ್ ಬಾಂಬ್: 16 ಶಾಸಕರನ್ನ ಎಲ್ಲಿ ಕೂಡಿಸ್ತೀರಾ? ಸಹೋದರನಿಗೆ ಟಾಂಗ್ ಕೊಟ್ಟ ಸತೀಶ ಜಾರಕಿಹೊಳಿ!
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು 16ಜನ ಬಿಜೆಪಿಗೆ ಬರ್ತಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದು, ಬಿಜೆಪಿಯಲ್ಲಿ 120ಸೀಟ್ ಇವೆ, ಅವಷ್ಟು ಈಗಾಗಲೇ ಹೌಸ್ ಫುಲ್ ಆಗಿವೆ. ಇನ್ನೂ 16ಜನರನ್ನ ಎಲ್ಲಿ ಕೂಡಿಸುತ್ತೀರಿ ನೀವು ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿ: ಕಾಂಗ್ರೇಸ್ ಪಕ್ಷ ತೊರೆದು 16 ಶಾಸಕರು ಬಿಜೆಪಿಗೆ ಬರ್ತಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ನನ್ನ ಜೊತೆ16 ಕಾಂಗ್ರೇಸ್ ಶಾಸಕರು ಸಂಪರ್ಕದಲ್ಲಿದ್ದಾರೆ. ನಮ್ಮ ಹೈಕಮಾಂಡ ಒಪ್ಪಿದ್ರೆ ನೋಡೋಣ, ಸಧ್ಯ ನಾನು ಯಾರನ್ನು ಟಚ್ ಮಾಡಲ್ಲ ಅಂತಾ ಹೇಳಿದ್ದ ರಮೇಶ ಜಾರಕಿಹೊಳಿ ಹೇಳಿಕೆಗೆ ಸಹೋದರ ಸತೀಶ ಜಾರಕಿಹೊಳಿ ಕಿಡಿಕಾರಿದ್ದು, ರಮೇಶ ಜಾರಕಿಹೊಳಿ ಬಾಂಬ್ ಟುಸ್ಸ್ ಆಗುತ್ತೆ ಎಂದು ಲೇವಡಿ ಮಾಡಿದ್ದಾರೆ.
ಗೋಕಾಕ್ ನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ. ಕಾಂಗ್ರೆಸ್ ಬಿಟ್ಟು 16ಜನ ಬಿಜೆಪಿಗೆ ಬರ್ತಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದು, ಬಿಜೆಪಿಯಲ್ಲಿ 120ಸೀಟ್ ಇವೆ ಅವಷ್ಟು ಈಗಾಗಲೇ ಹೌಸ್ ಫುಲ್ ಆಗಿವೆ. ಇನ್ನೂ 16ಜನರನ್ನ ಎಲ್ಲಿ ಕೂಡಿಸುತ್ತೀರಿ ನೀವು ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೇಸ್ ಪಕ್ಷ ಬಿಟ್ಟು ಬರೋರನ್ನ ಟಾಪ್ ಮೇಲಾ, ಕೆಳಗಾ, ಡಿಕ್ಕಿಯಲ್ಲಾ, ಎಲ್ಲಿ ಕೂಡಿಸುತ್ತೀರಿ ಅವರನ್ನ ಎಂದು ಲೇವಡಿ ಮಾಡಿದ್ದಾರೆ,
ರಮೇಶ ಜಾರಕಿಹೊಳಿ ಮೇಲಿಂದ ಮೇಲೆ ಹೊಸ ಹೊಸ ಬಾಂಬ್ ಹಾಕುತ್ತಿರುತ್ತಾರೆ, ಕೆಲವು ಬಾಂಬ್ ಸಿಡಿಯುತ್ತೆ ಇನ್ನೂ ಕೆಲವು ಸ್ಫೋಟವಾಗಲ್ಲ. ನಾವೂ ರಮೇಶ ಜಾರಕಿಹೊಳಿ ಬಾಂಬ್ ಸಿಡಿಯುತ್ತೆ ಅಂತಾ ಕಿವಿ ಮುಚ್ಚಿಕೊಂಡು ನಿಲ್ಲಬೇಕು ಅಷ್ಟೇ ಎಂದು ವ್ಯಂಗವಾಡಿದ್ದಾರೆ. ರಮೇಶ ಜಾರಕಿಹೊಳಿ ಟೈಮ್ ಪಾಸ್ ಮಾಡ್ತಿರುತ್ತಾರೆ. ರಮೇಶ ಮತ್ತು ಲಖನ್ ರಾಜಕೀಯ ವ್ಯಾಪಾರ ಮಾಡ್ತಾ ಕೂರುವವರು. ಇವರೇನೂ ಸಮಾಜ ಸೇವೆ ಮಾಡುವವರಲ್ಲವೆಂದು ತಿವಿದಿದ್ದಾರೆ. ರಮೇಶ ಮತ್ತು ಲಖನ್ ಜಾರಕಿಹೊಳಿ ಬಿಜೆಪಿಗೆ ಹೋಗ್ತೆವಿ ಅಂತಾ ಕಾಂಗ್ರೆಸ್ ನವರಿಗೆ ಬ್ಲ್ಯಾಕ್ ಮೇಲ್ ಮಾಡ್ತಾರೆ. ಕಾಂಗ್ರೆಸ್‌ಗೆ ಹೋಗ್ತೆವಿ ಅಂತಾ ಬಿಜೆಪಿಯವರಿಗೆ ಬ್ಲ್ಯಾಕ್ ಮೇಲ್ ಮಾಡ್ತಾರೆ ಎಂದು ಸಹೋದರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ರಮೇಶ ಜಾರಕಿಹೊಳಿ ಪಕ್ಷಾಂತರ ಪರ್ವದ ಬಗ್ಗೆ ಮಾತನಾಡಿದ ಬೆನ್ನಲ್ಲೆ ಕಾಂಗ್ರೇಸ ನಾಯಕರು ಸಹ ತಮ್ಮ ಸಂಪರ್ಕದಲ್ಲಿ ಹಲವು ಬಿಜೆಪಿ ಶಾಸಕರು ಇದ್ದಾರೆ. ಅವರನ್ನ ಹೆಸರನ್ನ ಈಗ ಬಹಿರಂಗ ಪಡಿಸಲು ಸಾಧ್ಯವಿಲ್ಲವೆಂದು ತಿರುಗೇಟು ನೀಡಿದ್ದಾರೆ, ಈ ಮಧ್ಯೆ ರಮೇಶ ಜಾರಕಿಹೊಳಿ ನೀಡಿದ ಹೇಳಿಕೆಗೆ ಸ್ವತಃ ಅವರ ಸಹೋದರ ಸತೀಶ ಜಾರಕಿಹೊಳಿ ತಿರುಗೇಟು ನೀಡುವ ಮೂಲಕ ರಮೇಶ ಜಾರಕಿಹೊಳಿಯದ್ದು ಟುಸ್ಸ್ ಬಾಂಬ್ ಎಂದು ಲೇವಡಿ ಮಾಡಿ ಕಾಲೆಳೆದಿದ್ದಾರೆ.
ಇದನ್ನೂ ಓದಿ;
CM Ibrahim: ಇಬ್ರಾಹಿಂನ ಯಾರೂ ತಬ್ಬಲಿ ಮಾಡಿಲ್ಲ, ಮನವೊಲಿಕೆಗೆ ಪ್ರಯತ್ನಿಸುವೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್